BBK10: ಬಿಗ್‌ ಬಾಸ್‌ ಮನೆಯಲ್ಲಿ ಲಕ್ಷುರಿ ಖರೀದಿಗಾಗಿ ಜಟಾಪಟಿ

Bigg Boss Kannada Season 10: ಈ ವಾರ ಬಿಗ್‌ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ. 

Written by - Chetana Devarmani | Last Updated : Dec 22, 2023, 02:13 PM IST
  • ಬಿಗ್‌ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ
  • ಸದಸ್ಯರಿಗೆ ಬಿಗ್‌ಬಾಸ್‌ ಹೊಸದೊಂದು ಅವಕಾಶ
  • ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು
BBK10: ಬಿಗ್‌ ಬಾಸ್‌ ಮನೆಯಲ್ಲಿ ಲಕ್ಷುರಿ ಖರೀದಿಗಾಗಿ ಜಟಾಪಟಿ  title=

Bigg Boss Kannada Season 10: ಈ ವಾರ ಬಿಗ್‌ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ. ಇಷ್ಟು ದಿನ ವ್ಯಕ್ತಿಗಳನ್ನು ಖರೀದಿಸುವ, ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಹೊಸದೊಂದು ಅವಕಾಶ ನೀಡಿದ್ದಾರೆ. ಅದು ಲಕ್ಷುರಿ ಖರೀದಿಸುವ ಅವಕಾಶ. ಆದರೆ ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು. 

ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯವಿಸಬೇಕು ಎಂಬಲ್ಲಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ‘ಲೀಡರ್‍ಗಳ ಬಳಿ ಜಾಸ್ತಿ ಹಣವಿದೆ’ ಎಂದು ವಿನಯ್‌ ಹೇಳಿದ್ದಾರೆ. ಸಂಗೀತಾ, ‘ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ’ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಬಿಗ್‌ಬಾಸ್‌ ವಿನಯ್ ಗೆಲುವಿಗಾಗಿ ಧ್ವನಿ ಎತ್ತಿದ ನಿಶಿತಾ: ತಂಗಿ ಗಂಡನಿಗೆ ಅತ್ತಿಗೆಯ ಫುಲ್‌ ಸಪೋರ್ಟ್‌!

ಆದರೆ ತನಿಷಾ ಅದಕ್ಕೆ ಒಪ್ಪಿಲ್ಲ. ‘ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು’ ಎಂಬುದು ಅವರ ವಾದ. ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. 

ಮನೆಯ ಸದಸ್ಯರ ಭಿನ್ನಾಭಿಪ್ರಾಯದಲ್ಲಿ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾರಾ? ಯಾರ ಹಣದಲ್ಲಿ ಲಕ್ಷುರಿ ಮನೆಗೆ ಬರುತ್ತದೆ? ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಸ್ಪರ್ಧಿಗಳು.. ಸಂಗೀತಾ ಹಿಂದಿದ್ದ ಚಾರ್ಜರ್‌ ಬಿಚ್ಚಿಟ್ಟ ಸತ್ಯ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News