Bollywood Actress: ಗುಟ್ಟಾಗಿ ಮದುವೆ.. 41 ವರ್ಷಕ್ಕೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!

Aarti Chabria: ಅಕ್ಷಯ್ ಕುಮಾರ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡ ನಟಿ ಆರತಿ ಛಾಬ್ರಿಯಾ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.  

Written by - Savita M B | Last Updated : Apr 4, 2024, 11:26 AM IST
  • ಅಕ್ಷಯ್ ಕುಮಾರ್ ಜೊತೆ 'ಆವಾರಾ ಪಾಗಲ್ ದೀವಾನಾ' ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಆರತಿ ಛಾಬ್ರಿಯಾ
  • ಆರತಿ ಛಾಬ್ರಿಯಾ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡಿದ್ದಾರೆ.
 Bollywood Actress: ಗುಟ್ಟಾಗಿ ಮದುವೆ.. 41 ವರ್ಷಕ್ಕೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!  title=

Aarti Chabria Pregnancy: ಅಕ್ಷಯ್ ಕುಮಾರ್ ಜೊತೆ 'ಆವಾರಾ ಪಾಗಲ್ ದೀವಾನಾ' ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಆರತಿ ಛಾಬ್ರಿಯಾ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡಿದ್ದಾರೆ. ಆರತಿ ಶೀಘ್ರದಲ್ಲೇ ತಾಯಿಯಾಗಲಿದ್ದು, ಅವರ ಮನೆಗೆ ಮಗು ಬರಲಿದೆ. ಈ ವಿಚಾರದ ಕುರಿತಾದ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಆರತಿ ಅವರ ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಆರತಿ ಅವರು ಚಲನಚಿತ್ರಗಳಿಗಿಂತ ಜಾಹಿರಾತುಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಆದರೆ, ಸದ್ಯ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. 

ಆರತಿ ಅವರು 'ಶೂಟೌಟ್ ಅಟ್ ಲೋಖಂಡವಾಲಾ' ಮತ್ತು 'ಹೇ ಬೇಬಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ನಟಿ 25 ಜೂನ್ 2019 ರಂದು ವಿಶಾರದ್ ಅವರನ್ನು ರಹಸ್ಯವಾಗಿ ವಿವಾಹವಾದರು. ಸಾಂಪ್ರದಾಯಿಕ ವಿಧಾನಗಳ ಪ್ರಕಾರ ಮತ್ತು ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಆರತಿ ಸಪ್ತಪದಿ ತುಳಿದರು.. ಅಲ್ಲದೇ ತನ್ನ ಮದುವೆಯ ಚಿತ್ರಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಾಕಿ ಶಾಕ್‌ ನೀಡಿದ್ದರು. ಅದರ ನಂತರ, ಇದೀಗ ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Aarti Chabria (@aartichabria)

ಇದನ್ನೂ ಓದಿ-ತನಗಿಂತ 10 ವರ್ಷ ಚಿಕ್ಕವನ ಜೊತೆ ಕೃತಿ ಸನೋನ್ ಡೇಟಿಂಗ್, ವಿಶ್ವದ ಈ ಶ್ರೀಮಂತ ಉದ್ಯಮಿಯ ಪುತ್ರ.. ಯಾರು ಗೊತ್ತಾ?

ಆರತಿ ಛಾಬ್ರಿಯಾ ಹಲವು ಬ್ರಾಂಡ್‌ಗಳಿಗೆ ಜಾಹೀರಾತು ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆರತಿ ತಮ್ಮ ವೃತ್ತಿಜೀವನದಲ್ಲಿ ಟೂತ್‌ಪೇಸ್ಟ್, ಐಸ್ ಕ್ರೀಮ್ ಫೇಸ್ ವಾಶ್, ಇನ್‌ಸ್ಟಂಟ್ ನೂಡಲ್ಸ್ ಸೇರಿದಂತೆ 300 ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ. 

ಮದುವೆಯಾದ ನಂತರ ಆರತಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಆಕೆಯ ಪತಿಯೂ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಹಾಗಾಗಿ ಮದುವೆಯ ನಂತರ ಆರತಿ ಕೂಡ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿದ್ದಾರೆ.. ಆರತಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗಿನ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.. 

ಇದನ್ನೂ ಓದಿ-ವಿರಾಟ್ ಕೊಹ್ಲಿ, ಪ್ರಭಾಸ್, ರಣಬೀರ್ ಅವರಂತಹ ಸೆಲೆಬ್ರಿಟಿಗಳು ಹೇರ್ ಕಟಿಂಗ್‌ಗೆ ಎಷ್ಟು ಹಣ ಖರ್ಚು ಮಾಡುತ್ತಾರೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News