ಬಿಗ್‌ ಬಾಸ್‌ನಲ್ಲಿ ನಿನ್ನೆ‌ ಡಬಲ್ ಎಲಿಮಿನೇಷನ್ ನಡೆಯಲಿಲ್ವಾ, ಮರಳಿ ಮನೆಗೆ ಬಂದ ಮೈಕೆಲ್‌ ಅಜಯ್!?

Bigg Boss Elimination: ಬಿಗ್‌ ಬಾಸ್‌ ಫಿನಾಲೆ ವೀಕ್‌ ಹತ್ತಿರವಾಗುತ್ತಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಭಾನುವಾರ ಡಬಲ್‌ ಎಲಿಮಿನೇಷನ್‌ ನಡೆದಿತ್ತು.  

Written by - Chetana Devarmani | Last Updated : Dec 25, 2023, 03:51 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಎಲಿಮಿನೇಷನ್‌
  • ಮನೆಗೆ ಮರಳಿ ಬಂದ ಕಂಟೆಸ್ಟಂಟ್‌
ಬಿಗ್‌ ಬಾಸ್‌ನಲ್ಲಿ ನಿನ್ನೆ‌ ಡಬಲ್ ಎಲಿಮಿನೇಷನ್ ನಡೆಯಲಿಲ್ವಾ, ಮರಳಿ ಮನೆಗೆ ಬಂದ ಮೈಕೆಲ್‌ ಅಜಯ್!? title=

Bigg Boss Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಭಾನುವಾರ ಡಬಲ್‌ ಎಲಿಮಿನೇಷನ್‌ ನಡೆದಿತ್ತು. ಸುದೀಪ್‌ ವೀಕೆಂಡ್‌ ಎಪಿಸೋಡ್‌ನಲ್ಲಿ ಇರದ ಕಾರಣ ಬಿಗ್‌ ಬಾಸ್‌ ಮನೆಯ ಗಾರ್ಡನ್‌ ಏರಿಯಾಗೆ ಎರಡು ಕಾರುಗಳನ್ನು ಕೊಟ್ಟು ಕಳಿಸಿದ್ದರು. ಇದರಲ್ಲಿ ಒಂದು ಕಾರಿನಲ್ಲಿ ಮೈಕಲ್ ಮತ್ತೊಂದು ಕಾರಿನಲ್ಲಿ ಅವಿನಾಶ್‌ ರನ್ನು ಕೂರಿಸಲಾಗಿತ್ತು. ಎಲ್ಲರೂ ಯಾವುದಾದರೊಂದು ಕಾರು ಹೊರಗೆ ಹೋಗಲಿದೆ ಎಂದೇ ಭಾವಿಸಿದ್ದರು. ಆದರೆ ಮನೆಯಿಂದ ಒಟ್ಟಿಗೆ ಎರಡೂ ಕಾರುಗಳು ಆಚೆ ಹೋದವು.

ಇದನ್ನೂ ಓದಿ : Salaar Ceasefire: ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ‘ಸಲಾರ್’ ಪ್ರಾಬಲ್ಯ..! 

ಬಿಗ್‌ ಬಾಸ್‌ ಡಬಲ್‌ ಎಲಿಮಿನೇಷನ್‌ ಮೂಲಕ ಶಾಕ್‌ ಕೊಟ್ಟರು ಎಂದು ಎಲ್ಲರೂ ಮಾತನಾಡಿಕೊಂಡರು. ಬಿಗ್‌ ಬಾಸ್‌ ಫಿನಾಲೆ ವೀಕ್‌ ಹತ್ತಿರವಾಗುತ್ತಿದೆ. ಇನ್ನು ಪ್ರತಿದಿನವೂ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆಯಂತೆ. ಹೀಗಿರುವಾಗ ಡಬಲ್‌ ಎಲಿಮಿನೇಷನ್‌ ನಡೆದದ್ದು ನೋಡಿ ಮನೆಮಂದಿಗೆ ಆತಂಕವಾಯ್ತು. 

ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ ಎನ್ನಲಾಗ್ತಿದೆ. ಬಿಗ್‌ ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ನಡೆದಿಲ್ಲ ಎಂದು ಹೇಳಲಾಗ್ತಿದೆ. ಬಿಗ್‌ ಬಾಸ್‌ ಇಲ್ಲೊಂದು ಅಚ್ಚರಿ ಇಟ್ಟಿದ್ದಾರೆ. ಮೈಕೆಲ್‌ ಇಂದಿನ ಎಪಿಸೋಡ್‌ನಲ್ಲಿ ಮನೆಗೆ ಮರಳಿ ಬರುವುದನ್ನು ಕಾಣಬಹುದು ಎಂದು ಹೇಳಲಾಗ್ತಿದೆ. ನಿನ್ನೆ ಒಂದೇ ಎಲಿಮಿನೆಷನ್‌ ಆಗಿದ್ದು, ಅವಿನಾಶ್‌ ಶೆಟ್ಟಿ ಮಾತ್ರ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತದೆ. ಯಾರು ಔಟ್‌ ಆಗಿದ್ದು, ಯಾರು ಇನ್‌ ಆಗಿದ್ದು ಎಂಬುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.  

ಇದನ್ನೂ ಓದಿ : ರಶ್ಮಿಕಾ ಬಾಯ್‌ಫ್ರೆಂಡ್‌ ಆದ ಕನ್ನಡಿಗ ಶೆಟ್ಟಿ, ವೈರಲ್‌ ಆಯ್ತು ಈ ವಿಡಿಯೋ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News