'Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ....' ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?

Bollowood Actress Preeti Zinta On Bollywood: ಬಾಲಿವುಡ್ ನಟಿ ಪ್ರೀತಿ ಜಿಂಟಾ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟಿ ಈಗ ಚಲನಚಿತ್ರಗಳಲ್ಲಿ ಕಡಿಮೆ ಸಕ್ರಿಯವಾಗಿದ್ದರೂ, ಅವರು ತಮ್ಮ ಹೇಳಿಕೆಗಳಿಂದ ಪ್ರತಿದಿನ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ.   

Written by - Nitin Tabib | Last Updated : Apr 19, 2024, 06:16 PM IST
  • ಗುಡ್ ಸೆಫ್ ವ್ಯಕ್ತಿಯ ಜೊತೆಗೆ ಮದುವೆಯಾದ ನಂತರ, ಪ್ರೀತಿ ಜಿಂಟಾ ಉದ್ಯಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ.
  • ಮದುವೆಯಾದ ಬಳಿಕ ಪ್ರೀತಿ ವಿದೇಶಕ್ಕೆ ತೆರಳಿದ್ದಾರೆ.
  • ಇದಾದ ನಂತರ ಸರೋಗೆಸಿ ಸಹಾಯದಿಂದ ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ.
'Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ....' ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ? title=

Preeti Zinta On Bollywood: ಇತ್ತೀಚೆಗೆ ನಟಿಯ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಬಾಲಿವುಡ್ ಹುಡುಗಿಯರಿಗೆ ಸುರಕ್ಷಿತವಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಡಿಂಪಲ್ ಹುಡುಗಿ ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಅವರು ಬಾಲಿವುಡ್ ಹುಡುಗಿಯರಿಗೆ ಅತ್ಯಂತ ಅಸುರಕ್ಷಿತ ಸ್ಥಳ ಎಂದು ಹೇಳಿದ್ದಾರೆ. ಯಾವುದೇ ಹಿನ್ನೆಲೆಯಿಲ್ಲದೆ ಬಾಲಿವುಡ್‌ಗೆ ಬರುವವರಿಗೆ ಈ ಸ್ಥಳ ಸರಿಯಿಲ್ಲ ಎನ್ನುತ್ತಾರೆ ನಟಿ. ನಟಿ ಯಾಕೆ ಹೀಗೆ ಹೇಳಿದ್ದಾರೆ ಎಂದು ತಿಳಿಯೋಣ. 

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾತನಾಡಿರುವ ಪ್ರೀತಿ ಜಿಂಟಾ, 'ನಾನು ಚಿತ್ರದ ಹಿನ್ನೆಲೆ ಬಗ್ಗೆ ಹೇಳುತ್ತಿಲ್ಲ, ಆದರೆ ಎಲ್ಲರ ಬಗ್ಗೆ. ಏಕೆಂದರೆ ಅನೇಕರು ಪಾತ್ರವನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದು ನಡುರಸ್ತೆಯಲ್ಲಿ ನಿಂತು ಬಾ ಗೂಳಿ, ನನ್ನನ್ನು ಗುದ್ದು ಎನ್ನುವಂತಿದೆ' ಎಂದಿದ್ದಾರೆ. 

ಇದನ್ನೂ ಓದಿ-IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?

ಪ್ರೀತಿ ಜಿಂಟಾ ಅವರ ಈ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದೇ ವೇಳೆ, ಅಭಿಮಾನಿಗಳು ಈ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ, 'ಪ್ರೀತಿ  ಸತ್ಯವನ್ನು ಮಾತನಾಡಿದ್ದಾರೆ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ 'ಬಾಲಿವುಡ್ ನ ಸತ್ಯ ಹೊರಬಿದ್ದಿದೆ’ ಎಂದು ಬರೆದಿದ್ದಾರೆ. ಮೂರನೇ  ಬಳಕೆದಾರರು, 'ಬಾಲಿವುಡ್‌ನಲ್ಲಿ ಹುಡುಗಿಯರು ಮತ್ತು ಹುಡುಗರು ನಿಜವಾಗಿಯೂ ಸುರಕ್ಷಿತವಾಗಿಲ್ಲ' ಎಂದು ಬರೆದಿದ್ದಾರೆ. 'ಯಾವುದೇ ತಪ್ಪು ಕಾರಣಕ್ಕೆ ಸುದ್ದಿಯಾಗದ ನಟಿಯರಲ್ಲಿ ಪ್ರೀತಿ ಜಿಂಟಾ ಕೂಡ ಒಬ್ಬರು' ಎಂದು ಹೇಳಿದ್ದಾರೆ, 

ಇದನ್ನೂ ಓದಿ-ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video

ಗುಡ್ ಸೆಫ್ ವ್ಯಕ್ತಿಯ ಜೊತೆಗೆ ಮದುವೆಯಾದ ನಂತರ, ಪ್ರೀತಿ ಜಿಂಟಾ ಉದ್ಯಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಮದುವೆಯಾದ ಬಳಿಕ ಪ್ರೀತಿ  ವಿದೇಶಕ್ಕೆ ತೆರಳಿದ್ದಾರೆ. ಇದಾದ ನಂತರ ಸರೋಗೆಸಿ ಸಹಾಯದಿಂದ ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯಳಾಗಿರುವ ಪ್ರೀತಿ,  ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರಸ್ತುತ ಪ್ರೀತಿ ಜಿಂಟಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಬ್ಯುಸಿಯಾಗಿದ್ದಾರೆ. ಅವರು ಮತ್ತೆ ಇಂಡಸ್ಟ್ರಿಗೆ ಮರಳಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ.

ವೈರಲ್ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News