ಕೇವಲ ಒಂದು ವೀಡಿಯೊದಿಂದ ವೃತ್ತಿಜೀವನ ನಾಶ.. ಬಾಲಿವುಡ್‌ ತ್ಯಜಿಸಿದ ಖ್ಯಾತ ನಟಿ ಈಕೆ!

Bollywood Actress Riya Sen: ಪ್ರಸಿದ್ಧ ಬಾಲಿವುಡ್ ನಟಿ.. ಆದರೆ ಆ ಒಂದು ವೀಡಿಯೊ ಅವರ ಸಂಪೂರ್ಣ ಸಿನಿ ವೃತ್ತಿಜೀವನವನ್ನೇ ಹಾಳುಮಾಡಿತು.. ಹಾಗಾದರೆ ಆ ನಾಯಕಿ ಯಾರೆಂದು ಇದೀಗ ನೋಡೋಣ.. 

Written by - Savita M B | Last Updated : Dec 18, 2023, 01:34 PM IST
  • ಅನೇಕ ಸೂಪರ್‌ ಹಿಟ್‌ ಚಿತತ್ರಗಳನ್ನು ನೀಡಿದ ಈ ನಟಿ
  • ಈ ನಟಿ ಒಂದು ದೊಡ್ಡ ಅಪಘಾತದ ನಂತರ ಬಾಲಿವುಡ್‌ ಚಿತ್ರರಂಗವನ್ನೇ ತೊರೆಯಬೇಕಾಯಿತು
  • ಆದರೂ ನಟಿ ಇನ್ನೂ ಅನೇಕ ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ...
ಕೇವಲ ಒಂದು ವೀಡಿಯೊದಿಂದ ವೃತ್ತಿಜೀವನ ನಾಶ.. ಬಾಲಿವುಡ್‌ ತ್ಯಜಿಸಿದ ಖ್ಯಾತ ನಟಿ ಈಕೆ!  title=

Riya Sen: ಬಾಲಿವುಡ್ ನಟಿ ರಿಯಾ ಸೇನ್ ಬಾಲ್ಯದಿಂದಲೇ ನಟಿಸಲು ಪ್ರಾರಂಭಿಸಿದರು, ಆದರೆ ಅವರು ಬೆಳೆದ ನಂತರ ಅವರು ದೊಡ್ಡ ಪರದೆಯ ಮೇಲೆ ಜನಪ್ರಿಯರಾದರು.. ಅನೇಕ ಸೂಪರ್‌ ಹಿಟ್‌ ಚಿತತ್ರಗಳನ್ನು ನೀಡಿದ ಈ ನಟಿ ಒಂದು ದೊಡ್ಡ ಅಪಘಾತದ ನಂತರ ಬಾಲಿವುಡ್‌ ಚಿತ್ರರಂಗವನ್ನೇ ತೊರೆಯಬೇಕಾಯಿತು.. ಆದರೂ ನಟಿ ಇನ್ನೂ ಅನೇಕ ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ... 

ರಿಯಾ ಸೇನ್ ಹಿಂದಿ ಮಾತ್ರವಲ್ಲದೆ ಬಂಗಾಳಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 42ರಲ್ಲೂ ಆಕೆಯ ಸೌಂದರ್ಯ ಅಚ್ಚಳಿಯದೇ ಉಳಿದಿದ್ದು, ಆಕೆಯ ಫಿಟ್ ನೆಸ್ ನೋಡಿ ವಯಸ್ಸನ್ನು ಯಾರೂ ಊಹಿಸಲು ಸಾಧ್ಯವಿಲ್ಲ. 

ಇದನ್ನೂ ಓದಿ-BBK10: ವಿನಯ್‌ ಮೇಲಿನ ಕೋಪಕ್ಕೆ ನಾನು ಬಲಿಯಾದೆ..! ಮನೆಯಿಂದ ಹೊರಬಂದ ಪವಿ ಹೀಗಂದಿದ್ಯಾಕೆ?

1998 ರಲ್ಲಿ 17 ನೇ ವಯಸ್ಸಿನಲ್ಲಿ ಫಲ್ಗುಣಿ ಪಾಠಕ್ ಅವರ ಮ್ಯೂಸಿಕ್ ವಿಡಿಯೋ 'ಯಾದ್ ಪಿಯಾ ಕಿ ಆನೆ ಲಗೀ' ನಲ್ಲಿ ಕಾಣಿಸಿಕೊಂಡ ರಿಯಾ ಮೊದಲ ಬಾರಿಗೆ ಮಾಡೆಲ್ ಆಗಿ ಗುರುತಿಸಲ್ಪಟ್ಟರು. ಅಂದಿನಿಂದ, ಅವರು ಅನೇಕ ಚಲನಚಿತ್ರಗಳು, ಮ್ಯೂಸಿಕಲ್ ವೀಡಿಯೊಗಳು ಮತ್ತು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರೀನಾ ಸೇನ್ ರಾಜಮನೆತನದಿಂದ ಬಂದವರು. ಅವರ ತಂದೆ ಭರತ್ ದೇವ್ ವರ್ಮಾ ತ್ರಿಪುರಾದ ರಾಜಮನೆತನಕ್ಕೆ ಸೇರಿದವರು. ಅವರು ಕೂಚ್ ಬೆಹಾರ್ ರಾಜಕುಮಾರಿ ಇಲಾ ದೇವಿಯ ಮಗ ಮತ್ತು ಜೈಪುರದ ಮಹಾರಾಣಿ ಗಾಯತ್ರಿ ದೇವಿಯ ಸೋದರಳಿಯ. ರೀನಾ ಅವರ ತಾಯಿ ಮುನ್ಮುನ್ ಸೇನ್ ಮತ್ತು ಅಜ್ಜಿ ಸುಚಿತ್ರಾ ಸೇನ್ ಹಿರಿಯ ನಟಿಯರಾಗಿದ್ದರು.

ರಿಯಾ 5 ವರ್ಷದವಳಾಗಿದ್ದಾಗ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.. ಎನ್ ಚಂದ್ರು ನಿರ್ದೇಶಿಸಿದ 2001 ರ ಕಡಿಮೆ-ಬಜೆಟ್ ಹಾಸ್ಯ ಚಲನಚಿತ್ರ 'ಸ್ಟೈಲ್' ನಲ್ಲಿ ಅವರು ಪ್ರಮುಖ ನಟಿಯಾಗಿ ನಟಿಸಿ.. ಅವರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು 'ಝಂಕಾರ್ ಬೀಟ್ಸ್', 'ದಿಲ್ ವಿಲ್ ಪ್ಯಾರ್ ವ್ಯಾರ್', 'ಕಯಾಮತ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು...ಮಾಧ್ಯಮ ವರದಿಗಳನ್ನು ನಂಬುವುದಾದರೆ, ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಜೊತೆಗೆ ರಿಯಾ ಹೆಸರು ಕೂಡ ತಳುಕು ಹಾಕಿಕೊಂಡಿದೆ. 

ಆದರೆ 2005 ರಲ್ಲಿ ರಿಯಾ ಮತ್ತು ನಟ ಅಶ್ಮಿತ್ ಪಟೇಲ್ ನಡುವಿನ ಸಂಬಂಧದ ಸುದ್ದಿಯು ವೇಗವಾಗಿ ಹರಡಾಲಾರಂಭಿಸಿತು.. ಅದೇ ಈ ಸಮಯದಲ್ಲಿ, ಅವರಿಬ್ಬರ ಎಂಎಂಎಂ ಸೋರಿಕೆಯಾಯಿತು.. ನಂತರ ಅನೇಕ ವಿವಾದಗಳು ನಡೆದವು. 

ಇದನ್ನೂ ಓದಿ-"ನೆಲೆಸಿಗದ ನಾಯಿ ನರಿ ಬೊಗಳಿದರೆ ಇತಿಹಾಸ ಬದಲಾಗುತ್ತ?" ಚೇತನ್‌ ವಿರುದ್ದ ಗುಡುಗಿದ ಜಗ್ಗೇಶ್!

ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ರಿಯಾ ಉದ್ದೇಶಪೂರ್ವಕವಾಗಿ ಗಮನ ಸೆಳೆಯಲು ತನ್ನ MMM ಅನ್ನು ಸೋರಿಕೆ ಮಾಡಿದ್ದಾರೆ ಎಂದು ಕೆಲವರು ನಟಿಯನ್ನು ಆರೋಪಿಸಿದರು, ಆದರೆ ರಿಯಾ ಮತ್ತು ಅಶ್ಮಿತ್ ಇಬ್ಬರೂ ಈ ವೀಡಿಯೊವನ್ನು ನಕಲಿ ಎಂದಿದ್ದಾರೆ..

ರಿಯಾ ಮತ್ತು ಅಶ್ಮಿತ್ ಅಭಿನಯದ ಎಂಎಂಎಂ ಫೇಕ್ ಆದರೆ ಅದು ಲೀಕ್ ಆದ ತಕ್ಷಣ ನಟಿಯ ವೃತ್ತಿಜೀವನ ಸಂಪೂರ್ಣ ನಾಶವಾಯಿತು ಮತ್ತು ರಿಯಾ ಬಾಲಿವುಡ್‌ನಿಂದ ದೂರ ಉಳಿಯಬೇಕಾಯಿತು, ರಿಯಾ ಸದ್ಯ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಮಾಡದಿದ್ದರೂ, ಇತರ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News