ರಾಮ್ ಚರಣ್ ಸಿನಿಮಾದಿಂದ ವಿಶೇಷ ಮನ್ನಣೆ..ಸ್ಟಾರ್ ಹೀರೋ ಜೊತೆ ಮದುವೆ..500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟ ಈಕೆ!

Bollywood Actress: ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಹೀರೋಯಿನ್... ಮದುವೆಯಾದ್ರೂ ಸಿನಿಮಾದಲ್ಲಿ ಸಖತ್‌ ಆಗಿ ಮಿಂಚುವ ನಟಿಯ ಕುರಿತಾದ ಇಟ್ರೆಂಸ್ಟಿಂಗ್‌ ಮಾಹಿತಿಗಳನ್ನು ಇದೀಗ ತಿಳಿಯೋಣ..   

Written by - Savita M B | Last Updated : Feb 9, 2024, 01:22 PM IST
  • ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಸುಲಭವಲ್ಲ.
  • ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಹೀರೋಯಿನ್
  • ತಾರೆಯರ ಕುಟುಂಬದಿಂದ ಬಂದವರೆಲ್ಲರೂ ಯಶಸ್ವಿಯಾಗುವುದಿಲ್ಲ.. ಆದರೆ ಇಂದು ಯಶಸ್ವಿಯಾದ ಸ್ಟಾರ್ ಕಿಡ್ ಬಗ್ಗೆ ತಿಳಿಯೋಣ.
ರಾಮ್ ಚರಣ್ ಸಿನಿಮಾದಿಂದ ವಿಶೇಷ ಮನ್ನಣೆ..ಸ್ಟಾರ್ ಹೀರೋ ಜೊತೆ ಮದುವೆ..500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟ ಈಕೆ! title=

Bollywood Actress Alia Bhat: ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಸುಲಭವಲ್ಲ. ಸದೃಢ ಕೌಟುಂಬಿಕ ಹಿನ್ನೆಲೆ ಇರುವವರಿಗೆ ಅಥವಾ ಮೊದಲ ಚಿತ್ರದಲ್ಲೇ ಮಾರ್ಕ್ ಹೊಡೆಯುವವರಿಗೆ ಹೆಚ್ಚು ಅವಕಾಶಗಳಿವೆ. ಫ್ಲಾಪ್‌ಗಳಿಂದ ಪ್ರಾರಂಭಿಸಿ ನಂತರ ಚೇತರಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ತಾರೆಯರ ಕುಟುಂಬದಿಂದ ಬಂದವರೆಲ್ಲರೂ ಯಶಸ್ವಿಯಾಗುವುದಿಲ್ಲ.. ಆದರೆ ಇಂದು ಯಶಸ್ವಿಯಾದ ಸ್ಟಾರ್ ಕಿಡ್ ಬಗ್ಗೆ ತಿಳಿಯೋಣ.

ಹಿಟ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ.. ತನ್ನ ಪ್ರತಿಭೆಯಿಂದಲೇ ಸಿನಿರಂಗದಲ್ಲಿ ಹೆಸರು ಮಾಡಿದರು. ಸದ್ಯ ಹಿಟ್ ಸಿನಿಮಾಗಳಿಗೆ ಈಕೆಯೇ ನಾಯಕಿ ಎನ್ನುವಂತಾಗಿದೆ.. ಆಕೆ ಬೇರೆ ಯಾರೂ ಅಲ್ಲ 30 ವರ್ಷದ ಆಲಿಯಾ ಭಟ್.

ಇದನ್ನೂ ಓದಿ-ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌

ಆಲಿಯಾ 2012 ರಲ್ಲಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು... ಅವರು ಮಲ್ಟಿಸ್ಟಾರರ್ ಚಲನಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲ ಸಿನಿಮಾದಲ್ಲೇ ತನ್ನ ನಟನೆಯಿಂದಲೇ ಎಲ್ಲರ ಮನ ಗೆದ್ದ ಈ ನಟಿ... ಹಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ನಟಿಸುತ್ತಿದ್ದಾರೆ.

ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟಿ ಆಲಿಯಾ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಕರಣ್ ಜೋಹರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದವರೆಲ್ಲರೂ ನೇಮ್‌ ಫೇಮ್‌ ಪಡೆದುಕೊಂಡರು ಆದರೆ ನಿರ್ದೇಶಕರಿಗೆ ಯಾವುದೇ ಲಾಭವಾಗಿರಲಿಲ್ಲವಂತೆ.. ಇದನ್ನು  ಸ್ವತಃ ಕರಣ್ ಜೋಹರ್ ಹೇಳಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದ್ದರೂ, ಅದು ತನಗೆ ರೂ.20 ಕೋಟಿ ನಷ್ಟವನ್ನುಂಟುಮಾಡಿತು ಎಂದು ಕರಣ್ ಜೋಹರ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. 

ತನ್ನ ಮೊದಲ ಚಿತ್ರದ ನಂತರ ಅನೇಕ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ ಆಲಿಯಾ ಭಟ್ ಇಂದು ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು. ಅವರ ವೃತ್ತಿಜೀವನದಲ್ಲಿ, ಅವರು 'ಗಂಗೂಬಾಯಿ ಕಾಟೇವಾಡಿ', 'ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ' ಮುಂತಾದ ಹಿಟ್ ಚಿತ್ರಗಳೊಂದಿಗೆ ಖ್ಯಾತಿಯನ್ನು ಗಳಿಸಿದರು.

ಸಿನಿಮಾಗಳಲ್ಲಿನ ತನ್ನ ಪಾತ್ರಗಳ ಮೂಲಕ ನಿರ್ಮಾಪಕರ ಹಾಗೂ ಪ್ರೇಕ್ಷಕರ ಹೃದಯವನ್ನು ಕದಿಯುತ್ತಿದ್ದಾರೆ. 2022 ಆಲಿಯಾ ಭಟ್‌ಗೆ ಅದೃಷ್ಟದ ವರ್ಷವಾಗಿತ್ತು.. ಏಕೆಂದರೆ ನಟಿ ಸತತ 4 ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನೀಡಿದ್ದರು.. ಇನ್ನು ನಟಿ ಆಲಿಯಾ ಸಹ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾದರು ಮತ್ತು 2022 ರಲ್ಲಿ ಮಗಳು ರಾಹಾ ಕಪೂರ್ ಅವರಿಗೆ ಜನ್ಮ ನೀಡಿದರು. 

ಇದನ್ನೂ ಓದಿ-ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳಿಂದ ಟಿವಿ ಕಾರ್ಯಕ್ರಮದಲ್ಲಿ ಜಗಳ..!

ಆಲಿಯಾ ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳೊಂದಿಗೆ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಕಲೆಕ್ಷನ್ ಮಾಡಿದ ಹಲವು ಸಿನಿಮಾಗಳ ಭಾಗವಾಗಿದ್ದಾರುವ ಈಕೆಯ . ‘ಗಂಗೂಬಾಯಿ ಕಾಟೇವಾಡಿ’, ‘ಆರ್‌ಆರ್‌ಆರ್‌’, ‘ಡಾರ್ಲಿಂಗ್ಸ್‌’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳು ಕಲೆಕ್ಷನ್‌ ಮಳೆಯನ್ನೇ ಸುರಿಸಿವೆ.

ರಾಮ್ ಚರಣ್ ಜೊತೆ ನಟಿಸಿದ RRR ದೇಶಾದ್ಯಂತ ವಿಶೇಷ ಮನ್ನಣೆ ಗಳಿಸಿತು. ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಆಕೆಯ ನಿವ್ವಳ ಮೌಲ್ಯ ರೂ.500 ಕೋಟಿಗೂ ಹೆಚ್ಚು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News