Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!!

Manushi Chhillar: ಮಾಡೆಲಿಂಗ್‌ ಕ್ಷೇತ್ರದಲ್ಲಿ ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದವರೂ ಇದ್ದಾರೆ. ಆದರೆ ಈ ನಟಿ ಇಲ್ಲಿಯವರೆಗೂ ನಟಿಸಿದ ಸಿನಿಮಾಗಳೆಲ್ಲವೂ ಫ್ಲಾಪ್ ಆಗಿವೆ. 

Written by - Savita M B | Last Updated : Apr 22, 2024, 05:42 PM IST
  • ಮಾಡೆಲಿಂಗ್ ವೃತ್ತಿಯಲ್ಲಿ ಸಿಕ್ಕ ಮನ್ನಣೆಯಿಂದ ಚಿತ್ರರಂಗಕ್ಕೆ ಬಂದು ನಾಯಕಿಯಾಗಿ ಯಶಸ್ಸು ಕಂಡವರು ಅನೇಕರಿದ್ದಾರೆ
  • ಆದರೆ ಮಾಡೆಲ್ ಆಗಿ ಯಶಸ್ವಿಯಾಗಿರುವ ಇವರು ಇಂಡಸ್ಟ್ರಿಯಲ್ಲಿ ಫ್ಲಾಪ್ ಸ್ಟಾರ್ ಆಗಿಯೇ ಉಳಿದಿದ್ದಾರೆ.
 Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!! title=

Miss World Manushi Chhillar Life Story: ಮಾಡೆಲಿಂಗ್ ವೃತ್ತಿಯಲ್ಲಿ ಸಿಕ್ಕ ಮನ್ನಣೆಯಿಂದ ಚಿತ್ರರಂಗಕ್ಕೆ ಬಂದು ನಾಯಕಿಯಾಗಿ ಯಶಸ್ಸು ಕಂಡವರು ಅನೇಕರಿದ್ದಾರೆ. ಬ್ಯೂಟಿ ಸ್ಪರ್ಧೆಗಳಲ್ಲಿ ಗೆದ್ದು ಚಿತ್ರರಂಗ ಪ್ರವೇಶಿಸಿದವರೂ ಇದ್ದಾರೆ. ಇದಕ್ಕೆ ಉದಾಹರಣೆಯೆಂದರೇ ಐಶ್ವರ್ಯಾ ರೈ, ಸುಶ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ, ಲಾರಾ ದತ್ ಮುಂತಾದ ಬ್ಯೂಟಿ ಸ್ಟಾರ್‌ಗಳಿದ್ದಾರೆ.. ಇವರಲ್ಲಿ ಈ ನಟಿಯೂ ಒಬ್ಬರು.. 

ಈ ನಟಿ 2017 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ನಂತರ ಬಾಲಿವುಡ್ ಪ್ರವೇಶಿಸಿದರು.. ಆದರೆ ಮಾಡೆಲ್ ಆಗಿ ಯಶಸ್ವಿಯಾಗಿರುವ ಇವರು ಇಂಡಸ್ಟ್ರಿಯಲ್ಲಿ ಫ್ಲಾಪ್ ಸ್ಟಾರ್ ಆಗಿಯೇ ಉಳಿದಿದ್ದಾರೆ. ಇದುವರೆಗೆ ಆಕೆ ನಟಿಸಿದ 4 ಸಿನಿಮಾಗಳೂ ಫ್ಲಾಪ್ ಆಗಿವೆ. ಆ ನಟಿ ಬೇರೆ ಯಾರೂ ಅಲ್ಲ ಮಾನುಷಿ ಚಿಲ್ಲರ್.

ಇದನ್ನೂ ಓದಿ-ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !

ಹರ್ಯಾಣದ ಮಾನುಷಿ ಚಿಲ್ಲರ್ ಚೀನಾದಲ್ಲಿ ನಡೆದ 2017 ರ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದು.. ಈ ಗೌರವ ಪಡೆದ ಭಾರತದ ಆರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ನಂತರ ಅವರಿಗೆ ಬಾಲಿವುಡ್ ಆಫರ್‌ಗಳು ಬಂದವು. 2022 ರಲ್ಲಿ ಬಿಡುಗಡೆಯಾದ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ದ್ವಿವೇದಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಮಾನುಷಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.. 220 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ನಿರೀಕ್ಷೆಯಷ್ಟು ಗಳಿಕೆ ಮಾಡಲಿಲ್ಲ. ಮಾನುಷಿ ಅವರ ಎರಡನೇ ಚಿತ್ರ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ'. ಇದರಲ್ಲಿ ಅವರು ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. 40 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬರೀ 5 ಕೋಟಿ ಕಲೆಕ್ಷನ್ ಮಾಡಿ ಫ್ಲಾಪ್ ಆಗಿತ್ತು.

ಇದನ್ನೂ ಓದಿ-outh Actress: ಕಿರಿಕ್‌ ಪಾರ್ಟಿ ಸಿನಿಮಾಗೆ ರಶ್ಮಿಕಾಗಿಂತ ಮುಂಚೆ ಈ ಸೌತ್‌ ಸುಂದರಿ ಆಯ್ಕೆಯಾಗಿದ್ದರು: ಯಾವ ನಟಿ ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 
 
 

Trending News