Tejaswini Prakash: ಮುದ್ದಾದ ಮಗಳ ಹೆಸರು ರಿವೀಲ್‌ ಮಾಡಿದ ಕಿರುತೆರೆ ನಟಿ ತೇಜಸ್ವಿನಿ!!

Tejaswini Prakash Daughter: ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್‌ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಇದೀಗ ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಮಗಳ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 25, 2024, 10:31 AM IST
  • ತೇಜಸ್ವಿನಿ ಪ್ರಕಾಶ್‌ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಾದ ನಟಿ ಇದೀಗ ಮುದ್ದಾದ ಮಗಳ ನಾಮಕರಣದ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ.
  • ತೇಜಸ್ವಿನಿ ಪ್ರಕಾಶ್‌ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್‌ ಮಾಡುವುದರ ಜೊತೆಗೆ "ದೇವತೆಗಳು ಮಕ್ಕಳ ರೂಪದಲ್ಲಿ ನಮ್ಮನ್ನು ಸೇರುತ್ತಾರೆ" ಎಂದು ಬರೆದುಕೊಂಡಿದ್ದಾರೆ.
  • ನಟಿ ತೇಜಸ್ವಿನಿ ಪ್ರಕಾಶ್‌ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಹಾರಿಕಾ' ಸೀರಿಯಲ್‌ನಲ್ಲಿ ನಾಯಕಿಯಾಗಿ ಕಿರುತೆರೆ ಪದಾರ್ಪಣೆ ಮಾಡಿದರು.
Tejaswini Prakash: ಮುದ್ದಾದ ಮಗಳ ಹೆಸರು ರಿವೀಲ್‌ ಮಾಡಿದ ಕಿರುತೆರೆ ನಟಿ ತೇಜಸ್ವಿನಿ!! title=

Tejaswini Prakash Daughter Name Revealed: ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ತನ್ನ ನಟನೆ ಮೂಲಕ ಮೋಡಿ ಮಾಡಿದ ನಟಿ ತೇಜಸ್ವಿನಿ ಪ್ರಕಾಶ್‌ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಾದ ನಟಿ ಇದೀಗ ಮುದ್ದಾದ ಮಗಳ ನಾಮಕರಣದ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ. ಈ ನಟಿ ತಮ್ಮ ಮಗುವಿನ ಹೆಸರನ್ನು ರಿವೀಲ್‌ ಮಾಡಿದ್ದಾರೆ.

ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ತೇಜಸ್ವಿನಿ ಪ್ರಕಾಶ್‌ ತಮ್ಮ ಮಗಳಿಗೆ ಅನ್ವಿಕಾ ವರ್ಮ ಎಂಬ ಹೆಸರು ಇಟ್ಟಿದ್ದಾರೆ. ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್‌ ಮಾಡುವುದರ ಜೊತೆಗೆ "ದೇವತೆಗಳು ಮಕ್ಕಳ ರೂಪದಲ್ಲಿ ನಮ್ಮನ್ನು ಸೇರುತ್ತಾರೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kangana Ranaut: ಲೋಕಸಭೆ ಚುನಾವಣೆ ಕಣದಲ್ಲಿ ಬಾಲಿವುಡ್ ಕ್ವೀನ್ ಕಂಗನಾ.. ಸ್ಪರ್ಧೆ ಎಲ್ಲಿಂದ ಗೊತ್ತಾ?

ನಟಿ ತೇಜಸ್ವಿನಿ ಪ್ರಕಾಶ್‌ ಕೆಲವು ವರ್ಷಗಳ ಹಿಂದೆ ಫಣಿ ವರ್ಮ ಎಂಬುವವರ ಜೊತೆ ದಾಂಪತ್ಯಕ್ಕೆ ಹೆಜ್ಜೆಹಾಕಿದ್ದು, ತಮ್ಮ ವೈವಾಹಿಕ ಜೀವನವನ್ನು ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಈ ಜೋಡಿಗೆ ಹೆಣ್ಣು ಮಗುವೊಂದು ಜನಿಸಿರುವುದು ತಮ್ಮ ಸಂತೋಷವನ್ನು ಇನ್ನಷ್ಟು ದುಪ್ಪಟ್ಟಾಗಲು ಕಾರಣವಾಗಿದೆ.

ತೇಜಸ್ವಿನಿ ಪ್ರಕಾಶ್‌ 'ಮಸಣದ ಮಕ್ಕಳು' ಸಿನಿಮಾದ ಮೂಲಕ ಅಭಿನಯಕ್ಕೆ ಹೆಜ್ಜೆಹಾಕಿದವರು ಬಳಿಕ 'ಗಜ ', 'ಈ ಪ್ರೀತಿ ಏಕೆ ಭೂಮಿ ಮೇಲಿದೆ', 'ಮಾತಾಡ್ ಮಾತಾಡ್ ಮಲ್ಲಿಗೆ', 'ಸವಿ ಸವಿ ನೆನಪು', 'ಬಂಧು ಬಳಗ', 'ಅರಮನೆ', 'ಕಿಲಾಡಿ ಕೃಷ್ಣ', ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿ ಸಿನಿಪ್ರಿಯರ ಗಮನ ಸೆಳದಿದ್ದಾರೆ.

ಇದನ್ನೂ ಓದಿ: ವಿಶ್ವದ ದುಬಾರಿ ನಟಿ.. 7 ಜನರೊಂದಿಗೆ ವಿಚ್ಛೇದನ ಪಡೆದ ಈಕೆಯ ಬಾಯ್‌ಫ್ರೆಂಡ್‌ ಫೇಮಸ್ ಗ್ಯಾಂಗ್ ಸ್ಟರ್.!

ಇನ್ನೂ ನಟಿ ತೇಜಸ್ವಿನಿ ಪ್ರಕಾಶ್‌ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಹಾರಿಕಾ' ಸೀರಿಯಲ್‌ನಲ್ಲಿ ನಾಯಕಿಯಾಗಿ ಕಿರುತೆರೆ ಪದಾರ್ಪಣೆ ಮಾಡಿದವರು, ಬಳಿಕ'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರ. ಹಾಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ರಲ್ಲಿ ರ ಸ್ಪರ್ಧಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News