ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ನಟ ನಾನಿ..! ನ್ಯಾಚುರಲ್‌ ಸ್ಟಾರ್‌ ಸೇರಿದ್ದು ಯಾವ ಪಾರ್ಟಿ ಗೊತ್ತೆ..?

actor Nani political look :  ಪ್ರಸ್ತುತ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಮುಂಬರುವ ಸಿನಿಮಾ ʼಹಾಯ್‌ ನಾನ್ನಾʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಬ್ಯಾಕ್ ಟು ಬ್ಯಾಕ್ ಹಿಟ್‌ ಸಿನಿಮಾಗಳನ್ನು ನೀಡುತ್ತಿರುವ ತೆಲುಗು ನಟ, ಕಳೆದ ವರ್ಷ ‘ದಸರಾ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. ಇದರ ಬೆನ್ನಲ್ಲೆ ಇದೀಗ ನಾನಿ ರಾಜಕಾರಣಿಗಳ ವೇಷಧರಿಸಿರುವ ಫೋಟೋ ಒಂದು ವೈರಲ್‌ ಆಗಿದೆ.

Written by - Krishna N K | Last Updated : Nov 17, 2023, 09:41 PM IST
  • ರಾಜಕೀಯ ಪ್ರವೇಶಿಸಿದ ತೆಲುಗು ನಟ ನಾನಿ
  • ನಟ ನಾನಿ ಯಾವ ಪಾರ್ಟಿ ಸೇರಿದ್ದಾರೆ ಗೊತ್ತೆ?
  • ಲೋಕಸಭೆ ಚುನಾವಣೆಗೆ ಎಂಟ್ರಿ ಕೊಡ್ತಾರಾ ನಾನಿ
ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ನಟ ನಾನಿ..! ನ್ಯಾಚುರಲ್‌ ಸ್ಟಾರ್‌ ಸೇರಿದ್ದು ಯಾವ ಪಾರ್ಟಿ ಗೊತ್ತೆ..? title=

Nani Hi Nanna movie : ಸೌತ್‌ ಸಿನಿರಂಗದಲ್ಲಿ ನಾನಿಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ನ್ಯಾಚುರಲ್‌ ಸ್ಟಾರ್‌ಗೆ ಕನ್ನಡಾಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಅದಕ್ಕೆ ನಾನಿ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ಕಳೆದ ಕೆಲವು ತಿಂಗಳ ಹಿಂದೆ ನಾನಿ ಹಾಯ್‌ ನಾನ್ನಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಸದ್ಯ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಸದ್ಯ ನಾನಿ ರಾಜರಾರಣಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಅರೇ.. ನಾನಿ ಯಾವಾಗ ರಾಜಕೀಯ ಪ್ರವೇಶ ಮಾಡಿದ್ರಪ್ಪಾ.. ಯಾವ ಪಾರ್ಟಿ..? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ಅದರ ಹಿಂದಿನ ಕಥೆ ಬೇರೆಯೇ ಇದೆ. 

ಇದನ್ನೂ ಓದಿ: ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಸೌತ್‌ ಸಿನಿರಂಗದ ಟಾಪ್‌ ನಟ ಇವರು

ಹೌದು.. ‘ಹಾಯ್ ನನ್ನ’ ಚಿತ್ರದ ಪ್ರಚಾರವನ್ನು ನಾನಿ ವಿನೂತನವಾಗಿ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಚಿತ್ರದ ಪ್ರಚಾರಕ್ಕೆ ಚುನಾವಣೆಯನ್ನು ಬಳಸಿಕೊಂಡಿದ್ದಾರೆ. ನಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ರಾಜಕೀಯ ಗೆಟಪ್ ನಲ್ಲಿದ್ದ ನಾನಿ ನೋಡಿ ಎಲ್ಲರೂ ಶಾಕ್ ಆಗಿದ್ದರು.

 
 
 
 

 
 
 
 
 
 
 
 
 
 
 

A post shared by Nani (@nameisnani)

ಈ ಫೋಟೋವನ್ನು ಶೇರ್ ಮಾಡಿರುವ ನಾನಿ, ಇದು ಚುನಾವಣಾ ಮೂಡ್, ನಾವೇಕೆ ಇದರಲ್ಲಿ ಸೇರಬಾರದು. ಡಿಸೆಂಬರ್ 7 ರಂದು ನಿಮ್ಮ ಪ್ರೀತಿಯ ಮತಗಳು ನಮ್ಮದಾಗಬೇಕು ಎಂದು ನಾನಿ ಸಿನಿಮಾ ನೋಡುವಂತೆ ಸಿನಿ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ನ್ಯಾಚುರಲ್‌ ಸ್ಟಾರ್‌ ವಿಭಿನ್ನ ಪ್ರಚಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ನೀನು ಸೂಪರ್‌ ಅಣ್ಣಾ ಅಂತ ಹೊಗಳುತ್ತಿದ್ದಾರೆ.

ಇದನ್ನೂ ಓದಿ:ಮುದ್ದಾಗಿರುವ ಈ ಮಗು ಯಾರು ಗೊತ್ತಾ? ಸದ್ಯ ಪಡ್ಡೆಹೈಕ್ಳ ನ್ಯಾಷನಲ್‌ ಕ್ರಷ್‌ ಈ ನಟಿ

ಇನ್ನು 'ಹಾಯ್ ನನ್ನ' ಚಿತ್ರವನ್ನು ಸೌರ್ಯುವ್ ನಿರ್ದೇಶಿಸಿದ್ದಾರೆ. ನಾನಿ ಎದುರು ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸುತ್ತಿದ್ದಾರೆ. ತಂದೆ-ಮಗಳ ಬಾಂಧವ್ಯದ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ವೈರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಮೋಹನ್ ಚೆರುಕುರಿ, ಡಾ.ವಿಜೇಂದರ್ ರೆಡ್ಡಿ ಮತ್ತು ಕೆ.ಎಸ್.ಮೂರ್ತಿ ಜಂಟಿಯಾಗಿ ನಿರ್ಮಿಸಿದ್ದಾರೆ. ಡಿಸೆಂಬರ್ 7 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News