ವೀಕೆಂಡ್ ಪಂಚಾಯ್ತಿಗೂ ಮುನ್ನ ಬಿಗ್ ಬಾಸ್’ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ: ಆ ಸ್ಪರ್ಧಿಯ ಮಾಜಿ ಗರ್ಲ್’ಫ್ರೆಂಡ್ ಈಕೆ!

Bigg Boss Season 17: ಬಿಗ್ ಬಾಸ್ 17ರಲ್ಲಿ ಹೊಸ ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ. ಮಾಡೆಲ್ ಮತ್ತು ನಟಿ ಆಯೇಶಾ ಖಾನ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. 

Written by - Bhavishya Shetty | Last Updated : Dec 16, 2023, 06:59 PM IST
    • ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಶೋ ಬಿಗ್ ಬಾಸ್ 17
    • ಬಿಗ್ ಬಾಸ್ 17 ಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆಯೇಶಾ ಖಾನ್ ಪ್ರವೇಶ
    • ಈ ಮನೆಯೊಳಗೆ ಪ್ರಸ್ತುತ ಆಡುತ್ತಿರುವ ಓರ್ವ ಸ್ಪರ್ಧಿಯ ಮಾಜಿ ಗರ್ಲ್’ಫ್ರೆಂಡ್ ಈಕೆ
ವೀಕೆಂಡ್ ಪಂಚಾಯ್ತಿಗೂ ಮುನ್ನ ಬಿಗ್ ಬಾಸ್’ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ: ಆ ಸ್ಪರ್ಧಿಯ ಮಾಜಿ ಗರ್ಲ್’ಫ್ರೆಂಡ್ ಈಕೆ! title=
Bigg Boss

Bigg Boss Season 17: ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಶೋ ಬಿಗ್ ಬಾಸ್ 17 ಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆಯೇಶಾ ಖಾನ್ ಪ್ರವೇಶಿಸಲಿದ್ದಾರೆ. ಆಯೇಷಾ ಬೇರಾರು ಅಲ್ಲ, ಈ ಮನೆಯೊಳಗೆ ಪ್ರಸ್ತುತ ಆಡುತ್ತಿರುವ ಓರ್ವ ಸ್ಪರ್ಧಿಯ ಮಾಜಿ ಗರ್ಲ್’ಫ್ರೆಂಡ್.

ಇದನ್ನೂ ಓದಿ: ದ.ಆಫ್ರಿಕಾ ಸರಣಿಯಿಂದ ಶಮಿ ಸೇರಿ ಇಬ್ಬರು ರೂಲ್ಡೌಟ್: ಬದಲಿಯಾಗಿ 27ರ ಹರೆಯದ ವೇಗಿಗೆ ಸ್ಥಾನ

ಸದ್ಯ ಬಿಗ್ ಬಾಸ್ 17ರಲ್ಲಿ ಹೊಸ ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ. ಮಾಡೆಲ್ ಮತ್ತು ನಟಿ ಆಯೇಶಾ ಖಾನ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಪ್ರೋಮೋದಲ್ಲಿ, ಕಾರ್ಯಕ್ರಮದ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ಮುನಾವರ್ ಫರುಕಿಯ ಬಗ್ಗೆ ಆಯೇಶಾ ಕೆಲ ಹೇಳಿಕೆಗಳನ್ನು ನೀಡಿದ್ದಾರೆ.

ಈ ಪ್ರೋಮೋದಲ್ಲಿ, ಆಯೇಷಾ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮುನಾವರ್ ಫರುಕಿ ಜೊತೆ "ಗತ" ಹೊಂದಿದ್ದೇನೆ. ನೀವೆಲ್ಲರೂ ನನ್ನನ್ನು ಆಯೇಶಾ ಖಾನ್ ಎಂದು ತಿಳಿದಿದ್ದೀರಿ. ಅವನು ಬಿಂಬಿಸಿಕೊಳ್ಳುತ್ತಿರುವ ರೀತಿ ಆತನಿಲ್ಲ ಎಂಬುದನ್ನು ನೀವೆಲ್ಲರೂ ತಿಳಿದುಕೊಳ್ಳಬೇಕೆಂದು ನನ್ನ ಬಯಕೆ. ನನಗೆ ಗೊತ್ತಿಲ್ಲ, ಶೋನಲ್ಲಿ ಆತ ಕಮಿಟ್ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಕಾರ್ಯಕ್ರಮಕ್ಕೆ ಪ್ರವೇಶಿಸುವ ಮೊದಲು ನನಗೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ, ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ' ಎಂದು ಹೇಳಿದ್ದರು. ಇದು ಪ್ರತಿ ಹುಡುಗಿಯರೊಂದಿಗೆ ಆತ ಮಾತನಾಡುವ ರೀತಿ. ನನ್ನ ಬಳಿ ಆತ ಕ್ಷಮೆ ಕೇಳಬೇಕು. ನಾನು ಕಾರ್ಯಕ್ರಮಕ್ಕೆ ಹೋಗುತ್ತಿರುವುದಕ್ಕೆ ಇದು ಮುಖ್ಯ ಕಾರಣ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶನಿ-ಕೇತು ಪ್ರೇರಿತ ಷಡಷ್ಟಕ ಯೋಗ: 2027ರವರೆಗೆ ಈ ರಾಶಿಗೆ ಶನಿಯೇ ಅದೃಷ್ಟದೇವತೆ -ಸರ್ಕಾರಿ ಉದ್ಯೋಗ ಅರಸಿ ಬರುತ್ತೆ

ಕೆಲವೇ ದಿನಗಳ ಹಿಂದೆ, ಆಯೇಷಾ ಖಾನ್ ಮುನವ್ವರ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಅವನು 'ಡಬಲ್ ಡೇಟಿಂಗ್' ಮಾಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದಳು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News