Bollywood Actress: ಸಿನಿ ಪಯಣಕ್ಕೆ ಗುಡ್​ ಬಾಯ್​ ಹೇಳಿ, MBAಯತ್ತ ಒಲವು ತೋರಿದ ನಟಿ...!

‘ನಸೀಮ್’ ಚಿತ್ರದ ಮೂಲಕ ಬಾಲಿವುಡ್‌ ಗೆ ಪಾದರ್ಪಣೆ ಮಾಡಿದ ʼನಟಿ ಮಯೂರಿ ಕಾಂಗೋʼರವರ ಅಂದಿನ ಸಿನಿಮಾಗಳೆಲ್ಲಾವೂ ಹಿಟ್‌ ಆಗುತ್ತಿದ್ದರೂ ಸಿನಿ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಉನ್ನತ ಶಿಕ್ಷಣ ಕಡೆ ಒಲವು ತೋರಿದರು. 

Written by - Zee Kannada News Desk | Last Updated : Jun 16, 2023, 10:19 AM IST
  • ಚಿತ್ರರಂಗದಲ್ಲಿ ಸಿನಿ ಪಯಣ ಮುಗಿಸಿ ಉನ್ನತ ಶಿಕ್ಷಣದತ್ತ ಒಲವು ತೋರಿದ ನಟಿ
  • ‘ನಸೀಮ್’ ಚಿತ್ರದ ಮೂಲಕ ನಟಿ ಮಯೂರಿ ಕಾಂಗೋ
  • ಈ ನಟಿಯ ನಟನೆಗೆ ಮನಸೋಲದವರಿಲ್ಲ
Bollywood Actress: ಸಿನಿ ಪಯಣಕ್ಕೆ ಗುಡ್​ ಬಾಯ್​ ಹೇಳಿ, MBAಯತ್ತ ಒಲವು ತೋರಿದ ನಟಿ...! title=

ಮುಂಬೈ: 1995 ರಲ್ಲಿ ತೆರೆಕಂಡ ‘ನಸೀಮ್’ ಚಿತ್ರದ ಮೂಲಕ ಬಾಲಿವುಡ್‌ ಗೆ ಪಾದರ್ಪಣೆ ಮಾಡಿದ ʼನಟಿ ಮಯೂರಿ ಕಾಂಗೋʼ ಅವರ ಬಗ್ಗೆ ನೆನಪಿದೆಯೇ.. ಅಷ್ಟೇ ಅಲ್ಲದೇ ‘ಹೋಗಿ ಪ್ಯಾರ್ ಕಿ ಜೀತ್’, ‘ಪಾಪಾ ಕೆಹ್ತೆ ಹೈ’ ಚಿತ್ರ ನಟಿಸಿರುವ ನಟಿ.

ಅಂದಿನ ದಿನಕ್ಕೆ ನಟಿ ಮಯೂರಿ ಎಂದರೆ ಯುವಕರ ಕನಸಿನ ರಾಣಿಯಾಗಿದ್ದಳು. ಈ ನಟಿಯ ನಟನೆ ಕಂಡು ಅನೇಕ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ನಟಿಗೆ ಅವಕಾಶ ಕೊಡಬೇಕೆಂದು ಆಸೆ ಹೊತ್ತಿದ್ದರು. ಅಷ್ಟರ ಮಟ್ಟಿಗೆ ತಮ್ಮ ಚೊಚ್ಚಲ ಅಭಿನಯ ಮೂಲಕ ಎಲ್ಲರ ಮನದಲ್ಲಿ ಅಚ್ಚುಳಿದಿದ್ದಾರೆ.

ಇದನ್ನೂ ಓದಿ: Actor Pratham: ಸ್ಯಾಂಡಲ್‌ವುಡ್ ʼನಟ ಒಳ್ಳೆ ಹುಡ್ಗ ಪ್ರಥಮ್ʼ ಮದುವೆಗೆ ಭಾಗಿಯಾಗಲಿರುವ ಸೆಲೆಬ್ರಿಟಿಗಳು...!

ಈ ನಟಿ ಸಿನಿಮಾಕ್ಕೂ ಮುಂಚೆ ಸೀರಿಯಲ್ ಗಳಲ್ಲೂ ನಟಿಸಿದ್ದರು. 2003 ರಲ್ಲಿ ನಟನೆಯಿಂದ ದೂರ ಉಳಿದು ಔರಂಗಾಬಾದ್ ನಲ್ಲಿ ಅನಿವಾಸಿ ಭಾರತೀಯ ಆದಿತ್ಯ ಧಿಲ್ಲಾನ್  ಎಂಬುವವರ ಜೊತೆ ವಿವಾಹವಾದರು.

ಪಾಪಾ ಕೆಹ್ತೆ ಹೈ’ ಚಿತ್ರದ ವೇಳೆ ನಟಿ ಮಯೂರಿ ಪಿ ಯು ಸಿ ಓದುತ್ತಿದ್ದರಂತೆ ಎಂಬ ಮಾತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕಡೆ ಹೆಚ್ಚು ಗಮನ ವಹಿಸಲು ತೊಂದರೆಯಾಗುತ್ತಿದ್ದರಿಂದ ತಮ್ಮ ಸಿನಿ ಪಯಣಕ್ಕೆ ಬಾಯ್‌ ಹೇಳಿ ಶಿಕ್ಷಣಕ್ಕಾಗಿ ಒಲವು ತೋರಿದ್ದಾರೆ.

ಇದನ್ನೂ ಓದಿ: Shivarajkumar: ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ!

ಮದುವೆಯ ನಂತರ ತಮ್ಮ ಪತಿಯ ಜೊತೆ ಮಯೂರಿ ಯುನೈಟೆಡ್ ಸ್ಟೇಟ್ಸ್‌ ತೆರಳಿ ಅಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ. ಬಳಿಕ  ಬರೂಚ್ ಕಾಲೇಜ್ ಜಿಕ್ಲಿನ್ ಸ್ಕೂಲ್ ಆಫ್ ಬಿಸಿನೆಸ್ ನಿಂದ ಎಂಬಿಎ ಪದವಿ ಪರ್ಫಾರ್ಮೆಕ್ಸ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು.  ಸದ್ಯ ನಟಿ ಗೂಗಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News