ಬಿಗ್‌ ಬಾಸ್‌ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್‌ ಈಶ್ವರ್‌..!

Kannada Bigg Boss Day 2 : ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ಆದರೆ ಅವರು ಒಂದೇ ದಿನಕ್ಕೆ ಮನೆಯಿಂದ ಹೊರಬಂದಿದ್ದಾರೆ. 

Written by - Chetana Devarmani | Last Updated : Oct 10, 2023, 08:12 AM IST
  • ಕನ್ನಡ ಕಿರುತೆರೆ ಹಬ್ಬ ಶುರುವಾಗಿದೆ
  • ಎರಡನೇ ದಿನ ಮನೆಗೆ ಎಂಟ್ರಿ ಕೊಟ್ಟಿದ್ದ ಹಾಲಿ ಶಾಸಕ
  • ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌
ಬಿಗ್‌ ಬಾಸ್‌ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್‌ ಈಶ್ವರ್‌..! title=
Pradeep Eshwar

Pradeep Eshwar in Bigg Boss Kannada : ಕನ್ನಡ ಕಿರುತೆರೆ ಹಬ್ಬ ಶುರುವಾಗಿದೆ. ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಭಾನುವಾರ ಗ್ರ್ಯಾಂಡ್‌ ಪ್ರಿಮಿಯರ್‌ ನಡೆಯಿತು. ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ದಿನ ಎಲ್ಲರಿಗೂ ಬಿಗ್‌ ಸರ್‌ಪ್ರೈಸ್‌ ಒಂದು ಕಾದಿತ್ತು. ಅಲ್ಲೊಬ್ಬ ಹೊಸ ವ್ಯಕ್ತಿಯ ಆಗಮನವಾಗಿತ್ತು. ಎಲ್ಲರೂ ಅವರು ಸಹ ಬಿಗ್‌ ಬಾಸ್‌ ಸ್ಪರ್ಧಿಯೇ ಎಂದು ಭಾವಿಸಿದ್ದರು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. 

ಪ್ರದೀಪ್‌ ಈಶ್ವರ್‌ ಮನೆಗೆ ಬಂದು, ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದರು. ಎಲ್ಲರನ್ನೂ ತಾವು ಸ್ಪರ್ಧಿ ಎಂದೇ ನಂಬಿಸಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಬಿಗ್‌ ಬಾಸ್‌ ಮಾತನಾಡಿದರು. ಪ್ರದೀಪ್‌ ಈ ಸೀಸನ್‌ನ ಮೊದಲ ಅತಿಥಿ ಎಂದು ತಿಳಿಸಿದರು. 

ಇದನ್ನೂ ಓದಿ: BiggBoss Kannada 10: ಈ ಬಾರಿ ದೊಡ್ಮನೆಗೆ ಮೈಕಲ್ ಎನ್ನುವವರ ಎಂಟ್ರಿ...! ಯಾರಿವರು? 

ಆ ಬಳಿಕ ಶಾಸಕ ಪ್ರದೀಪ್‌ ಈಶ್ವರ್‌ ಸ್ಪರ್ಧಿಗಳಿಗೆಂದು ಸಿಹಿ ತಂದಿದ್ದರು. ಆದರೆ ಅದನ್ನು ಪಡೆಯಲು ಕಂಟೆಸ್ಟಂಟ್ಸ್‌ ಗೆ ಟಾಸ್ಕ್‌ ಒಂದನ್ನು ಆಡಿಸಿದರು. ಆ ಬಳಿಕ ಸ್ಪರ್ಧಿಗಳಿಗೆ ಸಿಹಿ ನೀಡಿದರು. ನಂತರ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಆದೇಶದಂತೆ ಮನೆಯಿಂದ ಹೊರಬಂದರು. 

ರಾಜಕಾರಣಿ ಮಾತ್ರವಲ್ಲದೇ ಮೋಟಿವೇಷನಲ್​ ಸ್ಪೀಕರ್ ಆಗಿ ಪ್ರದೀಪ್​ ಈಶ್ವರ್ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೂ ಪ್ರದೀಪ್‌ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದ್ದಾರೆ. ತಮ್ಮ ಮಾತಿನ ಮೂಲಕ ಸ್ಪರ್ಧಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದಾರೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಅನಾರೋಗ್ಯದ ಕಾರಣ ಹೊರ ನಡೆದ ಸ್ಪರ್ಧಿ.!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News