9ನೇ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್ ಗೌಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Snehit Gowda Remuneration: ನಟ, ಮಾಡೆಲ್ ಸ್ನೇಹಿತ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಸೀಸನ್’ನ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ರು ಸ್ನೇಹಿತ್.

Written by - Bhavishya Shetty | Last Updated : Dec 11, 2023, 05:14 PM IST
    • ಬಿಗ್ ಬಾಸ್ ಮನೆಯ ಜರ್ನಿ ಕೊನೆಗೊಳಿಸಿ ಹೊರಬಂದ ನಟ ಸ್ನೇಹಿತ್ ಗೌಡ
    • ಸ್ನೇಹಿತ್ ಗೌಡ ಪಡೆದ ಸಂಭಾವನೆ ಬಗ್ಗೆ ಮಾಹಿತಿ
    • ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಸ್ನೇಹಿತ್ ದೊಡ್ಮನೆಯಿಂದ ಔಟ್
9ನೇ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್ ಗೌಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? title=
Snehit Gowda

Snehit Gowda Remuneration: ಬಿಗ್ ಬಾಸ್ ಮನೆಯ ಜರ್ನಿ ಕೊನೆಗೊಳಿಸಿ ಹೊರಬಂದ ನಟ ಸ್ನೇಹಿತ್ ಗೌಡ ಪಡೆದ ಸಂಭಾವನೆ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: “ಆತ ಮುಸ್ಲಿಂ.. ಧರ್ಮಕ್ಕಾಗಿ ಪ್ರೀತಿ ತ್ಯಾಗ ಮಾಡುತ್ತಿದ್ದೇವೆ”- 4 ವರ್ಷಗಳ ಪ್ರೇಮಕ್ಕೆ ಬ್ರೇಕಪ್ ಹೇಳಿದ ಬಿಗ್’ಬಾಸ್ ಜೋಡಿ

ನಟ, ಮಾಡೆಲ್ ಸ್ನೇಹಿತ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಸೀಸನ್’ನ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ರು ಸ್ನೇಹಿತ್. ಆದರೆ ಕೆಲವೊಂದು ಎಡವಟ್ಟು, ಪಕ್ಷಪಾತ ಧೋರಣೆಯಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಸ್ನೇಹಿತ್ ಇದೀಗ ದೊಡ್ಮನೆಯಿಂದ ಹೊರಬಂದಿದ್ದಾರೆ.

ಸ್ನೇಹಿತ್ ಅಭಿನಯದ ಮೊದಲ ಸಿನಿಮಾ ಚಿರವಾದ ನೆನಪು 2016 ರಲ್ಲಿ ಬಿಡುಗಡೆಯಾಗಿತ್ತು. ಅಂದಹಾಗೆ ಸ್ನೇಹಿತ್ ಹಿನ್ನೆಲೆ ತಿಳಿಯುವುದಾದರೆ, 19 ಆಗಸ್ಟ್ 1995 ರಂದು ಬೆಂಗಳೂರಿನಲ್ಲಿ ಜನಿಸಿದ ಸ್ನೇಹಿತ್, ವಿದ್ಯಾಭ್ಯಾಸವನ್ನೂ ಸಹ ರಾಜ್ಯ ರಾಜಧಾನಿಯಲ್ಲಿ ಪೂರೈಸಿದರು. ಸ್ನೇಹಿತ್ ಗೌಡ ಅವರ ತಂದೆಯ ಹೆಸರು ಮಾಯಾತೆರೆ ಸುರೇಶ್. ಇವರು ಕನ್ನಡ ಚಲನಚಿತ್ರ ನಿರ್ಮಾಪಕರು.

ಸ್ನೇಹಿತ್ ಗೌಡ ಅವರ ತಮ್ಮ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಕ್ಲಾರೆಟ್ ಶಾಲೆಯಲ್ಲಿ ಪೂರ್ಣಗೊಳಿಸಿದರೆ, ಪದವಿ ಶಿಕ್ಷಣವನ್ನು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪೂರೈಸಿದರು. ಇನ್ನು ಸ್ನೇಹಿತ್ ಗೌಡ ಅಭಿನಯಿಸಿದ ಮೊದಲ ಟಿವಿ ಶೋ ನಮ್ಮನೆ ಯುವರಾಣಿ (2022). ಇದರಲ್ಲಿ ಅವರು ಪ್ರಣಾಮ್ ರಾಜಗುರು ಆಗಿ ಕಾಣಿಸಿಕೊಂಡಿದ್ದರು. .

ಇದನ್ನೂ ಓದಿ: 46ನೇ ವಯಸ್ಸಿನಲ್ಲಿ ಖ್ಯಾತ ಕಿರುತೆರೆ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕಾಮಿಡಿ ನಟ!

ಅಂದಹಾಗೆ ಸ್ನೇಹಿತ್ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 10 ರಿಂದ ಕಳೆದ ದಿನವಷ್ಟೇ ಹೊರಬಂದಿದ್ದಾರೆ. ಇನ್ನು ಕೆಲ ಮೂಲಗಳ ಪ್ರಕಾರ ಸ್ನೇಹಿತ್ ಪ್ರತೀ ವಾರಕ್ಕೆ 2 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು, ಈ ಹಿನ್ನೆಲೆಯಲ್ಲಿ 64 ದಿನಕ್ಕೆ ಅಂದರೆ 9 ವಾರಗಳಿಗೆ ಸ್ನೇಹಿತ್ ಬರೋಬ್ಬರಿ 18 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಆದರೆ ಈ ಮಾಹಿತಿಯ ನಿಖರತೆ ಇಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News