Animal: ಅನಿಮಲ್‌ OTT ರಿಲೀಸ್‌ ಡೇಟ್‌ ಫಿಕ್ಸ್‌..! ಆ ಸ್ಪೇಷಲ್‌ ದಿನದಂದು ಸ್ಟ್ರೀಮಿಂಗ್

Animal OTT Release Date: ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳ ನಂತರ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಇತ್ತೀಚಿನ ಚಿತ್ರ ಅನಿಮಲ್. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು.. ಇದೀಗ ಈ ಚಿತ್ರದ OTT ಸ್ಟ್ರೀಮಿಂಗ್ ದಿನಾಂಕವನ್ನು ನಿಗದಿಪಡಿಸಲಾಗಿದೆ...   

Written by - Savita M B | Last Updated : Jan 3, 2024, 07:21 AM IST
  • ರಣಬೀರ್ ಕಪೂರ್‌ ಅಭಿನಯದ ಅನಿಮಲ್‌ ಸಿನಿಮಾ ತೆರೆಗೆ ಅಪ್ಪಳಿಸಿ ಧೂಳೆಬ್ಬಿಸಿದೆ..
  • ಮೊದಲಿಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು
  • ಇದೀಗ ಈ ಸಿನಿಮಾದ OTT ಬಿಡುಗಡೆ ದಿನಾಂಕದ ಮಾಹಿತಿಯೊಂದು ಹೊರಬಿದ್ದಿದೆ
Animal: ಅನಿಮಲ್‌ OTT ರಿಲೀಸ್‌ ಡೇಟ್‌ ಫಿಕ್ಸ್‌..! ಆ ಸ್ಪೇಷಲ್‌ ದಿನದಂದು ಸ್ಟ್ರೀಮಿಂಗ್  title=

Animal: ರಣಬೀರ್ ಕಪೂರ್‌ ಅಭಿನಯದ ಅನಿಮಲ್‌ ಸಿನಿಮಾ ತೆರೆಗೆ ಅಪ್ಪಳಿಸಿ ಧೂಳೆಬ್ಬಿಸಿದೆ.. ಮೊದಲಿಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.. ಕೆಲವರು ಸಿನಿಮಾ ಕಂಟೆಂಟ್‌ನ್ನು ಹೆಚ್ಚು ಎಳೆದಿದ್ದಾರೆ.. ಅಂತಾರೆ ಇನ್ನು ಕೆಲವರು ತಂದೆ ಸೆಂಟಿಮೆಂಟ್, ಸಾಹಸ ದೃಶ್ಯಗಳು, ಹಾಡುಗಳು ಚೆನ್ನಾಗಿವೆ ಅಂತಾರೆ.. ಆದರೆ ರಣಬೀರ್ ತಮ್ಮ ಅಭಿನಯದಿಂದ ಇಂಪ್ರೆಸ್ ಮಾಡಿದ್ದಾರೆ. ಅಂತಿಮವಾಗಿ ಈ ಚಿತ್ರ ಈ ವರ್ಷದ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಯಿತು.  

ಇನ್ನು ಈ ಸಿನಿಮಾದ ಕಲೆಕ್ಷನ್ಸ್ ವಿಚಾರಕ್ಕೆ ಬಂದರೆ.. ಇಲ್ಲಿಯವರೆಗೆ ಅನಿಮಲ್ ವರ್ಲ್ಡ್ ವೈಡ್ ರೂ. 493.50 ಕೋಟಿ (ರೂ. 898.90 ಕೋಟಿ ಒಟ್ಟು). ಮತ್ತು ತೆಲುಗಿನಲ್ಲೂ ರೂ. 72.50 ಕೋಟಿ.. ಒಟ್ಟು ರೂ. 36.70 ಕೋಟಿ ಷೇರು ಪಡೆದಿದೆ ಎಂದು ಕೆಲವು ಮೂಲಗಳು ಹೇಳಿವೆ. ಇದಲ್ಲದೆ ತೆಲುಗಿನಲ್ಲಿ ರೂ. 15 ಕೋಟಿ ಗುರಿ ರೂ. 21.70 ಕೋಟಿ ಗಳಿಕೆಯೊಂದಿಗೆ ಬ್ಲಾಕ್ ಬಸ್ಟರ್ ಆದ ಸಿನಿಮಾ ಅಮೆರಿಕಾದಲ್ಲಿ ಅದು ಈಗಾಗಲೇ 13 ಮಿಲಿಯನ್ ಡಾಲರ್ ಸಂಗ್ರಹಿಸಿದೆ... ಒಟ್ಟಿನಲ್ಲಿ ಅನಿಮಲ್ ರಣಬೀರ್ ಕಪೂರ್ ಅವರ ವೃತ್ತಿಜೀವನದ ದೊಡ್ಡ ಹಿಟ್ ಎಂದರೇ ತಪ್ಪಾಗುವುದಿಲ್ಲ..

ಇದನ್ನೂ ಓದಿ-ಸಂಗೀತಾ ಶೃಂಗೇರಿ ಅನ್ನೋದು ನನ್ನ ನಿಜವಾದ ಹೆಸರಲ್ಲ, ಇದು ನನ್ನ ರಿಯಲ್ ನೇಮ್: ಸ್ವಾಮೀಜಿ ಮುಂದೆ ಸತ್ಯ ಬಾಯ್ಬಿಟ್ಟ ನಟಿ

ಈ ಸಿನಿಮಾದ ಒಟಿಟಿ ವಿಚಾರಕ್ಕೆ ಬಂದರೆ.. ಅನಿಮಲ್ ಓಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು.. ಜನವರಿ 26 ಗಣರಾಜ್ಯೋತ್ಸವದಿಂದ ಈ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು. 

ಇದನ್ನೂ ಓದಿ-Jaggesh health: ನಟ ಜಗ್ಗೇಶ್‌ಗೆ ಅನಾರೋಗ್ಯ... ಹಾಸಿಗೆ ಹಿಡಿದ ವಿಡಿಯೋ ವೈರಲ್‌

ಇನ್ನು  ಸಿನಿಮಾದ ಕಥೆಯ ವಿಚಾರಕ್ಕೆ ಬಂದರೆ.. ಅಪ್ಪ-ಮಗನ ಸೆಂಟಿಮೆಂಟ್ ಅನ್ನು ಈ ಸಿನಿಮಾದಲ್ಲಿ ತುಂಬಾ ಆಳವಾಗಿ ತೋರಿಸಲಾಗಿದ್ದು.. ಅನಿಲ್ ಕಪೂರ್, ಬಬ್ಲು ಪೃಥ್ವಿರಾಜ್, ಬಾಬಿ ದೇವೋಲ್ ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. 

 ಈ ಚಿತ್ರವನ್ನು ಹಿಂದಿಯ ಟಾಪ್ ಪ್ರೊಡಕ್ಷನ್ ಕಂಪನಿ ಟಿ ಸೀರೀಸ್ ನಿರ್ಮಿಸಿದೆ. ಹಿಂದಿಯಲ್ಲದೆ, ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಡಿಸೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News