BBK 10: "ಸಂಬಳಕ್ಕಾಗಿ ಈ ಕೆಲಸ ಮಾಡಬೇಕಾ ನಾನು?" ದೊಡ್ಮನೆ ಸ್ಪರ್ಧಿಗಳ ನಡುವಳಿಕೆಯಿಂದ ಕಿಚ್ಚ ಗರಂ!

Bigg Boss Kannada 10: ಬಿಗ್‌ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ 10ನೇ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಆರಂಭದಲ್ಲೇ, ಸ್ಕೂಲ್ ಟಾಸ್ಕ್ ಇದ್ದ ವಾರವೇ ಸ್ಪರ್ಧಿಗಳಲ್ಲಿ ಶಿಸ್ತು ಇರಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್‌ ಬೇಸರಗೊಂಡಿದ್ದಾರೆ. ಪದೇ ಪದೇ ಬಝರ್‌ ಹಾಕಿದ್ದರೂ, ಸ್ಪರ್ಧಿಗಳು ರೆಡಿಯಾಗಿರದ ಕಾರಣ ಕಿಚ್ಚ ಸುದೀಪ್‌ ಫುಲ್ ಗರಂ ಆಗಿದ್ದಾರೆ.   

Written by - Zee Kannada News Desk | Last Updated : Dec 17, 2023, 10:29 AM IST
  • ಬಿಗ್‌ಬಾಸ್‌ ಮನೆಯಲ್ಲಿ ಎರಡನೇ ಬಾರಿ ಬಝರ್‌ ಆದಾಗ.. ಸೋಫಾ ಮೇಲೆ ಸಂಗೀತಾ, ಪವಿ ಪೂವಪ್ಪ ತಯಾರಾಗಿ ಕೂತಿದ್ದರು. ಮೈಕಲ್ ಹಾಗೂ ವಿನಯ್‌ ಇನ್ನೂ ಬೆಡ್‌ರೂಮ್‌ನಲ್ಲೇ ಇದ್ದರು.
  • ಪಂಚಾಯತಿ ಸೆಷನ್ ನಡೆಸಲು ಟಿವಿಯಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಾಗ.. ಸೋಫಾ ಮೇಲೆ ವರ್ತೂರು ಸಂತೋಷ್, ಸಂಗೀತಾ, ಪವಿ ಪೂವಪ್ಪ, ನಮ್ರತಾ ಮಾತ್ರ ಇದ್ದರು.
  • ಶನಿವಾರದ ಎಪಿಸೋಡ್‌ ಶುರುವಿನಲ್ಲಿ ಕಿಚ್ಚ ಸುದೀಪ್‌, ನಿಮ್ಮೆಲ್ಲರ ನಡವಳಿಕೆ ಅವಮಾನಕರವಾಗಿ ಕಾಣುತ್ತಿದೆ ಎಂದು ಸ್ಪರ್ಧಿಗಳಿಗೆ ಮಹಾ ಮಂಗಳಾರತಿ ಮಾಡಿದ್ದಾರೆ.
BBK 10: "ಸಂಬಳಕ್ಕಾಗಿ ಈ ಕೆಲಸ ಮಾಡಬೇಕಾ ನಾನು?" ದೊಡ್ಮನೆ ಸ್ಪರ್ಧಿಗಳ ನಡುವಳಿಕೆಯಿಂದ ಕಿಚ್ಚ ಗರಂ! title=

Sudeep Angry On BBK Contestants: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋನ ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ, ಪಂಚಾಯತಿ ಸೆಷನ್‌ ಆರಂಭಕ್ಕೂ ಮುನ್ನ ಮೊದಲ ಬಾರಿ ಬಝರ್‌ ಆದಾಗ ವಿನಯ್‌, ನಮ್ರತಾ, ವರ್ತೂರು ಸಂತೋಷ್, ಮೈಕಲ್ ನಿದ್ರಿಸುತ್ತಿದ್ದರು. ಇತ್ತ ಮೇಕಪ್‌ ರೂಮ್‌ನಲ್ಲಿ ಸಿರಿ, ತನಿಷಾ, ಪವಿ ಪೂವಪ್ಪ, ಅವಿನಾಶ್ ಬ್ಯುಸಿಯಿದ್ದರು. ಆ ಹೊತ್ತಿಗೆ ಸಂಗೀತಾ ಶೃಂಗೇರಿ ಒಬ್ಬರೇ ಫುಲ್‌ ರೆಡಿಯಾಗಿ  ಸೋಫಾ ಮೇಲೆ ಕೂತಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಎರಡನೇ ಬಾರಿ ಬಝರ್‌ ಆದಾಗ.. ಸೋಫಾ ಮೇಲೆ ಸಂಗೀತಾ, ಪವಿ ಪೂವಪ್ಪ ತಯಾರಾಗಿ ಕೂತಿದ್ದರು. ಮೈಕಲ್ ಹಾಗೂ ವಿನಯ್‌ ಇನ್ನೂ ಬೆಡ್‌ರೂಮ್‌ನಲ್ಲೇ ಇದ್ದರು. ಉಳಿದವರು ಬಾತ್‌ರೂಮ್‌ನಲ್ಲಿದ್ದರು. ಪಂಚಾಯತಿ ಸೆಷನ್ ನಡೆಸಲು ಟಿವಿಯಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಾಗ.. ಸೋಫಾ ಮೇಲೆ ವರ್ತೂರು ಸಂತೋಷ್, ಸಂಗೀತಾ, ಪವಿ ಪೂವಪ್ಪ, ನಮ್ರತಾ ಮಾತ್ರ ಇದ್ದರು. ಆನಂತರ ಉಳಿದವರೆಲ್ಲಾ ಓಡಿ ಬಂದರು.

ಇದನ್ನೂ ಓದಿ: Bigg Boss 10 ಕ್ಕೆ ಬರೋ ಆಸೆನೇ ಇರ್ಲಿಲ್ಲ, ಆದ್ರೆ ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ!

ಶನಿವಾರದ ಎಪಿಸೋಡ್‌  ಶುರುವಿನಲ್ಲಿ ಕಿಚ್ಚ ಸುದೀಪ್‌ "ಮೊದಲ ಬಾರಿ ಬಝರ್‌ ಹಾಕಿದಾಗಿನಿಂದ ನೋಡುತ್ತಲೇ ಇದ್ದೀನಿ. ನಿಮಗೆ ಸೀರಿಯಸ್‌ನೆಸ್‌ ಇದೆ ಅಂತ ಅನಿಸುತ್ತಿಲ್ಲ. ನಿಮ್ಮೆಲ್ಲರ ನಡವಳಿಕೆ ಅವಮಾನಕರವಾಗಿ ಕಾಣುತ್ತಿದೆ.ವಿದ್ಯಾಭ್ಯಾಸದ ಉದ್ದೇಶವೇ ಶಿಸ್ತನ್ನು ಕಲಿಯೋದು. ಸ್ಕೂಲ್‌ ಟಾಸ್ಕ್‌ ಇದ್ದ ವಾರವೇ ಬಹಳಷ್ಟು ರೂಲ್ಸ್ ಬ್ರೇಕ್ ಆಗಿದೆ. ಬ್ರೇಕ್ ಆಗ್ತಿರೋ ರೂಲ್ಸ್‌ಗೆ ಫುಲ್ ಸ್ಟಾಪ್ ಹಾಕಬೇಕು" ಎಂದು ಸ್ಪರ್ಧಿಗಳಿಗೆ ಮಹಾ ಮಂಗಳಾರತಿ ಮಾಡಿದ್ದಾರೆ.

ದೊಡ್ಮನೆಯ ಸ್ಪರ್ಧಿಗಳ ನಡವಳಿಕೆ ನೋಡಿ ಗರಂ ಆದ  ಸುದೀಪ್, "ಗುಡ್‌ ಮಾರ್ನಿಂಗ್ ಪ್ರತಾಪ್.. ನಿದ್ದೆ ಚೆನ್ನಾಗಿ ಆಯ್ತಾ? ವಿನಯ್‌ ನಿದ್ದೆ ಚೆನ್ನಾಗಿ ಆಯ್ತಾ? ನಿಮಗೆಲ್ಲಾ ಬಿಗ್‌ಬಾಸ್‌ ಎಷ್ಟು ಬಾರಿ ಬಝರ್‌ ಹಾಕಿದರೂ, ಸೀರಿಯಸ್‌ನೆಸ್‌ ಇರೋ ಹಾಗೆ ಕಾಣ್ತಿಲ್ಲ" ಎಂದಿದಕ್ಕೆ ವಿನಯ್‌, "ವಾಶ್‌ರೂಮ್‌ಗೆ ಹೋಗಿದ್ದೆ ಸಾರಿ ಸರ್‌" ಎಂದರು. ಮತ್ತೆ ಡ್ರೋನ್‌ ಪ್ರತಾಪ್‌ಗೆ "ಮೊದಲ ಬಾರಿ ಬಝರ್‌ ಹಾಕಿದಾಗಿನಿಂದ ನೋಡುತ್ತಲೇ ಇದ್ದೀನಿ. ನಿಮ್ಮ ಮೈಕ್‌ ಎಲ್ಲಿ ಪ್ರತಾಪ.?’’ ಎಂದು ಸುದೀಪ್‌ ಕೇಳಿದಾಗ ಓಡಿ ಹೋಗಿ ಮೈಕ್ ಹಾಕಿಕೊಂಡರು ಬಂದರು ಡ್ರೋನ್ ಪ್ರತಾಪ್.ಕಿಚ್ಚ ಸುದೀಪ್‌ ಮೈಕಲ್‌ಗೆ ಇನ್ನೂ ‘ರಾಗಿ ಮುದ್ದೆ’ ವಿಚಾರವಾಗಿ "ಹೆಚ್ಚೆಂದರೆ ಏನ್ಮಾಡ್ತಾರೆ? ಡೈರೆಕ್ಟ್ ಎಲಿಮಿನೇಟ್ ಮಾಡ್ತಾರಾ? ಕೈ ಕಟ್‌ ಮಾಡ್ತಾರಾ?’’ ಎಂದು ಬಿಗ್‌ಬಾಸ್‌ ಬಗ್ಗೆ ಮೈಕಲ್‌ ಕಟುವಾಗಿ ಪ್ರಶ್ನೆ ಹಾಕಿದಕ್ಕೆ, "ವಾಟ್ ಕೈಂಡ್‌ ಆಫ್ ಆಟಿಟ್ಯೂಡ್‌ ಈಸ್‌ ದಟ್‌? ತೆಗಿಸ್ತೀನಿ ಈಗಲೇ ಮುಖ್ಯ ದ್ವಾರವನ್ನ.. ಗೆಟ್ ಔಟ್‌!" ಎಂದು ಕೋಪದಿಂದಲೇ ನುಡಿದರು. 

ಇದನ್ನೂ ಓದಿ: ಬಿಗ್‌ಬಾಸ್‌ ಮನೆಯ ವಾರದ ಕಳಪೆ ಪಟ್ಟಕ್ಕೇರಿದ ಪವಿ ಪೂವಪ್ಪ: ಉತ್ತಮ ಸ್ಥಾನಗಳಿಸಿದ ತುಕಾಲಿ ಸಂತು!

ಬಳಿಕ ಕಿಚ್ಚ ಸುದೀಪ್ "ಸಂಬಳಕ್ಕಾಗಿ ಈ ಕೆಲಸ ಮಾಡಬೇಕಾ ನಾನು?" ಅಂತಲೂ ಸಿಟ್ಟಿನಿಂದ ಹೇಳಿದ್ದಾರೆ. ಸುದೀಪ್‌ "ನಿಮ್ಮ ಬಳಿ ಮಾತನಾಡೋಕೆ ನಾವು ಎಷ್ಟೊತ್ತಿನಿಂದ ಪ್ರಿಪೇರ್ ಆಗ್ತಿದ್ದೀವಿ ಅಂದುಕೊಂಡಿದ್ದೀರಿ? ನಿಮ್ಮೆಲ್ಲರಿಗೆ ನಾನು ಅಡುಗೆ ಮಾಡಬೇಕೆಂದರೆ ಗುರುವಾರ ಬೆಳಗ್ಗೆ ನಾನು ಇಲ್ಲಿಗೆ ಬರಬೇಕಾಯಿತು. ಶೋ ನಡೆಸೋಕೆ ಶುಕ್ರವಾರ ಬೆಳಗ್ಗೆ ಬರ್ತೀವಿ. ಪ್ರತಿಯೊಂದು ಎಪಿಸೋಡ್‌ ನೋಡಿ.. ಯಾರು, ಏನು ಅಂತ ಡಿವೈಡ್ ಮಾಡ್ತೀವಿ. ಅವೆಲ್ಲಾ ಮಾಡಿಕೊಂಡು ಉತ್ಸಾಹದಿಂದ ನಿಮ್ಮೆಲ್ಲರ ಜೊತೆ ಮಾತನಾಡಲು ಬರ್ತೀವಿ. ಎಲ್ಲೋ ಒಂದು ಕಡೆ ಸಂಬಳಕ್ಕೆ ಈ ಕೆಲಸ ಮಾಡಬೇಕಾ ನಾನು ಅಂತ ಅನಿಸಿಬಿಡುತ್ತೆ. ನನಗೆ ಇದರ ಅವಶ್ಯಕತೆ ಇಲ್ಲ. ದೇವರು ಚೆನ್ನಾಗಿ ಇಟ್ಟಿದ್ದಾನೆ. ಇಲ್ಲಿ ನಿಂತು ಸಂಪಾದನೆ ಮಾಡೋಕಂತಲೇ ನಾನು ಬಿಗ್ ಬಾಸ್‌ಗೆ ಬರಲ್ಲ.. ಬರ್ತಾಯಿಲ್ಲ. ನಾವು ‘ಬಿಗ್ ಬಾಸ್‌’ಗೆ ಬರೋದು ಈ ವೇದಿಕೆಗೆ ಇರುವ ತೂಕಕ್ಕೆ.. ಜನ ಕೊಡುವ ಪ್ರೀತಿಗೆ. ಅಷ್ಟೇ" ಎಂದಿದ್ದಾರೆ.

ಹಾಗೇ ಸುದೀಪ್‌ "ಈ ಸಂಚಿಕೆ ಈ ತರಹ ಪ್ರಾರಂಭ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ನಾನು ಖುಷಿಯಾಗಿಯೇ ಬಂದೆ. ವೆರಿ ಸ್ಯಾಡ್’’ ಎಂದರು. ಜೊತೆಗೆ, "ಇವತ್ತು 3 ಬಾರಿ ಬಝರ್‌ ಆಗಿದೆ. 10ನೇ ವಾರಕ್ಕೆ ನೀವೆಲ್ಲಾ ದೊಡ್ಡವರಾಗಿದ್ದೀರಿ ಎಂಬುದರ ಬಗ್ಗೆ ಅನುಮಾನ ಇಲ್ಲ. ಆದರೆ, ನಾವೆಲ್ಲಿ ಚಿಕ್ಕವರಾಗಿದ್ದೇವೆ ಅಂತ ಹೇಳಿದ್ರೆ, ನಾವು ಪಾಠ ಕಲಿತು ನಿಮ್ಮ ಲೆವೆಲ್‌ಗೆ ಬರೋದಕ್ಕೆ ಟ್ರೈ ಮಾಡೋಣ’’ ಎಂದು ಹೇಳಿ ಸ್ಪರ್ಧಿಗಳಿಗೆ ತಮ್ಮ ಮಾತಲ್ಲೇ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News