Bigg Boss: 'ಹೋಟೆಲ್ ರೂಮ್‌ನಲ್ಲಿ ಚಿತ್ರಹಿಂಸೆ ನೀಡಿದ್ರು..' ಬಿಗ್ ಬಾಸ್ ವಿರುದ್ಧ ಸ್ಪರ್ಧಿಯ ಗಂಭೀರ ಆರೋಪ

Allegation against Bigg Boss : ಈ ಮಧ್ಯೆ ಇತ್ತೀಚೆಗೆ ಬಿಗ್ ಬಾಸ್‌ನಿಂದ ಎಲಿಮಿನೇಟ್‌ ಆದ ಸ್ಪರ್ಧಿಯೊಬ್ಬರು ಬಿಗ್‌ ಬಾಸ್‌ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Written by - Chetana Devarmani | Last Updated : Jan 7, 2024, 02:39 PM IST
  • ಹೋಟೆಲ್ ರೂಮ್‌ನಲ್ಲಿ ಚಿತ್ರಹಿಂಸೆ ನೀಡಿದ್ರು
  • ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು
  • ಬಿಗ್ ಬಾಸ್ ವಿರುದ್ಧ ಸ್ಪರ್ಧಿಯ ಗಂಭೀರ ಆರೋಪ
Bigg Boss: 'ಹೋಟೆಲ್ ರೂಮ್‌ನಲ್ಲಿ ಚಿತ್ರಹಿಂಸೆ ನೀಡಿದ್ರು..' ಬಿಗ್ ಬಾಸ್ ವಿರುದ್ಧ ಸ್ಪರ್ಧಿಯ ಗಂಭೀರ ಆರೋಪ title=

Allegation against Bigg Boss : ಬಿಗ್ ಬಾಸ್ ಶೋ ಇತ್ತೀಚಿನ ದಿನಗಳಲ್ಲಿ ಅನೇಕ ವಿಚಾರಗಳಿಗಾಗಿ ಚರ್ಚೆಯ ವಿಷಯವಾಗಿದೆ. ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದಿದ್ದು, ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಈ ಮಧ್ಯೆ ಇತ್ತೀಚೆಗೆ ಬಿಗ್ ಬಾಸ್‌ನಿಂದ ಎಲಿಮಿನೇಟ್‌ ಆದ ಸ್ಪರ್ಧಿಯೊಬ್ಬರು ಬಿಗ್‌ ಬಾಸ್‌ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಖ್ಯಾತ ಯೂಟ್ಯೂಬರ್ ಅನುರಾಗ್ ದೋವಲ್ ಬಿಗ್‌ ಬಾಸ್‌ 17 ರ ಸ್ಪರ್ಧಿಯಾಗಿದ್ದರು. ಇತ್ತೀಚೆಗೆ  ಎಲಿಮಿನೇಟ್‌ ಆದಗಿದ್ದಾರೆ. ಅಂದಿನಿಂದ ಅನುರಾಗ್ ಬಿಗ್ ಬಾಸ್ ಮೇಕರ್‌ಗಳ ಮೇಲೆ ಕೋಪಗೊಂಡಿದ್ದಾರೆ. ಇದೇ ವೇಳೆ ವಿಡಿಯೋ ಒಂದನ್ನು ಶೇರ್ ಮಾಡಿ ಬಿಗ್ ಬಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಕ್ಕೆ ಇದೇ ಅಸಲಿ ಕಾರಣ, ಸುದೀಪ ಎದುರು ಸತ್ಯ ಬಯಲು! 

ಅನುರಾಗ್ ದೋವಲ್ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 17 ರ ಶೋ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ, ಇದು ಯಾರಿಗಾದರೂ ಆಘಾತವನ್ನುಂಟು ಮಾಡುತ್ತದೆ.  

ಅನುರಾಗ್ ದೋವಲ್ ತಮ್ಮ  ಬಿಗ್ ಬಾಸ್ 17 ರಿಂದ ಹೊರಬಂದ ನಂತರವೂ ಅವರನ್ನು 2 ದಿನಗಳ ಕಾಲ ಹೋಟೆಲ್ ಕೋಣೆಯಲ್ಲಿ ಲಾಕ್ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಕುಟುಂಬವನ್ನು ಸಂಪರ್ಕಿಸಲು ಅವರಿಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. 

 

 

ನನಗೆ ಹೊರಗಿನ ಪ್ರಪಂಚದ ಬಗ್ಗೆ ಏನೂ ತಿಳಿದಿರಲಿಲ್ಲ. ಶೋ ನಿಂದ ಎಲಿಮಿನೇಟ್‌ ಆದ ನಂತರ, ನನ್ನನ್ನು ಹೋಟೆಲ್‌ನಲ್ಲಿ ಇರಿಸಲಾಯಿತು. 2 ದಿನ ನನ್ನನ್ನು ಲಾಕ್‌ ಮಾಡಿದ್ದರು. ಅಲ್ಲಿ ನನ್ನ ಕುಟುಂಬದೊಂದಿಗೆ ಸಹ ಮಾತನಾಡಲು ಅವಕಾಶ ನೀಡಲಿಲ್ಲ. ಅವರು ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ನನಗೆ ಅನಿಸಿತು ಎಂದು ಆರೋಪಿಸಿದ್ದಾರೆ. 

ಆ ಎರಡು ದಿನಗಳಲ್ಲಿ ನಾನು ಹೋಟೆಲ್‌ನಲ್ಲಿದ್ದಾಗ, ನನ್ನ ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆ ಕೂಡ ಬಂದಿತು. ದೇವರು ನನಗೆ ಸ್ವಲ್ಪ ಬುದ್ಧಿ ಕೊಟ್ಟ. ನಾನು ಹೋಟೆಲ್ ಕೋಣೆಯಲ್ಲಿ ಯಾವುದೇ ತಪ್ಪು ಹೆಜ್ಜೆ ಇಡಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಕಂಟೆಸ್ಟಂಟ್‌ಗಳ ಈ ಮಾತೇ ಪ್ರತಾಪ್‌ ಮನಸ್ಥಿತಿಯನ್ನ ಕುಗ್ಗಿಸಿತ್ತೇ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News