ಮುಂದಿನ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ ಕೇಳಿ ಮತ್ತೇ ಬೇಸರಗೊಂಡ ಫ್ಯಾನ್ಸ್‌..! 

Yash 19 movie : ನಟ ಯಶ್‌ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಇತ್ತೀಚಿಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆ ಫ್ಯಾನ್ಸ್‌ಗೆ ನೋವು ತಂದಿದೆ.

Written by - Krishna N K | Last Updated : Nov 25, 2023, 07:54 PM IST
  • ರಾಕಿಂಗ್‌ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು..?
  • ಇದು ಯಶ್‌ ಅಭಿಮಾನಿಗಳಿಗೆ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ.
  • ಯಶ್‌ ಸೈಲೆಂಟ್‌ ಅವರ ಅಭಿಮಾನಿಗಳಿಗೆ ಬೇಸರತರಿಸಿದೆ.
ಮುಂದಿನ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ ಕೇಳಿ ಮತ್ತೇ ಬೇಸರಗೊಂಡ ಫ್ಯಾನ್ಸ್‌..!  title=

Yash new movie : ರಾಕಿಂಗ್‌ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಎಲ್ಲಾ ಸ್ಟಾರ್‌ಗಳು ಹಿಟ್‌ ಸಿನಿಮಾ ನೀಡಿ ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭ ಮಾಡಿದ್ರೂ ಸಹ ಯಶ್‌ ಇನ್ನು ಸೈಲೆಂಟ್‌ ಆಗಿ ಕುಳಿತಿರುವುದು ಯಾಕೋ ಅವರ ಅಭಿಮಾನಿಗಳಿಗೆ ಬೇಸರತರಿಸಿದೆ. ಅಲ್ಲದೆ, ತಮ್ಮ ಮುಂದಿನ ಸಿನಿಮಾಗೆ ಯಶ್‌ ಹೇಳಿರುವ ಮಾತುಗಳು ಅವರಿಗೆ ಮತ್ತಷ್ಟು ಹರ್ಟ್‌ ಮಾಡಿದೆ.

ಹೌದು.. 'ಕೆಜಿಎಫ್' ಸಿನಿಮಾದ ಮೂಲಕ ಅಂತರಾಷ್ಟ್ರೀಯ ಮನ್ನಣೆ ಪಡೆದ ಯಶ್‌, ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದಿದೆ. ಆದರೆ, ತಮ್ಮ ಮುಂದಿನ ಚಿತ್ರದ ಬಗ್ಗೆ ಇದುವರೆಗೂ ಅವರು ಯಾವುದೇ ಘೋಷಣೆ ಮಾಡಿಲ್ಲ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ನಟ ರಣದೀಪ್ ಹೂಡಾ..! ಗೆಳತಿ ಜೊತೆ ಮದುವೆ ಫಿಕ್ಸ್‌ 

'ಕೆಜಿಎಫ್' ಸಿನಿಮಾದ ನಂತರ ನಿರೀಕ್ಷೆಗಳು ಹೆಚ್ಚಿವೆ, ನನ್ನಿಂದ ಇನ್ನಷ್ಟು ಅದ್ಭುತ ಸಿನಿಮಾಗಳನ್ನು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ನನ್ನ ಅಭಿಮಾನಿಗಳಿಗೆ ಅರ್ಧ ಬೇಯಿಸಿದ ಆಹಾರವನ್ನು ನೀಡಲು ನನಗೆ ಇಷ್ಟವಿಲ್ಲ. ಎಲ್ಲರೂ ಹೆಮ್ಮೆ ಪಡುವಂತಹ ಚಿತ್ರಗಳನ್ನು ಮಾಡಲು ಸಿದ್ಧವಾಗುತ್ತಿದ್ದೇನೆ. ತಾಳ್ಮೆಯಿಂದಿರಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಯಶ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಮುಂದಿನ ಚಿತ್ರಕ್ಕಾಗಿ ಶ್ರಮಿಸುತ್ತಿದ್ದೇನೆ ಅಂತ ತಿಳಿಸಿದ್ದರು. ಅಭಿಮಾನಿಗಳ ನಿರೀಕ್ಷೆಗೂ ಮೀರಿ ಸಿನಿಮಾ ಮಾಡುತ್ತೇನೆ ಹೇಳಿಕೆ ನೀಡಿ ಇದುವರೆಗೂ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿಲ್ಲ. ಅಲ್ಲದೆ, ಅವರಿಂದ ಇಂತಹ ಹೇಳಿಕೆ ಬರುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. 

ಇದನ್ನೂ ಓದಿ:BBK 10: ವಿನಯ್‌ ಒಳ್ಳೆಯವರು..! ಕಾರ್ತಿಕ್‌ಗೆ ʼಸ್ನೇಹ ಅಂಥ ಒಳಒಳಗೆ ಸ್ಕೀಮ್‌ʼ ಹಾಕಿದ್ರಾ ಸಂಗೀತಾ..? 

'ಕೆಜಿಎಫ್ 2' ಸಿನಿಮಾದ ನಂತರ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ. ಅಲ್ಲದೆ, ಮುಂಬರುವ ಬಾಲಿವುಡ್ ಚಿತ್ರ ‘ರಾಮಾಯಣ’ದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಈ ಬಗ್ಗೆ ಅಧಿಕೃತ ಮಾಹಿತಿಯೂ ಇಲ್ಲ. ಸಧ್ಯ ಯಶ್‌ ತುಂಬಾ ಸಸ್ಪೆನ್ಸ್ ಕಾಯ್ದುಕೊಳ್ಳುತ್ತಿದ್ದಾರೆ ಅನಿಸುತ್ತಿದೆ.. ಮುಂದೆನಾಗುತ್ತೆ ಅಂತ ಕಾಯ್ದು ನೋಡೋಣ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News