Valimai: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ವಲಿಮೈ’ ZEE5 ಒಟಿಟಿಗೆ ಎಂಟ್ರಿ..!

ಥಲಾ ಅಜಿತ್ ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ‘ವಲಿಮೈ’ ಸಿನಿಮಾ ZEE5 ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ.

Written by - Malathesha M | Edited by - Puttaraj K Alur | Last Updated : Mar 21, 2022, 08:52 PM IST
  • ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ವಲಿಮೈ’ ಒಟಿಟಿಗೆ ಎಂಟ್ರಿ ಕೊಡಲಿದೆ
  • ಮಾ.25ರಿಂದ ZEE5 ಒಟಿಟಿಯಲ್ಲಿ ಕಮಾಲ್ ಮಾಡಲಿರುವ ಸಿನಿಮಾ
  • ಥಲಾ ಅಜಿತ್ ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ‘ವಲಿಮೈ’ ಸಿನಿಮಾ
Valimai: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ವಲಿಮೈ’ ZEE5 ಒಟಿಟಿಗೆ ಎಂಟ್ರಿ..! title=
ಒಟಿಟಿಗೆ ‘ವಲಿಮೈ’ ಎಂಟ್ರಿ ಕೊಡಲಿದೆ

ಬೆಂಗಳೂರು: ಥಲಾ ಅಜಿತ್(Ajith Kumar) ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ‘ವಲಿಮೈ’ ಸಿನಿಮಾ ZEE5 ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ. ಇದೇ ಶುಭ ಶುಕ್ರವಾರದಂದು ಪ್ರತಿಷ್ಠಿತ ZEE5 ಒಟಿಟಿಯಲ್ಲಿ ‘ವಲಿಮೈ’ ರಿಲೀಸ್ ಆಗ್ತಿದೆ. ಕಳೆದ ಫೆಬ್ರವರಿ 25ರಂದು ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಿದ್ದ ‘ವಲಿಮೈ’ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುವ ಮೂಲಕ ಕೋಟಿ ಕೋಟಿ ಹಣ ಬಾಚಿತ್ತು. ಅಜಿತ್ ಆಕ್ಷನ್ ಬೈಕ್ ಸ್ಟಂಟ್ ಕಂಡು ಫ್ಯಾನ್ಸ್ ಥ್ರಿಲ್ಲ್ ಆಗಿದ್ದರು. ಇದೀಗ ZEE5 ಒಟಿಟಿಯಲ್ಲಿ ಮಾರ್ಚ್ 25ರಿಂದ ‘ವಲಿಮೈ’ ಪ್ರೀಮಿಯರ್ ಆಗ್ತಿದೆ.

10 ಸಾವಿರ ಚದರ ಅಡಿ ‘ವಲಿಮೈ’ ಪೋಸ್ಟರ್

ZEE5 ಒಟಿಟಿಯಲ್ಲಿ ‘ವಲಿಮೈ’(Valimai Movie) ಪ್ರದರ್ಶನ ಕಾಣ್ತಿರುವ ಹಿನ್ನೆಲೆ ಚಿತ್ರತಂಡ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ‘ನಾ ಭೂತೋ ನಾ ಭವಿಷ್ಯತ್’ ಎನ್ನುವ ಹಾಗೇ ಹಿಂದೆ ಯಾರು ಮಾಡದ ರೀತಿ ಪ್ರಮೋಷನ್ ಮಾಡಿದೆ. ಬರೋಬ್ಬರಿ 10 ಸಾವಿರ ಚದರ ಅಡಿಯಲ್ಲಿ ‘ವಲಿಮೈ’ ಸಿನಿಮಾದ ಪೋಸ್ಟರ್ ವೊಂದನ್ನು ZEE5 ಬಿಡುಗಡೆ ಮಾಡಿ ಚಿತ್ರರಸಿರಕನ್ನು ಅಟ್ರ್ಯಾಕ್ಟ್ ಮಾಡ್ತಿದೆ. ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಈವರೆಗೆ ಇಷ್ಟು ದೊಡ್ಡ ಮಟ್ಟದ ಪೋಸ್ಟರ್ ಅನ್ನು ಯಾರು ಬಿಡುಗಡೆ ಮಾಡಿಲ್ಲ. ಆದ್ರೆ ZEE5 ಇಂತಹ ವಿಶೇಷ ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದೆ.

ಇದನ್ನೂ ಓದಿ: RRR: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'RRR'

ಕನ್ನಡದಲ್ಲೂ ‘ವಲಿಮೈ’ ಕಮಾಲ್..!

ಅಜಿತ್ ನಟನೆಯ ‘ವಲಿಮೈ’ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ.. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈಗ ZEE5 ಒಟಿಟಿ(ZEE5 OTT)ಯಲ್ಲಿ 5 ಭಾಷೆಯಲ್ಲಿ ಮಾರ್ಚ್ 25ರಿಂದ ಪ್ರೀಮಿಯರ್ ಆಗಲಿದೆ.

‘ವಲಿಮೈ’ ಚಿತ್ರದಲ್ಲಿ ಅಜಿತ್(Ajith Kumar) ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್.ವಿನೋದ್ ನಿರ್ದೇಶನದ ಈ ಸಿನಿಮಾಗೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಸುಮಾರು 150 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಜಿತ್‌ ಜೊತೆಗೆ ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Toofan Lyrical Video: 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News