Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ?

Aishwarya Arjun Marriage: ಸೌತ್‌ ಸಿನಿರಂಗದ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಹಿರಿಯ ಪುತ್ರಿ ಐಶ್ವರ್ಯ ಹಾಗೂ ತಮಿಳು ಯುವನಟ ಉಮಾಪತಿ ರಾಮಯ್ಯ ಮದುವೆ ಡೇಟ್‌ ಫಿಕ್ಸ್‌ ಆಗಿದೆ. ಯಾಗಿದ್ರೇ ಈ ಜೋಡಿಯ ವಿವಾಹ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : May 8, 2024, 10:10 AM IST
  • ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯರವರ ಮಗ ಉಮಾಪತಿ ರಾಮಯ್ಯ ಜೊತೆಗೆ ನಟಿ ಐಶ್ವರ್ಯ ಸರ್ಜಾ ಕಳೆದ ವರ್ಷವಷ್ಟೇ ನಿಶ್ಚಿತಾರ್ಥ ಮಾಡಿದ್ದರು.
  • ಇದೀಗ ನಟಿ ಐಶ್ವರ್ಯಾ ಅರ್ಜುನ್ ಹಾಗೂ ನಟ ಉಮಾಪತಿ ರಾಮಯ್ಯ ಇಬ್ಬರ ಮದುವೆ ಮುಹೂರ್ತದ ಡೇಟ್‌ ಫಿಕ್ಸ್‌ ಆಗಿರುವ ಮಾಹಿತಿ ಹೊರಬಂದಿದೆ.
  • ವಿವಾಹ ಸಮಾರಂಭದಲ್ಲಿ ಸಂಬಂಧಿಕರು ಹಾಗೂ ಕನ್ನಡ ಮತ್ತು ಸಿನಿಮಾರಂಗದ ಗಣ್ಯರು ಸಾಕ್ಷಿಯಾಗಲಿದ್ದಾರೆ.
Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ? title=

Aishwarya Arjun Marriage Date: ಬಹುಭಾಷಾ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಹಿರಿಯ ಮಗಳು ಐಶ್ವರ್ಯ ಮದುವೆ ಡೇಟ್‌ ಫಿಕ್ಸ್‌ ಆಗಿದೆ. ನಟ ಅರ್ಜುನ್‌ ಸರ್ಜಾ ತಮ್ಮ ಸಿನಿಮಾ ಕೆಲಸಗಳ ಜೊತೆಗೆ ತಮ್ಮ ಮೊದಲನೇ ಮಗಳು ಐಶ್ವರ್ಯಾ ಸರ್ಜಾ ವಿವಾಹಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯರವರ ಮಗ ಉಮಾಪತಿ ರಾಮಯ್ಯ ಜೊತೆಗೆ ನಟಿ ಐಶ್ವರ್ಯ ಸರ್ಜಾ ಕಳೆದ ವರ್ಷವಷ್ಟೇ ನಿಶ್ಚಿತಾರ್ಥ ಮಾಡಿದ್ದರು.

ಹೌದು.. ಐಶ್ವರ್ಯಾ ಅರ್ಜುನ್ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಇಬ್ಬರೂ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೆಲ್ಲಾ ಗೊತ್ತಾದ ನಂತರ ಕಳೆದ ವರ್ಷ ಅಕ್ಟೋಬರ್ 27 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಈ ಶುಭ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ  ಕುಟುಂಬದ ಇನ್ನಿತರ ಮಂದಿ ಭಾಗಿಯಾಗಿದ್ದರು.

ಇದನ್ನೂ ಓದಿ: ಮರು ಘರ್ಜನೆಗೆ ಮತ್ತೆ ಮರಳುತ್ತಿದೆ RRR : ಬಿಡುಗಡೆಗೆ ಮತ್ತೆ ಸಜ್ಜಾದ ಎಸ್ ಎಸ್ ರಾಜಮೌಳಿ ಚಿತ್ರ

ಇದೀಗ ನಟಿ ಐಶ್ವರ್ಯಾ ಅರ್ಜುನ್ ಹಾಗೂ ನಟ ಉಮಾಪತಿ ರಾಮಯ್ಯ ಇಬ್ಬರ ಮದುವೆ ಮುಹೂರ್ತದ ಡೇಟ್‌ ಫಿಕ್ಸ್‌ ಆಗಿರುವ ಮಾಹಿತಿ ಹೊರಬಂದಿದ್ದು, ಇವರಿಬ್ಬರು ವಿವಾಹ ಚೆನ್ನೈನಲ್ಲಿಯೇ ನಡೆಯಲಿದೆ. ಈ ಜೋಡಿಯ ಮದುವೆ ಇದೇ ವರ್ಷ ಜೂನ್ 10ರಂದು ಸಂಪ್ರದಾಯ ಬದ್ಧವಾಗಿ ಮಾಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ನಟ ಅರ್ಜುನ್ ಸರ್ಜಾ ಆಂಜನೇಯ ಭಕ್ತನಾಗಿದ್ದು, ಆದರಿಂದ ಈ ಕಾರ್ಯಕ್ರಮ ಅಚ್ಚು ಕಟ್ಟಾಗಿ ಸಂಪ್ರದಾಯಕವಾಗಿ ನಡೆಯಲಿವೆ.

ಸದ್ಯ ನಟ ಅರ್ಜುನ್ ಸರ್ಜಾ ಮಗಳ ಮದುವೆ ಸಂಭ್ರಮಕ್ಕೆ  ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇವರೊಂದಿಗೆ ತಮಿಳು ಚಿತ್ರರಂಗದ ಹಾಸ್ಯ ನಟ ತಂಬಿ ರಾಮಯ್ಯರವರು ಕೂಡ ಈ ಮದುವೆಗೆ ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಸಾಕಷ್ಟು ತಾರೆಯರು ಪಾಲ್ಗೊಳ್ಳಲಿದ್ದಾರೆ. ಈ ಜೋಡಿಯ ಮದುವೆಗೆ ಕನ್ನಡ ಮತ್ತು ಸಿನಿಮಾರಂಗದ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News