Nora Fatehi: ಕಠಿಣ ಶ್ರಮದಿಂದ ಕನಸನ್ನು ನನಸಾಗಿಕೊಂಡ ಕೆನಡಾದ ನರ್ತಕಿ!

Nora Fatehi Birthday: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಕೆನಡಾದ ನರ್ತಕಿ ಮತ್ತು ನಟಿ ನೋರಾ ಫತೇಹಿ ಫೋಟೋಸ್‌ ವೈರಲ್‌ ಆಗುತ್ತಿದ್ದು, ಇಂದು ಈ ನಟಿಯು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈಕೆಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 6, 2024, 12:39 PM IST
  • ನೋರಾ ಫತೇಹಿ ನೃತ್ಯದ ಜೊತೆಗೆ ಸೌಂದರ್ಯಕ್ಕೆ ಜನ ಹುಚ್ಚೆದ್ದು ಕುಣಿದಿದ್ದಾರೆ.
  • ನೋರಾ ಫತೇಹಿ ಭಾರತದಲ್ಲಿ ನೃತ್ಯಗಾರರಾಗಿ ಪ್ರಸಿದ್ಧರಾಗಿದ್ದು, ಇದರೊಂದಿಗೆ, ಸಿನಿಮಾ ಮತ್ತು ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
  • ನೋರಾ ಫತೇಹಿ ತನ್ನ ಕಠಿಣ ಪರಿಶ್ರಮದಿಂದ, ಬಹಳ ಕಡಿಮೆ ಸಮಯದಲ್ಲಿ ಅನೇಕ ಜನರು ಕನಸು ಕಾಣುವಂತೆ ತನ್ನ ಕನಸನ್ನು ನನಸು ಮಾಡಿಕೊಂಡರು.
Nora Fatehi: ಕಠಿಣ ಶ್ರಮದಿಂದ ಕನಸನ್ನು ನನಸಾಗಿಕೊಂಡ ಕೆನಡಾದ ನರ್ತಕಿ! title=

Nora Fatehi Birthday Special: ಭಾರತ ಮೂಲದ ಕೆನಡಾದ ನರ್ತಕಿ ಮತ್ತು ನಟಿ ನೋರಾ ಫತೇಹಿ ನೃತ್ಯಕ್ಕೆ ನೃತ್ಯ ಪ್ರೇಮಿಗಳು ಅಭಿಮಾನಿಗಳಾಗಿದ್ದಾರೆ. ಈ ನಟಿ ಬಾಲಿವುಡ್‌ನ ʻರೋರ್ಸ್‌: ಟೈಗರ್ಸ್‌ ಆಫ್‌ ದಿ ಸುಂದರಬನ್ಸ್ʼ ಚಿತ್ರದ ಮೂಲಕ ಭಾರತದಲ್ಲಿ ನಟನೆ ಆರಂಭಿಸಿ, ತದನಂತರ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆಯ ನೃತ್ಯದ ಜೊತೆಗೆ ಸೌಂದರ್ಯಕ್ಕೆ ಜನ ಹುಚ್ಚೆದ್ದು ಕುಣಿದಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ "ಈ ನಟಿಯ ಸೌಂದರ್ಯ ಎಷ್ಟಿದೆ ಎಂದರೆ, ಈಕೆಯ ಬ್ಲರ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಂದರೂ ಅದು ವೈರಲ್ ಆಗುತ್ತದೆ" ಎನ್ನುತ್ತಾರೆ . ಇಂದು ನೋರಾ ಫತೇಹಿ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

ನೋರಾ ಫತೇಹಿ ಕೆನಡಾ ಮೂಲದ ನಟಿ, ರೂಪದರ್ಶಿ, ನೃತ್ಯಗಾರ್ತಿ ಮತ್ತು ಗಾಯಕಿಯಾಗಿದ್ದರೂ, ಇತ್ತೀಚೆಗೆ ಈಕೆ ಭಾರತದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ನಟಿ ಭಾರತದಲ್ಲಿ ನೃತ್ಯಗಾರರಾಗಿ ಪ್ರಸಿದ್ಧರಾಗಿದ್ದು, ಇದರೊಂದಿಗೆ, ಸಿನಿಮಾ ಮತ್ತು ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ನೋರಾ ಭಾರತದ ಚಿತ್ರಗಳಲ್ಲಿಯೂ ಅಭಿನಯಿಸುವುದಕ್ಕೂ ಮುನ್ನ, ವೈಲ್ಡ್ ಕಾರ್ಡ್ ಎಂಟ್ರೀಯಾಗಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದರ ನಂತರ, 2014 ರಲ್ಲಿ ರೋರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಬಳಿಕ ತೆಲುಗು ಸಿನಿಮಾವೊಂದರಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಬೆಲ್ಲಿ ಡ್ಯಾನ್ಸ್‌ನಲ್ಲಿ ಗುರುತಿಸಿಕೊಂಡರು.

ಇದನ್ನೂ ಓದಿ: Fake Death News: ಪೂನಂ ಪಾಂಡೆ ಅಂತೆಯೇ ಈ ಸ್ಟಾರ್‌ ನಟಿಯ ಸಾವಿನ ಸುದ್ದಿ ಹಬ್ಬಿತ್ತು.!

ನೋರಾ ಫತೇಹಿ ತನ್ನ ಕಠಿಣ ಪರಿಶ್ರಮದಿಂದ,  ಬಹಳ ಕಡಿಮೆ ಸಮಯದಲ್ಲಿ ಅನೇಕ ಜನರು ಕನಸು ಕಾಣುವಂತೆ ತನ್ನ ಕನಸನ್ನು  ನನಸು ಮಾಡಿಕೊಂಡರು. ಈ ನಟಿ ಬಾಲಿವುಡ್‌ನ 'ರೋರ್-ಟೈಗರ್ಸ್ ಆಫ್ ದಿ ಸುಂದರಬನ್ಸ್' ಚಿತ್ರದ ನಂತರ ಇದರ ನಂತರ ತೆಲುಗಿನ 'ಕಿಕ್ 2' ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಈ ನಟಿ 'ಝಲಕ್ ದಿಖ್ಲಾ ಜಾ' ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 2020 ರಲ್ಲಿ, ನೋರಾ ತನ್ನ ನೃತ್ಯ ಕೌಶಲ್ಯವನ್ನು 'ಸ್ಟ್ರೀಟ್ ಡ್ಯಾನ್ಸರ್ 3D' ಸಿನಿಮಾದಲ್ಲಿ ಪ್ರದರ್ಶಿಸಿದ್ದಾಳೆ.

ನೋರಾ ಫತೇಹಿಯ ಐಟಂ ಸಾಂಗ್ 'ದಿಲ್ಬರ್' 2021 ರಲ್ಲಿ ಬಿಡುಗಡೆಯಾಗಿದ್ದು, ಈ ಹಾಡು ಕೆಲವೇ ಗಂಟೆಗಳಲ್ಲಿ ಜನಪ್ರಿಯವಾಯಿತು.  ಈಕೆಯ ಈ ಹಾಡಿಗೆ ಬಿಲಿಯನ್ಸ್‌ ಗಟ್ಟಲೆ ವ್ಯೂಸ್‌ ಬಂದಿತ್ತು. ಇದಾದ ನಂತರ ನೋರಾ ಅವರ ‘ಕಮರಿಯಾ’, ‘ಕುಸುಕುಸು’ ಮತ್ತು ‘ಏಕ್ ತೋ ಕಾಮ್ ಜಿಂದಗಾನಿ’ ಬಹಳ ಫೇಮಸ್ ಆದವು. ಇದೀಗ ನೋರಾ ಎಂಟು ಹಾಡುಗಳಿಗೆ ಹೆಸರುವಾಸಿಯಾಗಿದ್ದು,  ಶೀಘ್ರದಲ್ಲೇ  ಈ ನಟಿ 'ಏಕ್ ವಿಲನ್ ರಿಟರ್ನ್ಸ್' ಮತ್ತು 'ಥ್ಯಾಂಕ್ ಗಾಡ್' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

BollywoodManisha KoiralaPoonam Pandey

Trending News