Bhagyalakshmi Serial:ಮ್ಯಾರೇಜ್ ಆನಿವರ್ಸರಿ ದಿನದಂದು ಭಾಗ್ಯಾಗೆ ಪಾನಿಪುರಿ ತಿನ್ನಿಸಿದ ತಾಂಡವ್!

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಮಕ್ಕಳ ಜೊತೆ ಶಾಪಿಂಗ್‌ ಹೋಗಿ, ತನ್ನ ಹೆಂಡತಿಗೆ ಭಾಗ್ಯಾಗೆ ಸೀರೆ ಕೊಡಿಸಿ, ಮಕ್ಕಳ ಜೊತೆ ಚಾಟ್ಸ್‌ ತಿನ್ನುವುದರೊಂದಿಗೆ ಭಾಗ್ಯಾಗೆ ಕೂಡಾ ತಿನ್ನಿಸುತ್ತಾನೆ. ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 16, 2024, 12:58 PM IST
  • ತಾಂಡವ್‌ಗೆ ಶ್ರೇಷ್ಠಾ, ಗರ್ಭಿಣಿ ಅಲ್ಲ ಎಂಬ ವಿಚಾರ ತಿಳಿದಾಗ, ಈಕೆ ಈತನನ್ನ ಅಲ್ಲಿಗೆ ಕರೆಸಿಕೊಳ್ಳಲು ಸುಳ್ಳು ಹೇಳಿದ್ದು ಎಂದು ಗೊತ್ತಾಗುತ್ತದೆ.
  • ಗುಂಡಣ್ಣ ಕಾಲ್‌ ಮಾಡಿ, "ಪಪ್ಪಾ ಆದಷ್ಟು ಬೇಗ ಮನೆಗೆ ಬನ್ನಿ ಶಾಪಿಂಗ್‌ ಹೋಗಿ ಬರೋಣ ಎನ್ನುತ್ತಾನೆ". ತಾಂಡವ್‌ ಕೂಡ ಮಗ ಫೋನ್‌ ಮಾಡುತ್ತಿದ್ದಂತೆ ಅಲ್ಲಿಂದ ಹೊರಡುತ್ತಾನೆ.
  • ಶಾಪಿಂಗ್‌ ಮುಗಿಸಿದ ಬಳಕ ಎಲ್ಲರೂ ಪಾನಿಪೂರಿ ತಿನ್ನಲು ಹೋದಾಗ, ಒಬ್ಬರಿಗೊಬ್ಬರು ಪಾನಿಪೂರಿ ತಿನ್ನಿಸುತ್ತಾ ಸಂಭ್ರಮಿಸುತ್ತಾರೆ.
Bhagyalakshmi Serial:ಮ್ಯಾರೇಜ್ ಆನಿವರ್ಸರಿ ದಿನದಂದು ಭಾಗ್ಯಾಗೆ ಪಾನಿಪುರಿ ತಿನ್ನಿಸಿದ ತಾಂಡವ್! title=

Bhagya Thandav Marriage Anniversary: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಶ್ರೇಷ್ಠಾಗೆ ತಾಂಡವ್‌ ಮತ್ತೆ ತನ್ನ ಮನೆಗೆ ವಾಪಸ್‌ ಹೋಗಿದ್ದು ಸಹಿಸಿಕೊಳ್ಳಲು ಆಗದೆ, ಈಕೆ ತಾನು ಗರ್ಭಿಣಿಯೆಂದು ಸುಳ್ಳು ಹೇಳುವುವ ಮೂಲಕನ ತಾಂಡವ್‌ನನ್ನು ತನ್ನ ಮನೆಗೆ ಕರೆಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆಗ ತಾಂಡವ್‌ಗೆ ಶ್ರೇಷ್ಠಾ, ಗರ್ಭಿಣಿ ಅಲ್ಲ ಎಂಬ ವಿಚಾರ ತಿಳಿದಾಗ, ಈಕೆ ಈತನನ್ನ ಅಲ್ಲಿಗೆ ಕರೆಸಿಕೊಳ್ಳಲು ಸುಳ್ಳು ಹೇಳಿದ್ದು ಎಂದು ಗೊತ್ತಾಗುತ್ತದೆ.

ಶ್ರೇಷ್ಠ ತಾಂಡವ್‌ ಮನೆಗೆ ಬಂದಾಗ, "ಹೌದು ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳಲು ನಾನು ಸುಳ್ಳು ಹೇಳಿದ್ದು. ನೀನು ಮಾತ್ರ ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದೀಯ, ನಾನು ಇಲ್ಲಿ ಒದ್ದಾಡುತ್ತಿದ್ದೇನೆ ಒಂದು ವೇಳೆ ನೀನು ನನಗೆ ಕೈ ಕೊಟ್ಟರೆ ನಿನ್ನನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ನಾನು ಆ ಭಾಗ್ಯಾ ರೀತಿ ಅಲ್ಲ, ಈ ಶ್ರೇಷ್ಠಾ ಮೋಸ ಮಾಡಿದವರನ್ನು ಬಿಡುವುದಿಲ್ಲ" ಎಂದು ಎಚ್ಚರಿಸುತ್ತಾಳೆ.

ಇದನ್ನೂ ಓದಿ: Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!

ಇದಕ್ಕೆ ಪ್ರತಿಕ್ರಿಯಿಸಿದ ತಾಂಡವ್‌ "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ನಾನು ಭಾಗ್ಯಾಳಿಗಾಗಿ ಈ ಕೆಲಸ ಮಾಡುತ್ತಿಲ್ಲ, ಮಕ್ಕಳ ಖುಷಿಗಾಗಿ ಮಾಡುತ್ತಿದ್ದೇನೆ ನಿನ್ನನ್ನು ಎಂದಿಗೂ ಬಿಡುವುದಿಲ್ಲ, ಖಂಡಿತ ನಮ್ಮ ಮದುವೆ ಆಗುತ್ತದೆ" ಎಂದು ಹೇಳುತ್ತಾನೆ. ಅದೇ ಸಮಯದಲ್ಲಿ ಗುಂಡಣ್ಣ ಕಾಲ್‌ ಮಾಡಿ, "ಪಪ್ಪಾ ಆದಷ್ಟು ಬೇಗ ಮನೆಗೆ ಬನ್ನಿ ಶಾಪಿಂಗ್‌ ಹೋಗಿ ಬರೋಣ ಎನ್ನುತ್ತಾನೆ". ತಾಂಡವ್‌ ಕೂಡ ಮಗ ಫೋನ್‌ ಮಾಡುತ್ತಿದ್ದಂತೆ ಅಲ್ಲಿಂದ ಹೊರಡುತ್ತಾನೆ.

ಇನ್ನೊಂದು ಕಡೆ ಕುಸುಮಾ ಭಾಗ್ಯಾಳನ್ನು ಕರೆದುಕೊಂಡು ಶಾಪಿಂಗ್‌ ಹೋಗಲು ಪ್ಲ್ಯಾನ್‌ ಮಾಡಿದ್ದು, ಮಕ್ಕಳನ್ನು ಭೇಟಿ ಮಾಡಲೆಂದೇ ತಾಂಡವ್‌  ಅಲ್ಲಿಗೆ ಬಂದಾಗ ಭಾಗ್ಯಾ ಇರುವುದನ್ನು ಕಂಡು ಕೋಪ ಮಾಡಿಕೊಳ್ಳುತ್ತಾನೆ. ಆಗ ತಾಂಡವ್‌ ಭಾಗ್ಯಾಗೆ "ಈ ಪ್ಲ್ಯಾನ್‌ ನಿನ್ನದೇನಾ" ಎಂದು ಪ್ರಶ್ನಿಸಿದಾಗ, ಗುಂಡಣ್ಣ ಅಪ್ಪ, ಅಮ್ಮನಿಗೆ ಬೈಯ್ಯಬೇಡಿ, ಅವರಿಗೆ ಏನೂ ಗೊತ್ತಿಲ್ಲ, ಅಜ್ಜಿ ಶಾಪಿಂಗ್‌ಗೆ ಕಳಿಸಿದ್ದು ಎಂದು ಹೇಳುತ್ತಾನೆ. ಆ ವೇಳೆ ತಾಂಡವ್‌ ಮಕ್ಳಳಿಗಾಗಿ ತಾಂಡವ್‌ ಸುಮ್ಮನಾಗಿ, ಬಳಿಕ ಎಲ್ಲರೂ ಶಾಪಿಂಗ್‌ ಮಾಡಲು ಹೊರಡುತ್ತಾರೆ.

ಇದನ್ನೂ ಓದಿ: Samantha: ಹಿರೋಯಿನ್‌ ಆಗಿ ಅಲ್ಲ... ಸಮಂತಾ ಮೊದಲು ಕೆಲಸ ಮಾಡಿದ್ದು ಇಲ್ಲಿ!!

ಶಾಪಿಂಗ್‌ಗೆ ಹೋದಾಗ ತಾಂಡವ್‌ನನ್ನು ಮಕ್ಕಳು ಭಾಗ್ಯಾಗೆ ಸೀರೆ ಸೆಲೆಕ್ಟ್‌ ಮಾಡುವಂತೆ ಒತ್ತಾಯಿಸಿದಾಗ, ಮಕ್ಕಳ ಬಲವಂತದಿಂದಾಗಿ ತಾನೇ ಸೀರೆ ಸೆಲೆಕ್ಟ್‌ ಮಾಡುತ್ತಾನೆ. ತದನಂತರ ಮಕ್ಕಳು ಅಮ್ಮನಿಗೆ ಅಪ್ಪನಿಗೆ ಬಟ್ಟೆ ಆರಿಸಲು ಕೊಡಲು  ಹೇಳುತ್ತಾರೆ. ಅವಾಗ ತಾಂಡವ್‌ ನಿನ್ನ ಅಮ್ಮನಿಗೆ ನನ್ನ ಟೇಸ್ಟ್‌ ಗೊತ್ತಿಲ್ಲ ಎಂದು ಹೇಳುತ್ತಾನೆ. ಇದಕ್ಕೆ ಭಾಗ್ಯಾ, ನಾವು 16ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಬಟ್ಟೆ ಖರೀದಿಸಲು ಬಂದಿದ್ದೇವೆ. ನಿಮಗೆ ನನ್ನ ಇಷ್ಟ ಕಷ್ಟ ಏನೆಂದು ಗೊತ್ತಿಲ್ಲದೇ ಇರಬಹುದು, ಆದರೆ ನನಗೆ ನಿಮ್ಮ ಬಗ್ಗೆ ಗೊತ್ತು ಎಂದು ತಾಂಡವ್‌ ಇಷ್ಟ ಪಡುವ ನೇರಳೆ ಬಣ್ಣದ ಬಟ್ಟೆ ಸೆಲೆಕ್ಟ್‌ ಮಾಡುತ್ತಾಳೆ.

ಶಾಪಿಂಗ್‌ ಮುಗಿಸಿದ ಬಳಕ ಎಲ್ಲರೂ ಪಾನಿಪೂರಿ ತಿನ್ನಲು ಹೋದಾಗ, ಒಬ್ಬರಿಗೊಬ್ಬರು ಪಾನಿಪೂರಿ ತಿನ್ನಿಸುತ್ತಾ ಸಂಭ್ರಮಿಸುತ್ತಾರೆ. ಅದೇ ಸಂದರ್ಭದಲ್ಲಿ ಮಕ್ಕಳು ಭಾಗ್ಯಾಗೆ ತಿನ್ನಿಸುವಂತೆ ಒತ್ತಾಯಿಸಿದಾಗ ಮಕ್ಕಳ ಸಂತೋಷಕ್ಕಾಗಿ ಭಾಗ್ಯಾಗೆ ತಾಂಡವ್‌ ತಿನ್ನಿಸುತ್ತಾನೆ. ಇದನ್ನು ದೂರದಿಂದಲೇ ಸುಂದರಿ ನೋಡಿ ವಿಡಿಯೋ ರೆಕಾರ್ಡ್‌ ಮಾಡಿ ಶ್ರೇಷ್ಠಾಗೆ ಕಳಿಸಿದಾಗ, ಈಕೆ ಬೇಸರವಾಗುತ್ತಾಳೆ. ಅದೇ ಟೈಮ್‌ಗೆ ಪೂಜಾ ಶ್ರೇಷ್ಠಾಗೆ ಕರೆ ಮಾಡಿ, ನಾಳೆ ಅಕ್ಕ ಭಾವ ವೆಡ್ಡಿಂಗ್‌ ಆನಿವರ್ಸರಿ ಇದೆ ಮನೆಗೆ ಬಾ ಎಂದು ಕರೆಯುತ್ತಾಳೆ. ಇದೀಗ ತಾಂಡವ್-ಭಾಗ್ಯ ಒಟ್ಟಿಗಿರುವುದನ್ನು ಶ್ರೇಷ್ಠಾ ಇಬ್ಬರನ್ನು ದೂರ ಮಾಡಲು ಏನು ಪ್ಲ್ಯಾನ್‌ ಮಾಡುತ್ತಾಳೆ? ವಿವಾಹ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ,

ಇದನ್ನೂ ಓದಿ: ನಿಜ ಜೀವನದಲ್ಲಿ ಈ ಖ್ಯಾತ ನಟನನ್ನೇ ಪ್ರೀತಿಸಿ ವರಿಸಿದ್ದು ಅಮೃತಧಾರೆ ಧಾರಾವಾಹಿಯ "ಭೂಮಿಕಾ" ! ಮೇಡ್ ಫಾರ್ ಈಚ್ ಅದರ್ ಇವರಿಬ್ಬರು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News