BBK 10: ಬಿಗ್‌ಬಾಸ್‌ನಲ್ಲಿ ಕಳಪೆ ಪಟ್ಟಕ್ಕೇರಿದ ಕಾರ್ತಿಕ್‌ಗೆ ಸಿಕ್ತು ಕಿಚ್ಚನ ಚಪ್ಪಾಳೆ!

Bigg Boss Kannada 10: ಬಿಗ್‌ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ಕಾರ್ತಿಕ್‌ಗೆ, ಇದೀಗ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 10, 2023, 10:45 AM IST
  • ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ, ಪವಿ ಪೂವಪ್ಪ, ನಮ್ರತಾ, ವಿನಯ್ ಹಾಗೂ ಸ್ನೇಹಿತ್‌ಗೆ ಕಿಚ್ಚ ಸುದೀಪ್ ಕಿವಿ ಹಿಂಡಿದರು.
  • ತದನಂತರ ಸುದೀಪ್‌ ಚಪ್ಪಲಿಯ ವಿಚಾರವಾಗಿ ಮಾತನಾಡುತ್ತಿರುವಾಗ ಕಾರ್ತಿಕ್‌ಗೆ ವಿನಯ್ ಕಡೆಯಿಂದ ತಪ್ಪಿನ ಮೇಲೆ ತಪ್ಪಾಗುತ್ತಿದೆ ಅಂದಾಗ ನಿಮ್ಮ ಕಡೆಯಿಂದ ಒಂದು ತಪ್ಪಾಗುತ್ತದೆ.
  • ವಾಲ್‌ ಆಫ್‌ ಮೊಮೆಂಟ್‌’ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋ ಲಭಿಸಿತು.
BBK 10: ಬಿಗ್‌ಬಾಸ್‌ನಲ್ಲಿ ಕಳಪೆ ಪಟ್ಟಕ್ಕೇರಿದ ಕಾರ್ತಿಕ್‌ಗೆ ಸಿಕ್ತು ಕಿಚ್ಚನ ಚಪ್ಪಾಳೆ! title=

Karthik Got Kicchaʼs Applause: ಬಿಗ್‌ಬಾಸ್‌ ಮನೆಯೊಳಗೆ ಕಾರ್ತಿಕ್ ಟಾಯ್ಲೆಟ್‌ ವಿಚಾರವಾಗಿ ಪವಿ ಪೂವಪ್ಪ, ವಿನಯ್‌, ಸ್ನೇಹಿತ್ ಹಾಗೂ ನಮ್ರತಾ ಬೇಡದ ರಂಪ ಮಾಡಿ, ಅದೇ ಕಾರಣವನ್ನಿಟ್ಟುಕೊಂಡು ಇವರೆಲ್ಲಾ ಕಾರ್ತಿಕ್‌ಗೆ ಕಳಪೆ ಕೊಟ್ಟಿದ್ದರು. ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ, "ಏನೂ ನಡೆಯದ ಸನ್ನಿವೇಶವನ್ನ ಇಟ್ಟುಕೊಂಡು ಮತ್ತೆ ಮತ್ತೆ ಪವಿ ಬಳಿ ಮಾತನಾಡಿ, ಏನೋ ಒಂದು ಅವರ ತಲೆಯಲ್ಲಿ ಕೂತುಕೊಳ್ಳುವ ಹಾಗೆ ಮಾಡಿ, ಸುಮ್ಮನೆ ಅಳಿಸಿ, ಅದನ್ನೇ ಕಾರಣ ಕೊಟ್ಟು ಕಳಪೆಗೆ ಹೋದಾಗ ಅದು ಚೆನ್ನಾಗಿ ಕಾಣಿಸಲ್ಲ" ಎಂದು ಪವಿ ಪೂವಪ್ಪ, ನಮ್ರತಾ, ವಿನಯ್ ಹಾಗೂ ಸ್ನೇಹಿತ್‌ಗೆ ಕಿಚ್ಚ ಸುದೀಪ್ ಕಿವಿ ಹಿಂಡಿದರು.

ತದನಂತರ ಸುದೀಪ್‌ ಚಪ್ಪಲಿಯ ವಿಚಾರವಾಗಿ ಮಾತನಾಡುತ್ತಿರುವಾಗ ಕಾರ್ತಿಕ್‌ಗೆ ವಿನಯ್ ಕಡೆಯಿಂದ ತಪ್ಪಿನ ಮೇಲೆ ತಪ್ಪಾಗುತ್ತಿದೆ ಅಂದಾಗ ನಿಮ್ಮ ಕಡೆಯಿಂದ ಒಂದು ತಪ್ಪಾಗುತ್ತದೆ. ಅದೇ ಚಪ್ಪಲಿ. ಇದು ಗುಡ್‌ ಲಕ್ಕೋ, ಬ್ಯಾಡ್ ಲಕ್ಕೋ ಗೊತ್ತಿಲ್ಲ. ನೀವು ಎಸೆದಿದ್ದು ಅವರಿಗೇ ಹೋಗಿ ತಾಗುತ್ತೆ. ಟ್ರಿಗರ್ ಆಗುತ್ತೆ. ಚಪ್ಪಲಿನೇ ಲಾಸ್ಟ್ ಆಲ್ಟರ್ನೇಟಿವ್ ಇತ್ತಾ? ಅಷ್ಟು ತಡೆದ ನೀವು ಒಂದೇ ಒಂದು ಘಟನೆಯಿಂದ ಹೇಗಾಗುತ್ತೆ? ಎಂದು ಪ್ರಶ್ನಿಸಿದಾಗ, ಆಗ ಮೈಂಡ್ ಬ್ಲಾಕ್ ಆಗಿತ್ತು. ತಾಳ್ಮೆಯನ್ನ ಪರೀಕ್ಷೆ ಮಾಡಿದ ಹಾಗಿತ್ತು ಎಂದು ಕಾರ್ತಿಕ್‌ ಹೇಳಿದರು. ಅದಕ್ಕೆ ಸುದೀಪ್‌ ಕಂಟ್ರೋಲ್ ಮಾಡಿಕೊಂಡು ಬರುತ್ತಿದ್ದ ನೀವು ಅಲ್ಲಿಯವರೆಗೂ ಹೇಗೆ ಕಾಣಿಸುತ್ತಿದ್ರಿ.? ಚಪ್ಪಲಿ ತಗೊಂಡ್ ಮೇಲೆ ಹೇಗೆ ಕಾಣಿಸಿರಬಹುದು? ಎಂದು ಹೇಳಿದಕ್ಕೆ ಕಾರ್ತಿಕ್ ತಪ್ಪು ಎಂದು ಒಪ್ಪಿಕೊಂಡರು.

ಇದನ್ನೂ ಓದಿ: BK 10 : ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’..! ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌

ಬಳಿಕ ಸುದೀಪ್‌ "ಇಷ್ಟೆಲ್ಲದರ ಮಧ್ಯೆ ಆಡಿ.. ತಮ್ಮತನ ಬಿಟ್ಟುಕೊಡದೆ, ಹಠ ಇಟ್ಟುಕೊಂಡು ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌.. ನಿಮಗೆ" ಎಂದು ಹೇಳಿ ಕಾರ್ತಿಕ್‌ಗೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಅದೇ ಸಂದರ್ಭದಲ್ಲಿ ಕಣ್ಣಿಗೆ ಪೆಟ್ಟಾಗಿದ್ದರೂ, ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ ಕೂಡ ಎದ್ದು ನಿಂತು ಕಾರ್ತಿಕ್‌ಗೆ ಚಪ್ಪಾಳೆ ತಟ್ಟಿದರು. ನಂತರ ಕಾರ್ತಿಕ್ "ಎಲ್ಲೋ ಒಂದು ಕಡೆ 8 ವಾರದಿಂದ ಅನಿಸುತ್ತಿತ್ತು.. ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರ್ತಿಲ್ಲ? ಎಲ್ಲಾದರೂ ಮಿಸ್‌ ಆಗ್ತಿದ್ಯಾ ಅಂತ.. ಇದು ನನಗೆ ತುಂಬಾ ಮುಖ್ಯ ಸರ್‌. ಥ್ಯಾಂಕ್ಯು ಸರ್. ಪ್ರತಿ ವಾರ ಒಬ್ಬೊಬ್ಬರಿಗೆ ಬರಬೇಕಾದರೆ, ನಾನೆಲ್ಲಿ ಮಿಸ್‌ ಹೊಡೆಯುತ್ತಿದ್ದೀನಿ ಅನಿಸುತ್ತಿತ್ತು. ಥ್ಯಾಂಕ್ಯು" ಎಂದರು.

ವಾಲ್‌ ಆಫ್‌ ಮೊಮೆಂಟ್‌’ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋ ಲಭಿಸಿತು.ಒಟ್ನಲ್ಲಿ ಟಾಯ್ಲೆಟ್‌ ಹಾಗೂ ಚಪ್ಪಲಿ ವಿಚಾರವಾಗಿ ವಿನಯ್, ನಮ್ರತಾ, ಸ್ನೇಹಿತ್, ಪವಿ ಪೂವಪ್ಪ, ಮೈಕಲ್, ವರ್ತೂರು ಸಂತೋಷ್.. ಕಾರ್ತಿಕ್‌ಗೆ ಕಳಪೆ ಕೊಟ್ಟಿದ್ದರು. ಅದೇ ಕಾರ್ತಿಕ್‌ಗೆ ಕಿಚ್ಚ ಸುದೀಪ್‌ ಮೆಚ್ಚುಗೆ ಚಪ್ಪಾಳೆ ಕೊಟ್ಟಿದ್ದು ಇವರೆಲ್ಲರಿಗೂ ಮುಖಭಂಗವಾದಂತಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News