ಬಿಗ್’ಬಾಸ್ ಮನೆಯೊಳಗೆ ಬಂದು ಗಂಡನಿಗೆ ಚಪ್ಪಲಿಯಲ್ಲೇ ಹೊಡೆದ ಹೆಂಡತಿ! ತಾರಕಕ್ಕೇರಿದ ಪತಿ-ಪತ್ನಿ ರಂಪಾಟ

Ankita Lokhande throws chappal at husband Vicky Jain: ಬಿಗ್’ಬಾಸ್ ಹಿಂದಿ 17ನೇ ಸೀಸನ್ ಭಾರೀ ಸುದ್ದಿಯಲ್ಲಿದೆ. ಈ ಶೋನಲ್ಲಿರುವ ಎಲ್ಲಾ ಸ್ಪರ್ಧಿಗಳು ಪ್ರೇಕ್ಷಕರನ್ನು ರಂಜಿಸುವುದಕ್ಕಿಂತ, ತಮ್ಮ ವಿಚಿತ್ರ ವರ್ತನೆಯಿಂದಲೇ ಗಮನ ಸೆಳೆಯುತ್ತಿದ್ದಾರೆ.

Written by - Bhavishya Shetty | Last Updated : Nov 23, 2023, 03:26 PM IST
    • ಬಿಗ್’ಬಾಸ್ ಹಿಂದಿ 17ನೇ ಸೀಸನ್ ಭಾರೀ ಸುದ್ದಿಯಲ್ಲಿದೆ
    • ಮನೆಯೊಳಗಿರುವ ದಂಪತಿ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ
    • ಇತ್ತೀಚಿನ ಸಂಚಿಕೆಯಲ್ಲಿ ಅಂಕಿತಾ ತನ್ನ ಪತಿ ವಿಕ್ಕಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ
ಬಿಗ್’ಬಾಸ್ ಮನೆಯೊಳಗೆ ಬಂದು ಗಂಡನಿಗೆ ಚಪ್ಪಲಿಯಲ್ಲೇ ಹೊಡೆದ ಹೆಂಡತಿ! ತಾರಕಕ್ಕೇರಿದ ಪತಿ-ಪತ್ನಿ ರಂಪಾಟ title=
Ankita Lokhande throws chappal at husband

Bigg Boss Season Hindi 17: ಬಿಗ್’ಬಾಸ್ ಹಿಂದಿ 17ನೇ ಸೀಸನ್ ಭಾರೀ ಸುದ್ದಿಯಲ್ಲಿದೆ. ಈ ಶೋನಲ್ಲಿರುವ ಎಲ್ಲಾ ಸ್ಪರ್ಧಿಗಳು ಪ್ರೇಕ್ಷಕರನ್ನು ರಂಜಿಸುವುದಕ್ಕಿಂತ, ತಮ್ಮ ವಿಚಿತ್ರ ವರ್ತನೆಯಿಂದಲೇ ಗಮನ ಸೆಳೆಯುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಇಶಾ ಮಾಳವೀಯ ಮತ್ತು ಸಮರ್ಥ್ ಜುರೇಲ್ ಎಂಬವರ  ರೊಮ್ಯಾನ್ಸ್ ಕಂಡು ಪ್ರೇಕ್ಷಕರು ಗರಂ ಆಗಿದ್ದರು. ಇದೀಗ ಮನೆಯೊಳಗಿರುವ ದಂಪತಿ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ತಮ್ಮ ಗಲಾಟೆಯಿಂದಲೇ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ: AUS ವಿರುದ್ಧದ ಮೊದಲ T20ಯಲ್ಲಿ ಇವರೇ ಟೀಮ್ ಇಂಡಿಯಾದ ಒಪನರ್ಸ್ ! ಇಲ್ಲಿದೆ ಪ್ಲೇಯಿಂಗ್ 11

ಇತ್ತೀಚಿನ ಸಂಚಿಕೆಯಲ್ಲಿ ಅಂಕಿತಾ ತನ್ನ ಪತಿ ವಿಕ್ಕಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಅಂಕಿತಾ ತನ್ನ ಪತಿಗೆ ಚಪ್ಪಲಿಯಲ್ಲಿ ಹೊಡೆದಿದ್ದೇಕೆ?  ಅಲ್ಲಿ ನಿಜಕ್ಕೂ ನಡೆದಿದ್ದೇನು? ಎಂಬೆಲ್ಲಾ ಪ್ರಶ್ನೆಗೆ ಈ ವರದಿಯಲ್ಲಿ ಉತ್ತರ ನೀಡಲಿದ್ದೇವೆ.

ಕಾರ್ಯಕ್ರಮದಲ್ಲಿ 'ದಿಮಾಗ್ ಕಾ ಘರ್'ನಲ್ಲಿ ವಾಸಿಸುವ ವಿಕ್ಕಿ ತನ್ನ ಆಹಾರವನ್ನು ಇಶಾ ಮಾಳವಿಯಾ ಮತ್ತು ಇತರರೊಂದಿಗೆ ಹಂಚಿಕೊಂಡಿದ್ದಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಮುನವ್ವರ್ ಫರುಕಿ ಕೇಳಿದ್ದಾರೆ. ಅದಕ್ಕೆ 'ದಿಲ್ ಕಾ ಘರ್'ನಲ್ಲಿ ವಾಸಿಸುತ್ತಿರುವ ಇಶಾ ಪ್ರತಿಕ್ರಿಯಿಸಿ, 'ಧಮ್ ಕಾ ಘರ್'ನ ಖಂಜಾಡಿ ಬ್ರೈನ್ ರೂಮ್‌’ನ ಸದಸ್ಯರು ಬೇಯಿಸಿದ ಆಹಾರವನ್ನು ಸೇವಿಸಿದ್ದಾರೆ ಎಂದು ಮುನವ್ವರ್‌’ಗೆ ತಿಳಿಸಿದರು.

ವಿಕ್ಕಿ ಆ ಆರೋಪಗಳನ್ನು ನಿರಾಕರಿಸಿದಾಗ, ಅಂಕಿತಾ ಲೋಖಂಡೆ ಕೂಡ ಅಲ್ಲಿಗೆ ಆಗಮಿಸುತ್ತಾರೆ. ನಡೆದ ಘಟನೆ ಬಗ್ಗೆ ತಿಳಿದುಕೊಂಡ ಅಂಕಿತಾ ಬ್ರೈನ್ ರೂಮ್‌’ನ ಸದಸ್ಯರು ಕೊಟ್ಟ ಆಹಾರವನ್ನು ತಿನ್ನುವುದನ್ನು ತಾನು ನೋಡಿದ್ದೇನೆ ಎಂದು ಹೇಳುತ್ತಾಳೆ.

ಇದನ್ನೂ ಓದಿ:26 ಬಾರಿ ವಿಶ್ವಕಪ್ ಗೆದ್ದ ಭಾರತದ ಏಕೈಕ ಆಟಗಾರ ಯಾರೆಂದು ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಇದೇ ವೇಳೆ ವಿಕ್ಕಿ ತಮಾಷೆಯಾಗಿ ಅಂಕಿತಾಳ ಕುತ್ತಿಗೆಯನ್ನು ಹಿಂದಿನಿಂದ ಹಿಡಿದು ಎಳೆದಿದ್ದಾನೆ. ಅಂಕಿತಾ ವಿಕ್ಕಿಯನ್ನು ತಳ್ಳಲು ಪ್ರಯತ್ನಿಸಿದಾಗ, ವಿಕ್ಕಿ ಆಕೆಯ ಕೈಯನ್ನು ಹಿಡಿದಿದ್ದಾರೆ. ಈ ತಮಾಷೆಯ ಸಮಯದಲ್ಲಿ ಅಂಕಿತಾ ವಿಕ್ಕಿಯನ್ನು ಹೊಡೆಯಲೆಂದು ಓಡಿದ್ದಾಳೆ. ಆದರೆ ಆತ ನಿಲ್ಲದಿದ್ದಾಗ ಅಂಕಿತಾ ತನ್ನ ಚಪ್ಪಲಿಯನ್ನು ತೆಗೆದು ವಿಕ್ಕಿಗೆ ಹೊಡೆಯಲು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿದ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News