Viral CCTV Video: ಪ್ರೀವೇಡ್ಡಿಂಗ್ ಪಾರ್ಟಿಯಲ್ಲಿ 5 ಹೊಟೇಲ್ ಮೇಲ್ಛಾವಣಿಯಿಂದ ಯುವಕನನ್ನು ಕೆಳಕ್ಕೆ ಎಸೆದ ತಂದೆ-ಮಗ Watch Video

Bareilly Pre Wedding Party shocking Video: ಉತ್ತರ ಪ್ರದೇಶದ ಬರೇಲಿಯಲ್ಲಿ ಉದ್ಯಮಿಯೊಬ್ಬರ ಪುತ್ರನನ್ನು ಪಂಚತಾರಾ ಹೊಟೇಲ್‌ನ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆಯಲಾಗಿದೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.  

Written by - Nitin Tabib | Last Updated : Apr 22, 2024, 07:08 PM IST
  • ಘಟನೆ ವೇಳೆ ಆರೋಪಿ ತಂದೆ-ಮಗ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
  • ಪೊಲೀಸರ ಪ್ರಕಾರ, ಸಂತ್ರಸ್ತ ಸಾರ್ಥಕ್ ಅಗರ್ವಾಲ್ ತಂದೆ ಸಂಜಯ್ ಅಗರ್ವಾಲ್ ರಾಸಾಯನಿಕ ವ್ಯವಹಾರವನ್ನು ಹೊಂದಿದ್ದರೆ,
  • ಆರೋಪಿ ಸಂಜೀವ್ ಅರೋರಾ ಜನಕಪುರಿಯಲ್ಲಿ ಜವಳಿ ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ.
Viral CCTV Video: ಪ್ರೀವೇಡ್ಡಿಂಗ್ ಪಾರ್ಟಿಯಲ್ಲಿ 5 ಹೊಟೇಲ್ ಮೇಲ್ಛಾವಣಿಯಿಂದ ಯುವಕನನ್ನು ಕೆಳಕ್ಕೆ ಎಸೆದ ತಂದೆ-ಮಗ Watch Video title=

Bareilly Viral Video: ಉತ್ತರ ಪ್ರದೇಶದ ಬರೇಲಿಯಲ್ಲಿ ಉದ್ಯಮಿಯೊಬ್ಬರ ಪುತ್ರನನ್ನು ಪಂಚತಾರಾ ಹೊಟೇಲ್‌ನ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆಯಲಾಗಿದೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನ ಇಡೀ ದೇಹ ಹಾಗೂ ಬಾಯಿ ಮತ್ತು ಎದೆಯ ಮೇಲೆ ಗಂಭೀರ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾಧ್ಯಮ ವರದಿಯೊಂದರ ಪ್ರಕಾರ, ಭಾನುವಾರ ಪಂಚತಾರಾ ಹೋಟೆಲ್‌ನಲ್ಲಿ ಪ್ರೀವೇಡ್ಡಿಂಗ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ  ಸಾರ್ಥಕ್ ಅಗರ್ವಾಲ್ ಮತ್ತು ಅವರ ಸ್ನೇಹಿತ ರಿದ್ಧಿಮ್ ಅರೋರಾ ನಡುವೆ ವಾಗ್ವಾದ ಆರಂಭಗೊಂಡಿದ್ದು, ನಂತರ ಈ ಜಗಳ ವಿಕೋಪಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ರಿದ್ಧಿಮ್ ತನ್ನ ತಂದೆಯೊಂದಿಗೆ ಸೇರಿ ಸಾರ್ಥಕ್‌ನನ್ನು ಹೋಟೆಲ್‌ನ ಮೇಲ್ಛಾವಣಿಯಿಂದ ಕೆಳಕ್ಕೆ ದೂಕಿದ್ದಾರೆ.
ನಂತರ ಸಾರ್ಥಕ್ ಸ್ಥಿತಿ ಚಿಂತಾಜನಕವಾದ ಕಾರಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಇಬ್ಬರು ಆರೋಪಿಗಳ ವಿರುದ್ಧ ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ಕುರಿತು ಇಜ್ಜತ್‌ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೈ ಶಂಕರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ವಿಡಿಯೋ ಸೆರೆಯಾಗಿದೆ. ಎರಡು ನಿಮಿಷ 12 ಸೆಕೆಂಡ್‌ಗಳ ದೃಶ್ಯಾವಳಿಯಲ್ಲಿ ಆರೋಪಿಗಳು ಸಾರ್ಥಕ್‌ನನ್ನು ಥಳಿಸುತ್ತಿರುವುದು ಕಂಡುಬಂದಿದೆ. ಆತ ಕ್ಷಮೆಯನ್ನೂ ಕೇಳುತ್ತಿದ್ದಾನೆ. ಅಷ್ಟಾಗ್ಯೂ ಆರೋಪಿಗಳು ಆತನನ್ನು ಎಳೆದು ಬಿಸಾಡಿದ್ದಾರೆ. ಮತ್ತೊಬ್ಬ ಸ್ನೇಹಿತ ಸಾರ್ಥಕ್ ನನ್ನು ಉಳಿಸಲು ಮುಂದಾದಾಗ, ಆತನಿಗೂ ಕೆಳಗೆ ಎಸೆಯುವ ಬೆದರಿಕೆ ಹಾಕಲಾಗಿದೆ.
ಈ ಕುರಿತು ಮಾತನಾಡಿರುವ ಸಾರ್ಥಕ್‌ನ ತಂದೆ ಸಂಜಯ್ ಅಗರ್‌ವಾಲ್, "ನನ್ನ ಮಗ ಮತ್ತು ಆತನ ಸ್ನೇಹಿತನ ನಡುವೆ ವಾಗ್ವಾದ ನಡೆದಿರುವುದನ್ನು ನೀವು ಸಿಸಿಟಿವಿ ದೃಶ್ಯಗಳಲ್ಲಿ ನೋಡಬಹುದು. ನನ್ನ ಮಗ ತನ್ನ ಸ್ನೇಹಿತನ ತಂದೆಯ ಪಾದಗಳನ್ನು ಮುಟ್ಟಿ ಕ್ಷಮೆಯಾಚಿಸಿದ್ದಾನೆ. ಆದರೆ ಇನ್ನೊಬ್ಬ ವ್ಯಕ್ತಿ ತುಂಬಾ ಉದ್ರೇಕಗೊಂಡು ನನ್ನ ಮಗನನ್ನು ಎಳೆದಾಡಿದ್ದಾನೆ ಮತ್ತು ರೇಲಿಂಗ್ ಮೆಲಿಂಡ 25 ಅಡಿ ಎತ್ತರದಿಂದ ಆತನನ್ನು ಕೆಳಕ್ಕೆ ದೂಕಿದ್ದಾನೆ, ಈ ಸಂದರ್ಭದಲ್ಲಿ ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ' ಎಂದು ಹೇಳಿದ್ದಾರೆ.

ಸಂಜೀವ್ ಅರೋರಾ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ತನಿಖೆ ಮುಂದುವರೆದಿದೆ. ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ದೂರವಾಣಿ ಸಂಖ್ಯೆಗಳ ಮೇಲೆ ನಿಗಾವಹಿಸಿ ಸ್ಥಳದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಘಟನೆ ವೇಳೆ ಆರೋಪಿ ತಂದೆ-ಮಗ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತ ಸಾರ್ಥಕ್ ಅಗರ್ವಾಲ್ ತಂದೆ ಸಂಜಯ್ ಅಗರ್ವಾಲ್ ರಾಸಾಯನಿಕ ವ್ಯವಹಾರವನ್ನು ಹೊಂದಿದ್ದರೆ, ಆರೋಪಿ ಸಂಜೀವ್ ಅರೋರಾ ಜನಕಪುರಿಯಲ್ಲಿ ಜವಳಿ ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ.

ಇಲ್ಲಿದೆ ಆ ವೈರಲ್ ವೀಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News