Bhagyalakshmi Serial: ತಾಂಡವ್‌ ಮಾತುಗಳಿಂದ ಹಠ ತೊಟ್ಟ ಭಾಗ್ಯಾ: ಮನೆಯನ್ನು ನಿಭಾಯಿಸಲು ಕೆಲಸಕ್ಕಾಗಿ ಹುಡುಕಾಟ!

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್‌ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Apr 24, 2024, 02:48 PM IST
  • ತಾಂಡವ್‌ ಭಾಗ್ಯಾ ಮುಂದೆ ಮನೆಯನ್ನು ಅರ್ಧ ಭಾಗ ಮಾಡಿದರೆ ಮಾತ್ರ ಸಾಲದು. ಅದರ ಇಎಂಐನಲ್ಲೂ ಅರ್ಧ ಖರ್ಚನ್ನು ನೋಡಿಕೊಳ್ಳಬೇಕು ಎಂದು ಹೇಳುತ್ತಾನೆ.
  • ಭಾಗ್ಯಾ ತಾಂಡವ್‌ ಮಾತಿಗೆ ತಕ್ಕಂತೆ ಖಡಕ್‌ ಆಗಿ ಆಯ್ತು ಮನೆಯ ಅರ್ಧ ಹಣ ನಾನು ಕೊಡುತ್ತೇನೆ ಎಂದಿದ್ದಾಳೆ.
  • ಭ್ಯಾಗ್ಯಾ ಆ ವ್ಯಕ್ತಿಯ ನಡವಳಿಕೆ ನೋಡಿ ಹೊರಗೆ ಬಂದು ಬಿಡುತ್ತಾನೆ. ನಂತರ ಭಾಗ್ಯಾ ಕೆಲಸ ಕೇಳಲೇಬೇಕೆಂದು ಮತ್ತೆ ಹೊಗುತ್ತಾಳೆ.
Bhagyalakshmi Serial: ತಾಂಡವ್‌ ಮಾತುಗಳಿಂದ ಹಠ ತೊಟ್ಟ ಭಾಗ್ಯಾ: ಮನೆಯನ್ನು ನಿಭಾಯಿಸಲು ಕೆಲಸಕ್ಕಾಗಿ ಹುಡುಕಾಟ! title=

Bhagya Searching For Job: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್‌ ಭಾಗ್ಯಾ ಮುಂದೆ ಮನೆಯನ್ನು ಅರ್ಧ ಭಾಗ ಮಾಡಿದರೆ ಮಾತ್ರ ಸಾಲದು. ಅದರ ಇಎಂಐನಲ್ಲೂ ಅರ್ಧ ಖರ್ಚನ್ನು  ನೋಡಿಕೊಳ್ಳಬೇಕು. ನಾನು ಯಾಕೆ ನಿಮ್ಮೆಲ್ಲರದ್ದು ಹಣ ಕಟ್ಟಬೇಕು. ಕಟ್ಟೋದಕ್ಕೆ ಆಗದೆ ಹೋದರೆ ನಿನ್ನ ಜೊತೆಗೆ ಇರುವ ಎಲ್ಲರನ್ನು ಕರೆದುಕೊಂಡು ಹೋಗ್ತಾ ಇಲ್ಲಿಂದ ಹೋಗುತ್ತಾ ಇರು ಎಂದು ಹೇಳುತ್ತಾನೆ. 

ಅದಕ್ಕೆ ಭಾಗ್ಯಾ ತಾಂಡವ್‌ ಮಾತಿಗೆ ತಕ್ಕಂತೆ ಖಡಕ್‌ ಆಗಿ ಆಯ್ತು ಮನೆಯ ಅರ್ಧ ಹಣ ನಾನು ಕೊಡುತ್ತೇನೆ. ನಮ್ಮ ಅತ್ತೆ, ಮಾವನಿಗಾಗಿ, ಮಕ್ಕಳಿಗಾಗಿ ನಾನು ನಿಲ್ಲುತ್ತೇನೆ. ಇನ್ಮೇಲೆ ಪ್ರತಿ ತಿಂಗಳ ಅರ್ಧ ಖರ್ಚು ನನ್ನದೇ ಎಂದು ಹೇಳಿರುತ್ತಾಳೆ. ಅದಕ್ಕೆ ಸದ್ಯ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಹಠವನ್ನು ತೊಟ್ಟಿದ್ದಾಳೆ. ತನನ್ನು ನಂಬಿರುವವರನ್ನು ನಾನು ಕಾಪಾಡಲೇಬೇಕೆಂದರೆ ನಾನು ಕೆಲಸ ಮಾಡಲು ನಿರ್ಧಾರಿಸಿದ್ದಾಳೆ.

ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಭೇಟಿ ಮಾಡಿದ ನಟಿ ಹರ್ಷಿಕಾ ಪೂಣಚ್ಚ- ಭುವನ್ ದಂಪತಿ

ಕೆಲವನ್ನು ಹುಡುಕಿಕೊಂಡು ಹೋದ ಭಾಗ್ಯಾ ಹೊಟೇಲ್ ಒಂದಕ್ಕೆ ಕೆಲಸ ಕೇಳಿಕೊಂಡು  ಹೋಗುತ್ತಾಳೆ. ಆರಂಭದಲ್ಲಿಯೇ ರಗಡ್‌ ಇರುವ ಹೋಟೆಲ್‌ ಮಾಲಿಕ  ಹೋಗಿರುತ್ತಾಳೆ. ಆ ಹೋಟೆಲ್‌ನಲ್ಲಿ ಓನರ್‌ ಅಲ್ಲಿನ ಕೆಲಸಗಾರರಿಗೆ ಸಂಬಳ ಕೊಡುವುದಕ್ಕೆ ಕಿರುಚಾಡುತ್ತಿರುತ್ತಾನೆ. ಇದನ್ನು ನೋಡಿದ ಭ್ಯಾಗ್ಯಾ ಆ ವ್ಯಕ್ತಿಯ ನಡವಳಿಕೆ ನೋಡಿ ಹೊರಗೆ ಬಂದು ಬಿಡುತ್ತಾನೆ. ನಂತರ ಭಾಗ್ಯಾ ಕೆಲಸ ಕೇಳಲೇಬೇಕೆಂದು ಮತ್ತೆ ಹೊಗುತ್ತಾಳೆ.

ಭಾಗ್ಯಾಗೆ ಗಂಡನ ಮಾತುಗಳು ನೆನಪಿಗೆ ಬಂದಿದ್ದ ಕಾರಣ, ಮತ್ತೆ ಹೋಟೆಲ್‌ ಒಳಗೆ ಹೋದಾಗ ಆಕೆ ಚಂದ ತೆಗೆದುಕೊಳ್ಳಲು ಬಂದಿದ್ದಾಳೆ ಎಂದು ಭಾವಿಸುತ್ತಾನೆ. ಅವಾಗ ಭಾಗ್ಯಾ ಅದಕ್ಕಲ್ಲ ಬಂದಿದ್ದು ಎಂದಿದಕ್ಕೆ, ಆತ ಭಿಕ್ಷೆ ಕೇಳಲು ಬಂದವರಂತೆ ನಡೆದುಕೊಂಡಿದ್ದಾನೆ. ಬಳಿಕ ಭಾಗ್ಯಾ ಕೆಲಸ ಕೇಳಿದಕ್ಕೆ ತಕ್ಷಣ ಸಾಧ್ಯವೇ ಇಲ್ಲ ಎಂಬಂತೆ ಹೇಳಿದ್ದಾನೆ‌. ಇದು ಭಾಗ್ಯಾಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ: Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!

ಭಾಗ್ಯಾಗೆ ಮೊದಲ ಪ್ರಯತ್ನದಲ್ಲಿಯೇ  ಈ ರೀತಿ ಅವಮಾನವಾಗಿದ್ದರಿಂದ ಈಕೆ  ಸಂಕಟ ಪಟ್ಟಿದ್ದಾಳೆ. ಮುಂದೆ ಭ್ಯಾಗ್ಯಾಗೆ ಕೆಲಸ ಸಿಗುತ್ತಾ? ಭಾಗ್ಯಾ ಮನೆಯವರೆಲ್ಲಾ ಇಟ್ಟ ನಂಬಿಕೆ ಇಟ್ಟಂತೆ ಎಲ್ಲರನ್ನೂ ಕಾಪಾಡಿಕೊಳ್ಳುತ್ತಾಳಾ? ಮನೆಯನ್ನು ನಿಭಾಯಿಸುತ್ತಾಳೆ ಎಂಬುದನ್ನು ಮುಂಬರುವ ಸಂಚಿಕೆಯನ್ನು ನೋಡಿ ತಿಳಿಯಬೇಕು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News