ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಎಡವಟ್ಟು! ಕಾರ್ತಿಕ್‌ ಆಕ್ರೋಶ

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಇಬ್ಬರು ಸದಸ್ಯರನ್ನು ನಾಮಿನೇಷನ್ ಮಾಡುವುದರ ಜೊತೆಗೆ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್‌ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು. 

Written by - Yashaswini V | Last Updated : Oct 17, 2023, 01:54 PM IST
  • ಬಿಗ್‌ಬಾಸ್‌ ಮನೆಯಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಮೇಲೆ ಎದ್ದೇಳುವುದಕ್ಕೆ ವೇಕಪ್‌ ಸಾಂಗ್‌ ಹಾಕುತ್ತಾರೆ.
  • ಆದರೆ ದೊಡ್ಮನೆಯ ಎರಡನೇಯ ವಾರದ ಮೊದಲ ದಿನ ವೇಕಪ್‌ ಸಾಂಗ್‌ ಹಾಕಿಲ್ಲ.
  • ವೇಕಪ್‌ ಸಾಂಗ್‌ ಬದಲು ಬಿಗ್‌ಬಾಸ್‌ ನಾಮಿನೇಷನ್‌ ಪ್ರಕಿಯೆ ನಡೆಸಿದ್ದಾರೆ.
ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಎಡವಟ್ಟು! ಕಾರ್ತಿಕ್‌ ಆಕ್ರೋಶ title=

Bigg Boss Kannada Season 10: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿನಿತ್ಯ ಟ್ವಿಸ್‌ ಮೇಲೆ ಟ್ವಿಸ್‌ ಇದ್ದೇ ಇರುತ್ತೇ. ಅದೇ ರೀತಿ ಬಿಗ್‌ಬಾಸ್‌ ಮನೆಯ ಎರಡನೆ ವಾರದ ಟಾಸ್ಕ್‌ ಹಾಗೂ ನಾಮಿನೇಷನ್‌ ಪ್ರಕ್ರಿಯೆಯು ಸಹ ವಿಭಿನ್ನಾವಾಗಿತ್ತು. ಈ ನಾಮಿನೇಷನ್‌ನಲ್ಲಿ ಮನೆಯ ಕ್ಯಾಪ್ಟನ್‌ಗೆ ನೇರ ನಾಮಿನೇಷನ್‌ನಿಂದ ಮಾಡುವ ಹಕ್ಕಿನಿಂದ ಎಡವಟ್ಟಾಗಿದೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ... 

ಬಿಗ್‌ಬಾಸ್‌ ಮನೆಯಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಮೇಲೆ ಎದ್ದೇಳುವುದಕ್ಕೆ ವೇಕಪ್‌ ಸಾಂಗ್‌ ಹಾಕುತ್ತಾರೆ. ಆದರೆ ದೊಡ್ಮನೆಯ ಎರಡನೇಯ ವಾರದ ಮೊದಲ ದಿನ ವೇಕಪ್‌ ಸಾಂಗ್‌ ಹಾಕಿಲ್ಲ. ವೇಕಪ್‌ ಸಾಂಗ್‌  ಬದಲು ಬಿಗ್‌ಬಾಸ್‌ ನಾಮಿನೇಷನ್‌ ಪ್ರಕಿಯೆ ನಡೆಸಿದ್ದಾರೆ. ಬೆಳಗ್ಗೆ ಮನೆಯ ಸದ್ಯಸರನ್ನು ನಾಮಿನೇಷನ್‌ ಪ್ರಕ್ರಿಯೆಗಾಗಿ ಸೂಚನೆ ನೀಡಿ ಎಲ್ಲರನ್ನು ಎದ್ದೇಳಿಸಿದ್ದಾರೆ. ಬಿಗ್‌ಬಾಸ್‌ ಸೂಚನೆಯಂತೆ ಮನೆಯ ಸದಸ್ಯರು ನಿದ್ದೆಕಣ್ಣಿನಲ್ಲೇ ನಾಮಿನೇಷನ್‌ ಮಾಡಿದ್ದಾರೆ. 

ಬಿಗ್‌ಬಾಸ್‌ ಮನೆಯಲ್ಲಿ ಇಬ್ಬರು ಸದಸ್ಯರನ್ನು ನಾಮಿನೇಷನ್ ಮಾಡುವುದರ ಜೊತೆಗೆ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್‌ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು. ಅದರಲ್ಲಿ ನೀತು ಹೇಳಿದ ಕಾರಣ ಭಾಗ್ಯಶ್ರೀ ಅವರಿಗೆ ಇಷ್ಟವಾಗಲಿಲ್ಲ. ತಕ್ಷಣ ಭಾಗ್ಯಶ್ರೀ ಪ್ರತಿಕ್ರಿಯೆ ನೀಡಿದರು. ಬಳಿಕ ವರ್ತೂರು ಸಂತೋಷ್ ನೀಡಿದ ಕಾರಣ ನಮ್ರತಾಗೆ ಸರಿ ಹೋಗಲಿಲ್ಲ. ಅದನ್ನ ನಾನು ಒಪ್ಪಲ್ಲ ಅಂದ್ರು. ಗೌರೀಶ್‌ಗೆ ತನಿಶಾ ಹೇಳಿದ ಕಾರಣ ಮ್ಯಾಚ್ ಆಗಲ್ಲ ಅನ್ನಿಸಿದೆ. ಈ ಕಾರಣಗಳಿಂದ ಮನೆಯ ಸದಸ್ಯರ ಮಧ್ಯೆ ಮುಂಜಾನೇ ಜಗಳ ಶುರುವಾಗಿದೆ.

ಇದನ್ನೂ ಓದಿ- ಬಿಗ್‌ ಬಾಸ್‌ ಪ್ರೇಮ ಕತೆ: ಸಂಗೀತಾ - ಕಾರ್ತಿಕ್ ಮಧ್ಯೆ ಅನುರಾಗ ಅರಳೋ ಸಮಯ! ಸ್ನೇಹನಾ ಪ್ರೀತಿನಾ?

ನಂತರ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ಗೆ ಮನೆಯ ಇಬ್ಬರ ಸದಸ್ಯರನ್ನು ನೇರವಾಗಿ ನಾಮಿನೇಟ್‌ ಮಾಡುವಂತೆ ಬಿಗ್‌ಬಾಸ್‌ ಸೂಚನೆ ನೀಡಿದರು. ಆಗ ತನಿಶಾ, ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಬಿಗ್‌ಬಾಸ್‌ ಟೊಮಾಟೊ ಕತ್ತರಿಸಲು ಭಾಗ್ಯಶ್ರೀಗೆ ಹೇಳಿದ್ದರು. ಆದರೆ ಅದನ್ನು ತನಿಶಾ ಹಾಗೂ ಸಂಗೀತಾ ಕಟ್ ಮಾಡಿದ್ದಾರೆ. ಹೀಗೆ ತನಿಶಾ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ ಎಂದು ಸ್ನೇಹಿತ್‌ ಹೇಳಿದರು. ಬಳಿಕ ಕಾರ್ತಿಕ್‌ ನಾಮಿನೇಟ್‌ ಮಾಡಿರುವುದಕ್ಕೆ ಕಾರಣ ತಿಳಿಸುವಾಗ‌, ಕಾರ್ತಿಕ್ ತನಿಶಾ ಹಾಗೂ  ಸಂಗೀತಾ ಟೊಮಾಟೊ ಕಟ್‌ ಮಾಡುವಾಗ ಅವರ ಜೊತೆ ಇದ್ದು, ಆ ಕ್ಯಾಪ್ಟನ್‌ ಗಮನಕ್ಕೆ ತರದೆ ಟೊಮಾಟೊ ತಿಂದಿದ್ದಾರೆ ಎಂದು ಹೇಳಿದ್ದಾರೆ. 

ಯಾಕಂದ್ರೆ, ಟೊಮೆಟೊ ಕಟ್ ಮಾಡಿದ್ದನ್ನು ನಾಮಿನೇಟ್ ಮಾಡುವುದಕ್ಕೆ ಕಾರಣ ಎಂದಿದ್ದಾರೆ. ಆದರೆ, ಕಾರ್ತಿಕ್‌ಗೆ ಈ ಕಾರಣ ಸೂಕ್ತ ಎನಿಸಲೇ ಇಲ್ಲ. ಅದಕ್ಕೆ ಕಾರ್ತಿಕ್‌ "ಟೊಮಾಟೋ ಕಟ್‌ ಮಾಡುವುದನ್ನು ಅಂತ ಹೇಳಿರುವುದೇ ಹೊರತು ತಿನ್ನಬಾರದು ಅಂತ ಅಲ್ಲ. ತನಿಶಾ ಹೇಗಿದ್ದರು ಕಟ್‌ ಮಾಡಿದ್ದಾಗಿದೆ. ತಿನ್ನಿ ಅಂತ ಹೇಳಿದರು. ಅದಕ್ಕೆ ತಿಂದೆ, ಇದು ಸೂಕ್ತ ಕಾರಣವೇ ಅಲ್ಲ. ನೀನು ಕ್ಯಾಪ್ಟನ್ ಆಗುವುದಕ್ಕೆ ನಾಲಾಯಕ್. ಅದು ಒಂದು ಕಾರಣವಾ? ನೇರವಾಗಿ ನಾಮಿನೇಟ್ ಮಾಡಿದ್ದಕ್ಕೆ ಸರಿಯಾದ ಕಾರಣ ಕೊಡಬೇಕು ಅಲ್ವಾ. ನಾನ್ ಸೆನ್ಸ್? ಎಂದು ಕೋಪದಲ್ಲಿ ಬೈದಿದ್ದಾರೆ. 

ನಂತರ ಸ್ನೇಹಿತ್‌ ಮತ್ತೆ ಕಾರ್ತಿಕ್‌ ಅವರಿಗೆ "ನನ್ ಜಾಗದಲ್ಲಿ ಇದ್ದು ಯೋಚನೆ ಮಾಡಿ ಹೇಳಿ. ನಾನು ಮಾಡಿದ್ದು ಸರಿಯಾಗಿ ಇದೆ" ಅಂತ ಹೇಳಿದರು. ಅದಕ್ಕೆ ಕಾರ್ತಿಕ್‌ " ನಾನು ನಿಮ್ಮ ಜಾಗದಲ್ಲಿ ನಿಂತು ಹೇಳಿದರು ಸರಿ ಅಥವಾ ಬೇರೆ ಯಾರ ಜಾಗದಲ್ಲಿ ನಿಂತು ಹೇಳಿದರು ನಾನು ಈ ಮಾತನ್ನೇ ಹೇಳುತ್ತಿದ್ದೆ" ಅಂತ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವಾಗ ಸೂಕ್ತ ಕಾರಣ ನೀಡಿ ಎಂದು ಬಿಗ್ ಬಾಸ್ ಹೇಳುವುದಕ್ಕೆ ಒಂದು ಕಾರಣವಿದೆ. ತಪ್ಪು ಮಾಡುತ್ತಿರುವವರು ತಿದ್ದಿಕೊಳ್ಳಲಿ ಎಂದು. ಆ ತಪ್ಪು ತಿಳಿದಾಗ ಮತ್ತೆ ಆ ತಪ್ಪನ್ನು ಮಾಡಲ್ಲ ಎಂದು. ಆದರೆ, ಈಗಿನ ಸ್ಪರ್ಧಿಗಳು‌ ನಾಮಿನೇಷನ್‌ಗೆ ಒಂದು ಅರ್ಥವೇ ಇಲ್ಲದಂತೆ ಮಾಡಿಟ್ಟಿದ್ದಾರೆ.

ಇದನ್ನೂ ಓದಿ- BBK 10 : ನೀನು ಗಂಡ್ಸೇ ಅಲ್ಲ, ಥೂ.. ತುಕಾಲಿ ಸಂತು ವಿರುದ್ಧ ಈಶಾನಿ ಕಿರುಚಾಡಿದ್ದೇಕೆ?

ನಾಮಿನೇಷನ್‌ ಮುಗುದು ಸ್ಪರ್ದಿಗಳ ಜಗಳ ಎಲ್ಲಾ ಇತ್ಯರ್ಥವಾಗದ ಮೇಲೆ ಬಿಗ್ ಬಾಸ್ ಒಂದು ಹಾಡನ್ನು ಹಾಕಿದ್ದಾರೆ. ಅದು ಹೇಗಿತ್ತು ಅಂದ್ರೆ ಯಾರಾದ್ರೂ ಹಾಳಾಗೋಗ್ಲಿ ನಾವ್ ನೆಟ್ಟಗಿದ್ರೆ ಸಾಕು ಎಂಬ ಹಾಡು. ನಾಮಿನೇಷನ್ ಪ್ರಕ್ರಿಯೆ ಮುಗಿದು ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಈ ವಾರದ ಬಿಗ್‌ಬಾಸ್‌ ಆಟ ಹೇಗಿರುತ್ತೆ?  ಕುತೂಹಲವಂತೂ ಬೆಟ್ಟದಷ್ಟಿದೆ...  ನೀವು ದಿನದ 24ಗಂಟೆಗಳು   ಬಿಗ್ ಬಾಸ್  ನೇರಪ್ರಸಾರವನ್ನು ಉಚಿತವಾಗಿ JioCinemaದಲ್ಲಿ ವೀಕ್ಷಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News