BBK10 Winner: ಬಿಗ್ ಬಾಸ್ ಕನ್ನಡ 10ರ ವಿನ್ನರ್ ಕಾರ್ತಿಕ್ ಮಹೇಶ್‌ ಪಡೆದ Money ಪ್ರೈಜ್ ಎಷ್ಟು ಗೊತ್ತಾ?

BBK 10 Winner Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್‌ ಫಿನಾಲೆ ಮುಕ್ತಾಯವಾಗಿದ್ದು.. ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿದ್ದಾರೆ.. ಇದೀಗ ಬಿಗ್‌ಬಾಸ್‌  ಟೈಟಲ್‌ ವಿನ್ನರ್‌ ಪಡೆದ ಮನಿ ಪ್ರೈಜ್‌ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Jan 29, 2024, 08:31 AM IST
  • ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ
  • ಕಾರ್ತಿಕ್‌ ಮಹೇಶ್‌ ಟೈಟಲ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ..
  • ‘ಬಿಗ್ ಬಾಸ್‌ ಕನ್ನಡ 10’ ರಲ್ಲಿ ಹಿರೋ ಎಂದೇ ಗುರುತಿಸಿ ಕೊಂಡಿದ್ದ ಕಾರ್ತಿಕ್‌ ಮಹೇಶ್‌
BBK10 Winner: ಬಿಗ್ ಬಾಸ್ ಕನ್ನಡ 10ರ ವಿನ್ನರ್ ಕಾರ್ತಿಕ್ ಮಹೇಶ್‌ ಪಡೆದ Money ಪ್ರೈಜ್ ಎಷ್ಟು ಗೊತ್ತಾ? title=

Karthik Mahesh: ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ.. ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಕನ್ನಡದ ಸೀಸನ್‌ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್‌ ಮಹೇಶ್‌ ಟೈಟಲ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.. 

‘ಬಿಗ್ ಬಾಸ್‌ ಕನ್ನಡ 10’ ರಲ್ಲಿ ಹಿರೋ ಎಂದೇ ಗುರುತಿಸಿ ಕೊಂಡಿದ್ದ ಕಾರ್ತಿಕ್‌ ಮಹೇಶ್‌.. ತಮ್ಮ ತಾಳ್ಮೆ, ವ್ಯಕ್ತಿತ್ವ.. ಆಟದ ಶೈಲಿ, ನಡವಳಿಕೆಯಿಂದಲೇ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದರು.. ಟಾಸ್ಕ್, ಎಂಟರ್‌ಟೇನ್‌ಮೆಂಟ್‌ ಸೇರಿದಂತೆ ಮನೆಯ ಎಲ್ಲ ಚಟುವಟಿಗಳಲ್ಲಿಯೂ ತಮ್ಮ ಕೌಶಲ್ಯವನ್ನು ತೋರಿದ ಆಲ್‌ರೌಂಡರ್‌ ಕಾರ್ತಿಕ್‌ ಮಹೇಶ್‌ ಸದ್ಯ ಟ್ರೋಫಿ ಹಿಡಿದು ನಿಂತಿದ್ದಾರೆ.. 

ಇದನ್ನೂ ಓದಿ-Varthur Santhosh: ಹಳ್ಳಿಕಾರ್ ಒಡೆಯನ ಭರ್ಜರಿ ಜರ್ನಿ, ಬಿಗ್‌ಬಾಸ್ ಮನೆಯೊಳಗೆ ವರ್ತೂರು ಸಂತೋಷ್!

‘ಬಿಗ್ ಬಾಸ್‌ ಕನ್ನಡ 10’ ವಿನ್ನರ್‌ ಪಟ್ಟ ಅಲಂಕರಿಸಿರುವ ಕಾರ್ತಿಕ್‌ ಅವರಿಗೆ ಬರೋಬ್ಬರಿ 2 ಕೋಟಿ 97 ಲಕ್ಷ 39 ಸಾವಿರದ 904 ವೋಟ್ಸ್ ಬಂದಿದ್ದು.. ಟಾಪ್‌ನಲ್ಲಿದ್ದ 6 ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ವೋಟ್‌ಗಳನ್ನು ಪಡೆದ ಯಶಸ್ಸಿನ ಗರಿ ಕಾರ್ತಿಕ್ ಮಹೇಶ್ ಅವರಿಗೆ ಲಭಿಸಿದೆ.. ಸದ್ಯ ಕಾರ್ತಿಕ್ ಮಹೇಶ್‌ಗೆ 50 ಲಕ್ಷ ರೂ ಮನಿ ಪ್ರೈಜ್‌... ಇದರೊಂದಿದೆ ಮಾರುತಿ ಸುಜುಕಿ ಬ್ರೆಜಾ ಕಾರು.. ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪಡೆದುಕೊಂಡಿದ್ದಾರೆ.. 

ಇನ್ನು BBK 10 ಮತದಾನದ ಟ್ರೆಂಡ್‌ಗಳ ಪ್ರಕಾರ ವರ್ತೂರ್ ಸಂತೋಷ್ ಅಥವಾ ಡ್ರೋನ್ ಪ್ರತಾಪ್ ವಿಜೇತರ ಟ್ರೋಫಿಯನ್ನು ಎತ್ತುತ್ತಾರೆ ಎನ್ನಲಾಗಿತ್ತು.. ಆದರೆ ಎಲ್ಲವೂ ತಲೆಕೆಳಗಾಗಿ ಕಾರ್ತಿಕ್ ಮಹೇಶ್ ‘ಬಿಗ್ ಬಾಸ್‌ ಕನ್ನಡ 10’ ವಿನ್ನರ್‌ ಆಗಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ.. 

ಇದನ್ನೂ ಓದಿ-ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ಟಾಪ್‌ 10 ಮೆಮೊರಬಲ್ ಮೊಮೆಂಟ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News