Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ

Vikrant Rona: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಟೀಸರ್ ಮತ್ತು ಪೋಸ್ಟರ್ ಗಳಿಂದ ವಿಕ್ರಾಂತ್ ರೋಣ ಭಾರೀ ನಿರೀಕ್ಷೆ ಮೂಡಿಸಿದೆ.

Written by - Chetana Devarmani | Last Updated : May 31, 2022, 04:25 PM IST
  • ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’
  • ಮೊದಲ ಲಿರಿಕಲ್‌ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ
  • ಕಿಚ್ಚ ಸುದೀಪ್‌ & ಅನೂಪ್ ಭಂಡಾರಿ ಕಾಂಬಿನೇಷನ್‌ನ ವಿಕ್ರಾಂತ್‌ ರೋಣ ರಿಲೀಸ್‌ಗೆ ರೆಡಿ
Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ title=
ಜಾಕ್ವೆಲಿನ್‌ ಫರ್ನಾಂಡಿಸ್‌

Vikrant Rona: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಟೀಸರ್ ಮತ್ತು ಪೋಸ್ಟರ್ ಗಳಿಂದ ವಿಕ್ರಾಂತ್ ರೋಣ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್, ವಿಭಿನ್ನ ಪೋಸ್ಟರ್‌ ಜೊತೆಗೆ ಮೊದಲ ಲಿರಿಕಲ್‌ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಮಾಡುವತ್ತ ಗಮನಹರಿಸಿದೆ.

ಇದನ್ನೂ ಓದಿ: ಮಲೈಕಾ ಅರೋರಾ-ಅರ್ಜುನ್ ಕಪೂರ್ ವೆಡ್ಡಿಂಗ್‌ ಡೇಟ್‌ ಫಿಕ್ಸ್‌!?

ಕಜಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್ ರೋಣ ಕನ್ನಡದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಹೆಜ್ಜೆ ಇಟ್ಟಿರುವುದು ಗೊತ್ತಿರುವ ವಿಚಾರ. ವಿಶ್ವದ ಹಲವು ಭಾಷೆಗಳಲ್ಲಿವಿಕ್ರಾಂತ್ ರೋಣ ಡಬ್ಬಿಂಗ್‌ ಕೂಡ ಮುಗಿದಿದೆ. ಸದ್ಯ ಭರ್ಜರಿ ಪ್ರಮೋಷನ್‌ ತಂತ್ರ ಹೆಣೆಯುತ್ತಿರುವ ವಿಕ್ರಾಂತ್‌ ರೋಣ ತಂಡ, ವಿವಿಧ ಪ್ಲ್ಯಾನ್‌ಗಳನ್ನು ಹೆಣೆಯುತ್ತಿದೆ. 

ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್‌ ರೋಣ ಮೂಲಕ ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್‌ ಹಾಗೂ ಜಾಕ್ವೆಲಿನ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ʻಗಡಂಗ್‌ ರಕ್ಕಮ್ಮʼ ಹಾಡು ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಈ ಹಾಡಿಗೆ ಮೊದಲ ಬಾರಿಗೆ ನಟ ಸುದೀಪ್‌ ರೀಲ್ಸ್‌ ಮಾಡುವ ಮೂಲಕ ಮತ್ತಷ್ಟು ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಈ ಹಾಡಿನಲ್ಲಿ ರಕ್ಕಮ್ಮನಾಗಿ ಹೆಜ್ಜೆ ಹಾಕಿರುವ ಶ್ರೀಲಂಕಾ ಬೆಡಗಿ ಜಾಕ್ವೆಲಿನ್‌, ಇದೀಗ ಅಭಿಮಾಣಿಗಲ ಭೇಟಿಗೆ ಆಗಮಿಸಲಿದ್ದಾರಂತೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಕ್ರಾಂತ್‌ ರೋಣ ತಂಡ ಟ್ವೀಟ್‌ ಮಾಡಿದೆ. 

 

 

ಈ ವಿಡಿಯೋದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಖುದ್ದು ಮಾತನಾಡಿದ್ದು, ರಾ ರಾ ರಕ್ಕಮ್ಮ ಸಾಂಗ್‌ ದೊಡ್ಡ ಹಿಟ್‌ ಕೊಟ್ಟಿದೆ. ನಿಮ್ಮೆಲ್ಲರಿಗೂ ಇದಕ್ಕಾಗಿ ಅಭಿನಂದನೆಗಳು. ನಾನು ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಆದರೆ ಎಲ್ಲಿ? ಯಾವಾಗ? ಎಂಬ ವಿಚಾರಗಳು ಮಾತ್ರ ಅಧಿಕೃತವಾಗಿ ತಿಳಿಯಬೇಕಿದೆ. 

ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News