ರಾಮ್ ಚರಣ್ ಬೇಬಿ ಜೊತೆ ಅಲ್ಲು ಅರ್ಜುನ್ ಮಗಳ ಕ್ಯೂಟ್‌ ಡ್ಯಾನ್ಸ್..! ವಿಡಿಯೋ ಇಲ್ಲಿದೆ

Allu Arha viral video : ಸಾಮಾಜಿಕ ಜಾಲತಾಣದಲ್ಲಿ ಸ್ಟೈಲಿಶ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕ್ಯೂಟ್‌ ವಿಡಿಯೋವೊಂದು ಎಲ್ಲರ ಮನ ಸೆಳೆಯುತ್ತಿದೆ. ಕ್ಲಿಪ್‌ನಲ್ಲಿ, ಅಲ್ಲು ಅರ್ಹಾ ತನ್ನ ಸೋದರಸಂಬಂಧಿ ಕ್ಲಿನ್ ಕಾರಾ ರಾಮ್‌ ಚರಣ್‌ ಜೊತೆ ನೃತ್ಯ ಮಾಡುವ ದೃಶ್ಯವಿದ್ದು, ಸಖತ್‌ ವೈರಲ್‌ ಆಗುತ್ತಿದೆ. 

Written by - Krishna N K | Last Updated : Jan 17, 2024, 12:03 PM IST
  • ಅಲ್ಲು ಅರ್ಹಾ ಕ್ಯೂಟ್‌ ವಿಡಿಯೋ ವೈರಲ್‌
  • ನಟ ಅಲ್ಲು ಅರ್ಜುನ್ ಮಗಳು ಅರ್ಹಾ
  • ರಾಮ್‌ ಚರಣ್‌ ಮಗಳ ಜೊತೆ ಅರ್ಹಾ ಡಾನ್ಸ್‌
ರಾಮ್ ಚರಣ್ ಬೇಬಿ ಜೊತೆ ಅಲ್ಲು ಅರ್ಜುನ್ ಮಗಳ ಕ್ಯೂಟ್‌ ಡ್ಯಾನ್ಸ್..! ವಿಡಿಯೋ ಇಲ್ಲಿದೆ title=

Allu arha Klin kaara video :  ಟಾಲಿವುಡ್‌ ಸೂಪರ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ವಿಡಿಯೋದಲ್ಲಿ ಅರ್ಹಾ ಗ್ಲೋಬಲ್‌ ಸ್ಟಾರ್‌ ನಟ ರಾಮ್‌ಚರಣ್‌ ಮಗಳು ಕ್ಲಿನ್ ಕಾರಾ ಜೊತೆ ನೃತ್ಯ ಮಾಡಿದ್ದಾಳೆ. 

ಹೌದು.. ಕ್ಲಿನ್ ಕಾರಾ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರ ಮಗಳು. X(ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಈ ಶಾರ್ಟ್‌ ವೀಡಿಯೊದಲ್ಲಿ, ಉಪಾಸನಾ ಕೊನಿಡೆಲಾ ಅವರು ಕ್ಲಿನ್ ಕಾರವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿದ್ದು, ಅಲ್ಲು ಅರ್ಹಾ ನಗುತ್ತಾ ನಿಧಾನವಾಗಿ ಅವಳ ಮುಂದೆ ಕುಣಿಯುತ್ತಿದ್ದಾಳೆ.  

ಇದನ್ನೂ ಓದಿ:ಈ ಸ್ಟಾರ್‌ ಹೀರೋಯಿನ್‌ ಜೊತೆ ಲವ್‌ನಲ್ಲಿದ್ರಂತೆ ರಜನಿಕಾಂತ್..!‌ ತಲೈವಾ ಹೃದಯ ಕದ್ದ ಲೇಡಿ ಯಾರು ಗೊತ್ತಾ?

ವಿಡಿಯೋದಲ್ಲಿ, ಕಪ್ಪು ಜಾಕೆಟ್ ಮತ್ತು ಪ್ಯಾಂಟ್‌ನಲ್ಲಿ ಉಪಾಸನಾ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಹ ಪಿಂಕ್ ಡ್ರೆಸ್ ತೊಟ್ಟು, ಕ್ಲಾರಾ ಮುಂದೆ ಪುಷ್ಪಾ ಸಿನಿಮಾದ ಐಕಾನ್‌ ಸಾಂಗ್‌ ಚೂಪೆ ಬಂಗಾರ ಮಾಯನೇ ಹಾಡಿಗೆ ಡಾನ್ಸ್‌ ಮಾಡಿದ್ದಾರೆ. ಸಧ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಅಲ್ಲು ಮತ್ತು ಮೆಗಾ ಫ್ಯಾನ್ಸ್‌ಗೆ ಸಖತ್‌ ಇಷ್ಟವಾಗಿದೆ.

ಕಳೆದ ಸೋಮವಾರ ಮೆಗಾ ಮತ್ತು ಅಲ್ಲು ಕುಟುಂಬ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿತ್ತು. ಅಲ್ಲದೆ, ತುಂಬು ಸಂಸಾರದ ಫೋಟೋ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಎರಡು ಕುಟುಂಬಗಳ ಅಭಿಮಾನಿಗಳು ಈ ಫೋಟೋ ನೋಡಿ ಖುಷಿ ಪಟ್ಟಿದ್ದರು. ಅಲ್ಲದೆ, ವಿಶೇಷ ಅಂದ್ರೆ ಪವನ್‌ ಕಲ್ಯಾಣ್‌ ಮಾಜಿ ಪತ್ನಿ ರೇಣು ದೇಸಾಯಿ ಮಕ್ಕಳು ಸಹಿತ ಈ ಚಿತ್ರದಲ್ಲಿದ್ದರು.

ಇದನ್ನೂ ಓದಿ:BBK 10: ಕಾರ್ತಿಕ್’ಗೆ ಇದೆಯಂತೆ ನಾಗದೋಷ! 2 ವಾರದಿಂದ ಆಟ ಮಂಕಾಗಲು ಅದೇ ಕಾರಣ ಎಂದ ದೊಡ್ಮನೆ ‘ಜ್ಯೋತಿಷಿ’

ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಜೂನ್ 14, 2012 ರಂದು ವಿವಾಹವಾದರು. ಮದುವೆಯಾಗಿ 11 ವರ್ಷಗಳ ನಂತರ, ದಂಪತಿಗಳು ಕಳೆದ ವರ್ಷ ಜೂನ್ 20 ರಂದು ಹೈದರಾಬಾದ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಹಾಗೆಯೇ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಮಾರ್ಚ್ 6, 2011 ರಂದು ವಿವಾಹವಾದರು. ಅವರಿಗೆ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ಎಂಬ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News