ಬಿಗ್‌ ಬಾಸ್‌ ಕನ್ನಡ 10: ಟಾಪ್‌ 5 JioCinema FunFryday ಟಾಸ್ಕ್‌ಗಳು!!

Bigg Boss Kannada 10: ವಾರವಿಡೀ ಕಷ್ಟಕರ ಟಾಸ್ಕ್‌ ಆಡಿ, ಟಾಸ್ಕ್‌ನಲ್ಲಿ ಗೆಲ್ಲಲು ಎದುರಾಳಿಗಳ ಜೊತೆಗೆ ಗುದ್ದಾಡಿ, ಜಗಳವಾಡಿದ ಬಿಗ್‌ ಬಾಸ್‌ ಸದಸ್ಯರಿಗೆ ಸಖತ್ ಮಜ ಕೊಡುತ್ತಿದ್ದದ್ದು ಫನ್‌ ಫ್ರೈಡೆ ಟಾಸ್ಕ್‌ಗಳು. 

Written by - Chetana Devarmani | Last Updated : Jan 20, 2024, 07:05 PM IST
  • ಬಿಗ್‌ ಬಾಸ್‌ ಸದಸ್ಯರಿಗೆ ಸಖತ್ ಮಜ ಕೊಡುತ್ತಿದ್ದದ್ದು ಫನ್‌ ಫ್ರೈಡೆ ಟಾಸ್ಕ್‌
  • ಟಾಪ್‌ 5 ಜಿಯೊ ಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳು ಹೇಗಿದ್ದವು?
  • ಈ ಸೀಸನ್‌ನ ಮೊದಲ ಫಸ್ಟ್‌ ಫ್ರೈಡೆ ಟಾಸ್ಕ್‌ ಏನಾಗಿತ್ತು?
ಬಿಗ್‌ ಬಾಸ್‌ ಕನ್ನಡ 10: ಟಾಪ್‌ 5 JioCinema FunFryday ಟಾಸ್ಕ್‌ಗಳು!! title=

Bigg Boss Kannada 10: ವಾರವಿಡೀ ಕಷ್ಟಕರ ಟಾಸ್ಕ್‌ ಆಡಿ, ಟಾಸ್ಕ್‌ನಲ್ಲಿ ಗೆಲ್ಲಲು ಎದುರಾಳಿಗಳ ಜೊತೆಗೆ ಗುದ್ದಾಡಿ, ಜಗಳವಾಡಿದ ಬಿಗ್‌ ಬಾಸ್‌ ಸದಸ್ಯರಿಗೆ ಸಖತ್ ಮಜ ಕೊಡುತ್ತಿದ್ದದ್ದು ಫನ್‌ ಫ್ರೈಡೆ ಟಾಸ್ಕ್‌ಗಳು. ಒಂದೊಂದು ಅತಿ ವಿಶಿಷ್ಟವೂ ಮಜವೂ ಆಗಿರುವ ಟಾಸ್ಕ್‌ಗಳನ್ನು ಆಡುತ್ತಾಡುತ್ತ ಮನೆಯ ಸದಸ್ಯರು ನಲಿದಿದ್ದೇ ಹೆಚ್ಚು. ಅಗ್ರೆಶನ್‌ ಸೈಡಿಗಿಟ್ಟು, ಮನರಂಜನೆಯನ್ನೇ ಕೊಟ್ಟು ತೆಗೆದುಕೊಳ್ಳುವ ಹಲವು ಸಂದರ್ಭಗಳನ್ನು ಫನ್‌ ಫ್ರೈಡೆ ಸೃಷ್ಟಿಸಿದ್ದು. ಈ ಸೀಸನ್‌ನ ಟಾಪ್‌ 5 ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳು ಹೇಗಿದ್ದವು? ಅವುಗಳನ್ನು ಯಾವ ಸ್ಪರ್ಧಿ ಗೆದ್ದರು? ಈ ಎಲ್ಲ ಡಿಟೈಲ್ಸ್‌ ಇಲ್ಲಿದೆ ನೋಡಿ.

ಮ್ಯೂಸಿಕಲ್ ಬಕೆಟ್ ಚಾಲೆಂಜ್

ಈ ಸೀಸನ್‌ನ ಮೊದಲ ಫಸ್ಟ್‌ ಫ್ರೈಡೆ ಟಾಸ್ಕ್‌ ಸಖತ್ ಫನ್ನಿಯಾಗಿತ್ತು. ಸಂಗೀತ ಕುರ್ಚಿಯ ಹೊಸ ಆವೃತ್ತಿಯಂತಿದ್ದ ‘ಮ್ಯೂಸಿಕಲ್ ಬಕೆಟ್‌’ ಆಟದಲ್ಲಿ ಮನೆಯ ಸದಸ್ಯರೆಲ್ಲ ಉತ್ಸಾಹದಿಂದಲೇ ಪಾಲ್ಗೊಂಡರು. ಈ ಆಟದಿಂದ ಮೊದಲು ಹೊರಗೆ ಬಿದ್ದವರು ಡ್ರೋಣ್ ಪ್ರತಾಪ್‌. ನಂತರ ಒಬ್ಬೊಬ್ಬರಾಗಿ ಹೊರಬರುತ್ತ ಹೋದಂತೆ ಆಟದ ಥ್ರಿಲ್ ಹೆಚ್ಚುತ್ತಲೇ ಹೋಯಿತು. ಕೊನೆಯಲ್ಲಿ ಉಳಿದುಕೊಂಡವರು ಸಿರಿ ಮತ್ತು ತನಿಷಾ. ಅಷ್ಟರಲ್ಲಾಗಲೇ ಹೊರಬಿದ್ದಿದ್ದ ಸ್ಪರ್ಧಿಗಳು ಇವರಿಬ್ಬರನ್ನು ಬೆಂಬಲಿಸಲು ಶುರುಮಾಡಿದ್ದರು. ಕೊನೆಯಲ್ಲಿ ಈ ಸೀಸನ್‌ನ ಮೊದಲ ಫನ್‌ ಫ್ರೈಡೆ ಟಾಸ್ಕ್‌ನ ವಿಜೇತರಾಗಿಹೊರಮೊಮ್ಮಿದ್ದು ತನಿಷಾ. ಕುಪ್ಪಂಡ. 

ಆನೆಗೊಂದು ಬಾಲ ಕೊಡಿ!

ಆನೆಯ ಚಿತ್ರಕ್ಕೆ ಬಾಲ ಬರೆಯುವ ಸ್ಪರ್ಧೆ ಈ ಸೀಸನ್‌ನ ಮತ್ತೊಂದು ಮಜವಾದ ಫನ್‌ಫ್ರೈಡೆ ಟಾಸ್ಕ್‌. ಈ ಫನ್‌ಫ್ರೈಡೆಯಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ‘ಮಾಣಿಕ್ಯ’ ಮತ್ತು ‘ರಣಶಕ್ತಿ’ ತಂಡಗಳ ನಡುವೆ ಆನೆಯ ಚಿತ್ರಕ್ಕೆ ಬಾಲ ಹಚ್ಚುವುದರಲ್ಲಿ ಜೋರು ಸ್ಪರ್ಧೆಯೇ ನಡೆದಿತ್ತು.

ಒಬ್ಬ ಸ್ಫರ್ಧಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ತುಸು ದೂರದ ದಾರಿ ಕ್ರಮಿಸಿ ಎದುರಿಗೆ ಇರುವ ಆನೆಯ ಚಿತ್ರಕ್ಕೆ ಬಾಲ ಬರೆಯಬೇಕಿತ್ತು. ಉಳಿದ ಸ್ಪರ್ಧಿಗಳು ಹೂ ಊಹೂ ಎಂಬ ಶಬ್ದಗಳನ್ನು ಬಳಸಿ ಮಾರ್ಗದರ್ಶನ ನೀಡಬೇಕಿತ್ತು.

ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರು, ಆನೆಯ ಬೆನ್ನಿಗೆ, ಕಾಲಿಗೆಲ್ಲ ಬಾಲ ಹಚ್ಚಿದ್ದನ್ನು ನೋಡಿ ಉಳಿದವರು ಬಿದ್ದು ಬಿದ್ದು ನಕ್ಕರು. ರಕ್ಷಕ್ ಅವರಂತೂ ಟ್ರ್ಯಾಕ್ ತಪ್ಪಿ ಕ್ಯಾಮೆರಾಗೆ ಬಾಲ ಹಚ್ಚಲುಹೋಗಿಬಿಟ್ಟಿದ್ದರು. 

ಕೊನೆಯಲ್ಲಿ ‘ರಣಶಕ್ತಿ’ ತಂಡದ ಸದಸ್ಯರು ಅತಿ ಹೆಚ್ಚು ಬಾರಿ ಸರಿಯಾಗಿ ಆನೆಯ ಚಿತ್ರಕ್ಕೆ ಬಾಲ ಬರೆದು ಟಾಸ್ಕ್‌ನಲ್ಲಿ ಗೆದ್ದರು.

ಕಥಾ ಸಂಗಮ

ಎಲ್ಲರಲ್ಲೂ ಒಂದಲ್ಲ, ಹಲವು ಕಥೆಗಳಿರುತ್ತವೆ ಎಂಬುದು ಬಹುಜನಪ್ರಿಯ ಮಾತು. ಈ ಮಾತಿಗೊಂದು ಟಾಸ್ಕ್ ರೂಪ ಕೊಟ್ಟಿದ್ದು ಫನ್‌ಫ್ರೈಡೆಯ ಕಥಾ ಸಂಗಮ ಟಾಸ್ಕ್‌.  ಇಲ್ಲಿ ಸದಸ್ಯರೆಲ್ಲರ ಕೈಯಲ್ಲಿ ಒಂದಿಷ್ಟು ಫಲಕಗಳನ್ನು ನೀಡಲಾಗಿತ್ತು. ಒಂದೊಂದು ಫಲಕದಲ್ಲಿಯೂ ಒಂದೊಂದು ಶಬ್ದ ಇತ್ತು. ವೇದಿಕೆ ಮೇಲೆ ಏರುವ ಸದಸ್ಯರು ಕಥೆ ಹೇಳಲು ಶುರುಮಾಡುತ್ತಿದ್ದ ಹಾಗೆಯೇ ಅವರ ದಾರಿ ತಪ್ಪಿಸಲು ಎದುರಿಗೆ ಕೂತ ಸದಸ್ಯರು ತಮ್ಮ ಬಳಿ ಇರುವ ಶಬ್ದಫಲಕಗಳನ್ನು ಎತ್ತಿ ಹಿಡಿಯಬೇಕು. ಆ ಶಬ್ದದ ಜಾಡು ಹಿಡಿದು ವೇದಿಕೆ ಮೇಲಿನ ಸದಸ್ಯರು ತಮ್ಮ ಕಥೆಯನ್ನು ಮುಂದುವರಿಸಬೇಕು. ಹೀಗೆ ಎರಡು ನಿಮಿಷ ಸತತವಾಗಿ ಕಥೆ ಹೇಳಬೇಕು. ಸುಂದರವಾಗಿ ಕಥೆ ಹೇಳಿದವರು ಗೆದ್ದಂತೆ. 

ಇದರಲ್ಲಿ ಎಷ್ಟೋ ಸದಸ್ಯರಿಗೆ ಎರಡು ನಿಮಿಷ ಮುಂದುವರಿಸುವುದೂ ಸಾಧ್ಯವಾಗಲಿಲ್ಲ. ತುಕಾಲಿ ಸಂತೋಷ್ ಅವರು ಹುಚ್ಚ ವೆಂಕಟ್ ಅವರ ಧ್ವನಿಯಲ್ಲಿ ಕಥೆ ಹೇಳಿ ಮನೆಮಂದಿಯನ್ನು ನಕ್ಕುನಗಿಸಿದರು. ಕೊನೆಯಲ್ಲಿ ಭಾಗ್ಯಶ್ರಿ ಎಲ್ಲ ಶಬ್ದಗಳನ್ನೂ ತೆಗೆದುಕೊಂಡು ಸರಾಗವಾಗಿ ಕಥೆ ಮುಂದುವರಿಸಿ ಈ ಸ್ಪರ್ಧೆಯಲ್ಲಿ ಗೆದ್ದರು.
 
ಹುಡುಕಿ ತಂದವನೇ ಮಹಾಶೂರ

ಐದನೇ ವಾರ ನೀಡಲಾಗಿದ್ದ ಈ ಟಾಸ್ಕ್‌ ಸಮಯದಲ್ಲಿ ಮನೆ ‘ಗಂಧದ ಗುಡಿ’ ಮತ್ತು ‘ವಜ್ರಕಾಯ’ ಎಂಬ ಎರಡು ತಂಡಗಳಾಗಿ ವಿಂಗಡಣೆಗೊಂಡಿತ್ತು. ಗಂಧದ ಗುಡಿಯಲ್ಲಿ ಸಂಗೀತಾ, ಡ್ರೋಣ್ ಪ್ರತಾಪ್‌, ಭಾಗ್ಯಶ್ರೀ, ವರ್ತೂರ್ ಸಂತೋಷ್, ಮೈಕಲ್ ಅಜಯ್, ಕಾರ್ತಿಕ್, ತನಿಷಾ ಇದ್ದರೆ, ವಜ್ರಕಾಯದಲ್ಲಿ ಇಶಾನಿ, ತುಕಾಲಿ ಸಂತೋಷ್, ಸಿರಿ, ನೀತು ವನಜಾಕ್ಷಿ, ಸ್ನೇಹಿತ್ ಗೌಡ,ವಿನಯ್ ಮತ್ತು ನಮ್ರತಾ ಇದ್ದರು. 

ಈ ಟಾಸ್ಕ್‌ನಲ್ಲಿ ಬಿಗ್‌ಬಾಸ್ ನೀಡಿದ ಸುಳಿವನ್ನು ಬಳಸಿಕೊಂಡು ಯಾವ ವಸ್ತು ಎಂದು ಊಹಿಸಿ ಆ ವಸ್ತುವನ್ನು ಮನೆಯೊಳಗಿನಿಂದ ತಂದು ತಮಗೆ ಮೀಸಲಿರುವ ಡಬ್ಬದಲ್ಲಿ ಹಾಕಬೇಕು. 

ಉಜ್ಜಿದಷ್ಟೂ ನೊರೆ ಬರುವ ವಸ್ತು ಎಂದಾಗ ಮೈಕಲ್ ಬ್ರಶ್ ತಂದಿದ್ದರು. ಬಿಗ್‌ಬಾಸ್‌ ಅವರಿಗೆ ಅದನ್ನು ತೆಗೆದುಕೊಂಡು ಉಜ್ಜಿಕೊಳ್ಳಲು ಹೇಳಿ, ‘ನೊರೆ ಬರುತ್ತಿದೆಯಾ?’ ಎಂದು ಕೇಳಿದಾಗ ಮನೆಯ ಸದಸ್ಯರೆಲ್ಲರೂ ನಗೆಗಡಲಲ್ಲಿ ಮುಳುಗಿ ಹೋಗಿದ್ದರು. ಕಾರ್ತಿಕ್ ಮತ್ತು ನೀತು ಇಬ್ಬರಿಗೆ ಕೊಟ್ಟ ಸುಳಿವು, ‘ಅಳುವುದೋ ತಿನ್ನುವುದೋ ನೀವೇ ಹೇಳಿ?’ ಎಂದಿತ್ತು. ನೀತುಗಿಂತ ಮುಂದೆ ಹೋಗಿ ಈರುಳ್ಳಿ ತಂದ ಕಾರ್ತಿಕ್ ಅತಿಯಾದ ಆತ್ಮವಿಶ್ವಾಸದಲ್ಲಿ ಡಬ್ಬದಲ್ಲಿ ಈರುಳ್ಳಿ ಹಾಕದೆ ಆಟ ಮಾಡುತ್ತಿದ್ದರು. ನೀತು ದೂರದಿಂದಲೇ ಥ್ರೋ ಮಾಡಿದ ಈರುಳ್ಳಿ ನೇರವಾಗಿ ಡಬ್ಬಿಯಲ್ಲಿ ಬಿದ್ದಿತ್ತು. ಕೆಲವೇ ಕ್ಷಣಗಳ ಮೊದಲು ಕಾರ್ತಿಕ್ ಈರುಳ್ಳಿ ಹಾಕಿದ್ದರಿಂದ ಅವರು ಇದರಲ್ಲಿ ಗೆದ್ದರು. ಇಂಥ ಹಲವು ರೋಚಕ ಕ್ಷಣಗಳನ್ನು ಒಳಗೊಂಡಿದ್ದ ಈ ಟಾಸ್ಕ್‌ನಲ್ಲಿ ‘ಗಂಧದ ಗುಡಿ’ ತಂಡವೇ ಗೆದ್ದಿತು.

ಲಗೋರಿ

‘ಏಳು ನಕ್ಷತ್ರಗಳು’ ಮತ್ತು ‘ಧ್ರುವತಾರೆ’ ಎಂಬ ಎರಡು ತಂಡಗಳಾಗಿ ಮನೆಯ ಸದಸ್ಯರು ವಿಂಗಡಣೆಗೊಂಡಿದ್ದಾಗ ನೀಡಿದ ಟಾಸ್ಕ್ ಇದು. ಲಗೋರಿ ನಮ್ಮೆಲ್ಲರ ಬಾಲ್ಯದ ಭಾಗವಾಗಿದ್ದ ಆಟ. ಬಿಗ್‌ಬಾಸ್ ಮನೆಯ ಸದಸ್ಯರು ಈ ಆಟ ಆಡುವಾಗಲೂ ಬಾಲ್ಯಕ್ಕೇ ಮರಳಿದಂತಿತ್ತು.
‘ಏಳು ನಕ್ಷತ್ರಗಳು’ ತಂಡ ನಿಖರವಾದ ಗುರಿ, ಕಾರ್ಯತಂತ್ರ ಬಳಸಿ ಈ ಆಟವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. 

ಬಿಗ್‌ಬಾಸ್‌ ಸೀಸನ್‌ 10ನ ಇಂಥ ಹಲವು ಫನ್‌ಫ್ರೈಡೆ ಮೊಮೆಂಟ್ಸ್‌ಗಳು ಮತ್ತು ಅನ್‌ಸೀನ್‌ ಕಥೆಗಳು ಜಿಯೊಸಿನಿಮಾ JioCinema ಆಪ್‌ನಲ್ಲಿ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News