Actress Srileela: ಟಾಲಿವುಡ್ ನಲ್ಲಿ ನಟಿ ಶ್ರೀಲೀಲಾಗೆ ಫುಲ್ ಅವಕಾಶ.. ಸೈಡ್ ಲೈನ್ ಆಗ್ತಾ ಇದ್ದಾರಾ ರಶ್ಮಿಕಾ ಮಂದಣ್ಣ..!

Actress Srileela: ಶ್ರೀಲೀಲಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಎಷ್ಟು ಚಿತ್ರಗಳು ಎಂದರೆ ಉಳಿದ ನಾಯಕಿಯರಿಗೆ ಶ್ರೀಲಿಲಾ ದೊಡ್ಡ ತಲೆನೋವಾಗಿದ್ದಾರಂತೆ. ಯುವ ನಟಿಯರು ಈ ಪರಿ ಬೇಡಿಕೆ ಸೃಷ್ಟಿಸಿಕೊಂಡು ಎಲ್ಲಾ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ತೆಲುಗಿನ ಸ್ಟಾರ್ ನಟಿಯರಿಗೆ ಶಾಕ್ ನೀಡಿದೆ. 

Written by - YASHODHA POOJARI | Edited by - Yashaswini V | Last Updated : Feb 28, 2023, 03:44 PM IST
  • ಕನ್ನಡದ ಕಿಸ್ ಬ್ಯೂಟಿ ಶ್ರೀಲಿಲಾ ಕೂಡ ಅದೇ ಲಿಸ್ಟ್‌ನಲ್ಲಿದ್ದಾರೆ.
  • ನಟಿ ಶ್ರೀಲೀಲಾ ತೆಲುಗಿನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
  • ಶ್ರೀಲೀಲಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ.
Actress Srileela: ಟಾಲಿವುಡ್ ನಲ್ಲಿ ನಟಿ ಶ್ರೀಲೀಲಾಗೆ ಫುಲ್ ಅವಕಾಶ.. ಸೈಡ್ ಲೈನ್ ಆಗ್ತಾ ಇದ್ದಾರಾ ರಶ್ಮಿಕಾ ಮಂದಣ್ಣ..! title=
SriLeela vs Rashmika Mandanna

ಬೆಂಗಳೂರು: ಕನ್ನಡದ ಪ್ರತಿಭೆಗಳು ಬೇರೇ ಇಂಡಸ್ಟ್ರಿಯಲ್ಲಿ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತೆಯೇ ಕನ್ನಡದ ಅನೇಕ ನಟಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಸುಂದರಿಯರಿಗೆ ಈಗ ಎಲ್ಲಿಲ್ಲದ ಬೇಡಿಕೆ ಅಂದ್ರೆ ತಪ್ಪಿಲ್ಲ ನೋಡಿ. ನಮ್ಮ ಕನ್ನಡದ ಅನೇಕ ನಟಿಯರು ತೆಲುಗು ಸ್ಟಾರ್ ಜೊತೆ ನಟಿಸುತ್ತಿದ್ದಾರೆ. 

ಕನ್ನಡದ ಕಿಸ್ ಬ್ಯೂಟಿ ಶ್ರೀಲಿಲಾ ಕೂಡ ಅದೇ ಲಿಸ್ಟ್‌ನಲ್ಲಿದ್ದಾರೆ. ನಟಿ ಶ್ರೀಲೀಲಾ ತೆಲುಗಿನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಶ್ರೀಲೀಲಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಎಷ್ಟು ಚಿತ್ರಗಳು ಎಂದರೆ ಉಳಿದ ನಾಯಕಿಯರಿಗೆ ಶ್ರೀಲಿಲಾ ದೊಡ್ಡ ತಲೆನೋವಾಗಿದ್ದಾರಂತೆ. ಯುವ ನಟಿಯರು ಈ ಪರಿ ಬೇಡಿಕೆ ಸೃಷ್ಟಿಸಿಕೊಂಡು ಎಲ್ಲಾ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ತೆಲುಗಿನ ಸ್ಟಾರ್ ನಟಿಯರಿಗೆ ಶಾಕ್ ನೀಡಿದೆ. 

ಇದನ್ನೂ ಓದಿ- Radhika Pandit: ಎರಡು ಮಕ್ಕಳಾದ್ರೂ  ಬ್ಯೂಟಿ ಇಳಿಯದ ನಟಿ  ರಾಧಿಕಾ ಪಂಡಿತ್!

ಅಷ್ಟಕ್ಕೂ ಕನ್ನಡದ ಸುಂದರಿ ಶ್ರೀಲೀಲಾ ಕೈಯಲ್ಲಿ ಸದ್ಯ 8ಕ್ಕೂ ಹೆಚ್ಚು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಎಲ್ಲಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವ ಶ್ರೀಲೀಲಾ ನೋಡಿ ಉಳಿದ ನಟಿಯರು ಅಚ್ಚರಿ ಪಡುತ್ತಿದ್ದಾರೆ. 

ಇದನ್ನೂ ಓದಿ- ಫುಲ್ ಡಯಟ್ ನಲ್ಲಿ ಇದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಅಂದಹಾಗೆ ಸದ್ಯ ಶ್ರೀಲೀಲಾ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಗಾಲೇ ಮಹೇಶ್ ಬಾಬು ಜೊತೆ SSMB ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಕೃಷ್ಣ ಅವರ NBK108 ಸಿನಿಮಾದಲ್ಲಿ ಬಾಲಯ್ಯ ಮಗಳಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಪೋತಿನೇನಿ ಸಿನಿಮಾ, ನಿತಿನ್ 32, ನವವೀನ್ ಪೋಲಿಶೆಟ್ಟಿ ವೈಷ್ಣನ್ ತೇಜ್ ಅವರ PVT04 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಿಂದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣಗೆ ಅವಕಾಶ ಕಡಿಮೆಯಾಗಿದೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News