NRI: ಅಮೆರಿಕಾದಲ್ಲಿ ಭಾರತೀಯ ಮೂಲದ ಕುಟುಂಬ ಕಿಡ್ನಾಪ್: ದಿನಗಳ ಬಳಿಕ ತೋಟದಲ್ಲಿ ಪತ್ತೆಯಾಯ್ತು ನಾಲ್ವರ ಶವ

ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್ ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಕಿಡ್ನಾಪ್ ಆಗಿದ್ದರು. ಮರ್ಸಿಡ್ ಕೌಂಟಿ ಪೊಲೀಸರ ಪ್ರಕಾರ ಮಗುವಿನ ಚಿಕ್ಕಪ್ಪ 39 ವರ್ಷದ ಅಮನ್ದೀಪ್ ಸಿಂಗ್ ಅವರನ್ನು ಸಹ ಅಪಹರಿಸಿದ್ದಾರೆ.

Written by - Bhavishya Shetty | Last Updated : Oct 6, 2022, 04:16 PM IST
    • ಅಮೆರಿಕದಲ್ಲಿರುವ ಭಾರತೀಯ ಮೂಲದ ಕುಟುಂಬದ ನಾಲ್ವರ ಅಪಹರಣ
    • ಕಿಡ್ನಾಪ್ ಆದ ಕೆಲ ದಿನಗಳಲ್ಲಿ ನಾಲ್ವರ ಶವ ತೋಟವೊಂದರಲ್ಲಿ ಪತ್ತೆ
    • ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ
NRI: ಅಮೆರಿಕಾದಲ್ಲಿ ಭಾರತೀಯ ಮೂಲದ ಕುಟುಂಬ ಕಿಡ್ನಾಪ್: ದಿನಗಳ ಬಳಿಕ ತೋಟದಲ್ಲಿ ಪತ್ತೆಯಾಯ್ತು ನಾಲ್ವರ ಶವ title=
NRI Murder

ಕೆಲದಿನಗಳ ಹಿಂದೆ ಕಣ್ಮರೆಯಾಗಿದ್ದ ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಕುಟುಂಬದ ನಾಲ್ವರು ಕ್ಯಾಲಿಫೋರ್ನಿಯಾದ ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿಯಲ್ಲಿ ತಿಳಿಸಿದೆ. 

ಇದನ್ನೂ ಓದಿ: NRI ಬ್ಯುಸಿನೆಸ್ ಮ್ಯಾನ್ ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನ

ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್ ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಕಿಡ್ನಾಪ್ ಆಗಿದ್ದರು. ಮರ್ಸಿಡ್ ಕೌಂಟಿ ಪೊಲೀಸರ ಪ್ರಕಾರ ಮಗುವಿನ ಚಿಕ್ಕಪ್ಪ 39 ವರ್ಷದ ಅಮನ್ದೀಪ್ ಸಿಂಗ್ ಅವರನ್ನು ಸಹ ಅಪಹರಿಸಿದ್ದಾರೆ. 

ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಅವರು ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಕಳೆದ ದಿನ ಪೊಲೀಸರು ಕುಟುಂಬವನ್ನು ಅಪಹರಿಸಿದ ದೃಶ್ಯವನ್ನು ಒಳಗೊಂಡ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.  

ಅಮೇರಿಕನ್ ನ್ಯೂಸ್ ನೆಟ್‌ವರ್ಕ್‌ಗಳು ಪ್ರಸಾರ ಮಾಡಿದ ವೀಡಿಯೊದಲ್ಲಿ, ಮೊದಲು ಜಸ್ದೀಪ್ ಮತ್ತು ಅಮನ್‌ದೀಪ್ ಸಿಂಗ್ ರಮ್ಮು ಕಿಡ್ನಾಪ್ ಮಾಡಿರುವ ದೃಶ್ಯವನ್ನು ಕಾಣಬಹುದು. ಆ ಬಳಿಕ ಜಸ್ಲೀನ್ ಮತ್ತು 8 ತಿಂಗಳ ಮಗು ಅರೂಹಿಯನ್ನು ಅಪಹರಣಕಾರರು ಕಟ್ಟಡವೊಂದರ ಬಳಿಯಿಂದ ಟ್ರಕ್‌ಗೆ ಕರೆದೊಯ್ಯುತ್ತಾರೆ.

ತೋಟದ ಬಳಿಯ ಕೃಷಿ ಕಾರ್ಮಿಕರೊಬ್ಬರು ನಿನ್ನೆ ಸಂಜೆ ಶವಗಳನ್ನು ಕಂಡು ತಕ್ಷಣ ಪೊಲೀಸರನ್ನು ತಿಳಿಸಿದ್ದಾರೆ. ಶಂಕಿತ, ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಆದರೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದನ್ನೂ ಓದಿ: NRI News: ಗೀತಾ ಪಾರ್ಕ್ ವಿಧ್ವಂಸಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಕೆನಡಾ ಅಧಿಕಾರಿಗಳು

"ಈ ವ್ಯಕ್ತಿಗೆ ನರಕದಲ್ಲಿ ವಿಶೇಷ ಸ್ಥಾನವಿದೆ" ಎಂದು ಶಂಕಿತನ ಮೇಲೆ ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾನು ಅನುಭವಿಸುವ ಕೋಪವನ್ನು ವಿವರಿಸಲು ಪದಗಳಿಲ್ಲ" ಎಂದು ಶೆರಿಫ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News