ಬಿಗ್ ಬಾಸ್ ಶೋ ಹೆಸರಲ್ಲಿ ಮೋಸ.. ಖ್ಯಾತ ನಟಿಗೆ ಲಕ್ಷಗಟ್ಟಲೆ ವಂಚಿಸಿದ ಅಪರಿಚಿತ ವ್ಯಕ್ತಿ!

Swapna Chaudhary: ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲು ವಿಪರೀತ ಕ್ರೇಜ್‌ನೊಂದಿಗೆ ನಟಿ ಅಪರಿಚಿತ ವ್ಯಕ್ತಿಗೆ 2.50 ಲಕ್ಷ ನೀಡಿ ಮೋಸಹೋಗಿದ್ದಾರೆ.. ವಂಚನೆಯ ಬಗ್ಗೆ ತಿಳಿದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

Written by - Savita M B | Last Updated : Jan 7, 2024, 09:14 PM IST
  • ಬಿಗ್ ಬಾಸ್ ಶೋ ಎಂದರೆ ಜನರಲ್ಲಿ ಭಾರೀ ಕ್ರೇಜ್
  • ಭಾಗವಹಿಸಲು ಉತ್ಸುಕರಾಗಿರುವ ಸೆಲೆಬ್ರಿಟಿಗಳೂ ಇದ್ದಾರೆ
  • ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವುದು ಸ್ವಪ್ನಾ ಚೌಧರಿ ಅವರ ಕನಸು.
ಬಿಗ್ ಬಾಸ್ ಶೋ ಹೆಸರಲ್ಲಿ ಮೋಸ.. ಖ್ಯಾತ ನಟಿಗೆ ಲಕ್ಷಗಟ್ಟಲೆ ವಂಚಿಸಿದ ಅಪರಿಚಿತ ವ್ಯಕ್ತಿ!   title=

Bigg Boss: ಬಿಗ್ ಬಾಸ್ ಶೋ ಎಂದರೆ ಜನರಲ್ಲಿ ಭಾರೀ ಕ್ರೇಜ್.. ಇದರಲ್ಲಿ ಭಾಗವಹಿಸಲು ಉತ್ಸುಕರಾಗಿರುವ ಸೆಲೆಬ್ರಿಟಿಗಳೂ ಇದ್ದಾರೆ. ಅವರಲ್ಲಿ ಖಮ್ಮಂ ಜಿಲ್ಲೆಯ ಸ್ವಪ್ನಾ ಚೌಧರಿ ಕೂಡ ಒಬ್ಬರು. ಅವರು ನಮಸ್ತೆ ಸೆಟ್ ಜೀ ಮತ್ತು ಮಿಸ್ಟರಿ ಚಿತ್ರಗಳ ಮೂಲಕ ನಟಿಯಾಗಿ ಪರಿಚಿತರಾಗಿದ್ದಾರೆ.. ಮತ್ತು ಕಾರ್ಯಕ್ರಮಗಳಲ್ಲಿಯೂ ಸಹ ಆಂಕರಿಂಗ್ ಮಾಡುತ್ತಾರೆ. 

ಇದನ್ನೂ ಓದಿ-ಅಮೇರಿಕಾ ಮಾತ್ರವಲ್ಲ: ಜಪಾನ್‌ನಲ್ಲೂ ತೆರೆಕಾಣಲಿದೆ ಸಲಾರ್!‌

ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವುದು ಸ್ವಪ್ನಾ ಚೌಧರಿ ಅವರ ಕನಸು. ಆದರೆ ಇದನ್ನೇ ದಾಳವಾಗಿ ಬಳಸಿದ ತಮ್ಮಳ್ಳಿ ರಾಜು ಎನ್ನುವಾತನೊಬ್ಬ ಬಳಿ 2.50 ಲಕ್ಷ ರೂ. ತೆಗೆದುಕೊಂಡು ನಟಿಗೆ ವಂಚಿಸಿದ್ದಾನೆ.. ಈ ಕುರಿತು ಸ್ವಪ್ನಾ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.. 

ಇದನ್ನೂ ಓದಿ-Captain Miller : ಕ್ಯಾಪ್ಟನ್‌ ಮಿಲ್ಲರ್‌ನಲ್ಲಿ ಧನುಷ್‌ ಡೆವಿಲ್‌..! ಶಿವಣ್ಣ ರಕ್ಷಕನೋ... ರಾಕ್ಷಸನೋ..?

ಬಿಗ್ ಬಾಸ್ ಸೀಸನ್ 1 ರಿಂದ ಸ್ವಪ್ನಾ ಚೌಧರಿ ಫಾಲೋ ಮಾಡುತ್ತಿದ್ದಾರೆ. ಹಗಲಿರುಳು  ಭಾಗವಹಿಸುವ ಕನಸು ಕಾಣುತ್ತಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ತನ್ನನ್ನು ಸ್ಪರ್ಧಿಯಾಗಿ ಕಳುಹಿಸುವುದಾಗಿ ನಂಬಿಸಿ ತಮ್ಮಾಲಿ ರಾಜು ಎಂಬ ವ್ಯಕ್ತಿ ಆಕೆಯಿಂದ 2.50 ಲಕ್ಷ ರೂಪಾಯಿ ಸಂಗ್ರಹಿಸಿದ್ದ. ಆ ಹಣದಲ್ಲಿ ಬಿಗ್ ಬಾಸ್ ನಲ್ಲಿ ಧರಿಸುವ ಕಾಸ್ಟ್ಯೂಮ್ ಗಳನ್ನು ಕಳುಹಿಸಿಕೊಡುವುದಾಗಿಯೂ ಹೇಳಿದ್ದಾರೆ.. ಅದೂ ಅಲ್ಲದೆ ಫೋಟೋ ಶೂಟ್ ಗೆ ಇನ್ನೂ 25 ಸಾವಿರ ರೂ. ಇವೆಲ್ಲವನ್ನೂ ಅಗ್ರಿಮೆಂಟ್ ಪೇಪರ್ ಮೇಲೆ ಬರೆದು ಸಹಿ ಮಾಡಿ ಕೊಡಲಾಗಿದೆ. ಹೀಗಾಗಿ ಸ್ವಪ್ನಾ ಚೌಧರಿ ಬಿಗ್ ಬಾಸ್ ಪ್ರವೇಶಿಸುವುದು ಖಚಿತ ಎಂದು ನಿರ್ಧರಿಸಿದ್ದರು.. ಆದರೆ ಆ ನಂತರ ನಡೆದಿದ್ದೇ ಬೇರೆ.. ಅವನ ನಡುವಳಿಕೆಯಿಂದ ಅನುಮಾನ ಬಂದು ಸ್ವಪ್ನಾ ಚೌಧರಿ ಪ್ರತಿಕ್ರಿಯಿಸಿದಾಗ ಏನು ಬೇಕಾದರೂ ಮಾಡುತ್ತೇನೆ ಎಂದು ರಿವರ್ಸ್‌ನಲ್ಲಿ ಮಾತನಾಡಿದ್ದರಿಂದ ತಾನು ಮೋಸ ಹೋಗಿರುವುದಾಗಿ ನಟಿಗೆ ಅರ್ಥವಾಗಿದೆ.. ಇಷ್ಟೆಲ್ಲ ಆದರೂ ಬಿಗ್ ಬಾಸ್ ಕನಸು ಆಕೆಯಲ್ಲಿ ಉಳಿದಿದೆ ಎಂಬ ಸುಳಿವು ಸಿಕ್ಕಿದೆ. ಅವಕಾಶ ಸಿಕ್ಕರೆ ಮುಂದಿನ ಸೀಸನ್‌ನಲ್ಲಿ ಭಾಗವಹಿಸಲು ಸಿದ್ಧ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News