Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ

ಇದೀಗ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಕೆಜಿಎಫ್ 2 ಡೈಲಾಗ್​ ಹೊಡೆದಿದ್ದಾರೆ. ಇದು ಸಖತ್ ವೈರಲ್ ಆಗಿತ್ತು. ಈ ಡೈಲಾಗ್​ಅನ್ನು ಇದೀಗ ಶಿಲ್ಪಾ ಶೆಟ್ಟಿ ಕೂಡ ಹೇಳಿದ್ದಾರೆ.

Written by - Chetana Devarmani | Last Updated : Apr 25, 2022, 02:53 PM IST
  • ಸದ್ಯ ಎಲ್ಲೆಲ್ಲೂ ಕೆಜಿಎಫ್ 2 ಸಿನಿಮಾದ್ದೇ ಮಾತು
  • ರಾಕಿಭಾಯ್ ಸ್ಟೈಲ್‌ನ್ನು ಎಲ್ಲರೂ ಕಾಪಿ ಮಾಡುತ್ತಿದ್ದಾರೆ
  • ಇನ್​​ಸ್ಟಾಗ್ರಾಮ್​ನಲ್ಲಿ ಯಶ್ ಡೈಲಾಗ್​ಗೆ ಸೆಲೆಬ್ರಿಟಿಗಳ ರೀಲ್ಸ್​
  • ಕೆಜಿಎಫ್ 2 ಡೈಲಾಗ್​ ಹೊಡೆದ ನಟಿ ಶಿಲ್ಪಾ ಶೆಟ್ಟಿ
Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ  title=
ನಟಿ ಶಿಲ್ಪಾ ಶೆಟ್ಟಿ

ಸದ್ಯ ಎಲ್ಲೆಲ್ಲೂ ಕೆಜಿಎಫ್ 2 ಸಿನಿಮಾದ್ದೇ ಮಾತು. ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಾಕಿಭಾಯ್ ಸ್ಟೈಲ್‌ನ್ನು ಎಲ್ಲರೂ ಕಾಪಿ ಮಾಡುತ್ತಿದ್ದಾರೆ. ಈ ಸಿನಿಮಾದ ಡೈಲಾಗ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಟ್ರೆಂಡಿಂಗ್​ನಲ್ಲಿವೆ. ಇನ್​​ಸ್ಟಾಗ್ರಾಮ್​ನಲ್ಲಿ ಯಶ್ ಡೈಲಾಗ್​ಗೆ ಸೆಲೆಬ್ರಿಟಿಗಳು ರೀಲ್ಸ್​ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸಾಕಷ್ಟು ವೀವ್ಸ್‌ ಕೂಡ ಪಡೆಯುತ್ತಿವೆ. ಇದೀಗ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಕೆಜಿಎಫ್ 2 ಡೈಲಾಗ್​ ಹೊಡೆದಿದ್ದಾರೆ. 

ಇದನ್ನೂ ಓದಿ: ಕೆಜಿಎಫ್ 2 ಚಿತ್ರವನ್ನು ವ್ಯಂಗವಾಡಿದ್ರಾ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ?

ಬಾಲಿವುಡ್ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು ಪಾಪರಾಜಿಗಳು ಫೋಟೋಗೆ ಪೋಸ್​ ನೀಡಲು, ಟ್ರೆಂಡಿಂಗ್​ನಲ್ಲಿರುವ ಡೈಲಾಗ್ ಹೇಳಲು ಕೋರುತ್ತಾರೆ. ಇಲ್ಲೂ ಹಾಗೇ ಆಗಿದೆ. ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ಟ್ರೆಂಡಿಂಗ್​ನಲ್ಲಿರುವ ಡೈಲಾಗ್ ಹೇಳಲು ಹಾಗೂ ಫೋಟೋಗೆ ಪೋಸ್‌ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಶಿಲ್ಪಾ ಶೆಟ್ಟಿ ಕೆಜಿಎಫ್ 2ನ ಫೇಮಸ್ ಡೈಲಾಗ್ ಹೊಡೆದಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Voompla (@voompla)

 

ಕೆಜಿಎಫ್‌2 ಸಿನಿಮಾದಲ್ಲಿ ರಾಕಿಭಾಯ್‌ ಹೇಳಿದ "ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್​.. ಐ ಡೋಂಟ್​ ಲೈಕ್ ಇಟ್. ಬಟ್ ವಾಯ್ಲೆನ್ಸ್ ಲೈಕ್ಸ್ ಮಿ, ಐ ಕಾಂಟ್‌ ಅವಾಯ್ಡ್‌" ಎಂದು ಡೈಲಾಗ್ ಹೊಡೆಯುತ್ತಾರೆ. ಇದು ಸಖತ್ ವೈರಲ್ ಆಗಿತ್ತು. ಈ ಡೈಲಾಗ್​ಅನ್ನು ಇದೀಗ ಶಿಲ್ಪಾ ಶೆಟ್ಟಿ ಕೂಡ ಹೇಳಿದ್ದಾರೆ.

ಇದನ್ನೂ ಓದಿ: KGF ಚಾಪ್ಟರ್‌ 3 ನಲ್ಲಿ ನಟಿಸುತ್ತಾರಾ ಡಾರ್ಲಿಂಗ್‌ ಪ್ರಭಾಸ್!?

ಶಿಲ್ಪಾ ಶೆಟ್ಟಿ ಹಾಗೂ ರವೀನಾ ಟಂಡನ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ರವೀನಾ ಅವರು ಕೆಜಿಎಫ್​ 2 ನಲ್ಲಿ ಮಾಡಿರುವ ರಮಿಕಾ ಸೇನ್ ಪಾತ್ರವನ್ನು ಟ್ವೀಟ್ ಮಾಡುವ ಮೂಲಕ ಶಿಲ್ಪಾ ಹೊಗಳಿದ್ದರು.  

300 ಕೋಟಿ ರೂಪಾಯಿ ಬಾಚಿದ ‘ಕೆಜಿಎಫ್ 2’:

ಏಪ್ರಿಲ್‌ 14ರಂದು ವಿಶ್ವಾದ್ಯಂತ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್​ 2 ಮೊದಲ ದಿನ ಹಿಂದಿ ವರ್ಷನ್​ನಿಂದ 53.95 ಕೋಟಿ ರೂಪಾಯಿ ಕಲೆ ಹಾಕಿತು. ಅಂದಿನಿಂದ  ಇಂದಿನವರೆಗೂ ರಾಕಿಭಾಯ್‌ ಬಾಕ್ಸ್‌ ಆಫೀಸ್‌ ಸುಲ್ತಾನನಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News