10 ವರ್ಷದ ಮಗುವಿನ ಪ್ರಾಣ ತೆಗೆದ ಹುಣಸೆಹಣ್ಣು!

Boy died after eating tamarind: ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. 10 ವರ್ಷದ ಬಾಲಕ ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ. 

Written by - Chetana Devarmani | Last Updated : Feb 6, 2024, 03:13 PM IST
  • ಹುಣಸೆಹಣ್ಣು ತಿಂದು ಬಾಲಕ ಸಾವು
  • ಮೂರನೇ ತರಗತಿ ವಿದ್ಯಾರ್ಥಿ ಮೃತ
  • ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
10 ವರ್ಷದ ಮಗುವಿನ ಪ್ರಾಣ ತೆಗೆದ ಹುಣಸೆಹಣ್ಣು!  title=
ಹುಣಸೆಹಣ್ಣು

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮುಜಾಫರ್‌ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಎಂಬವರ 10 ವರ್ಷದ ಪುತ್ರ ಆದರ್ಶ್ ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ. ಆದರ್ಶ್ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ. 

ವರದಿಗಳ ಪ್ರಕಾರ, ಶನಿವಾರದಂದು ಆದರ್ಶ್ ಹುಣಸೆಹಣ್ಣು ತಿನ್ನುತ್ತಿದ್ದಾಗ, ಅದರ ಬೀಜಗಳನ್ನು ನುಂಗಿದ್ದಾನೆ. ಇದಾದ ನಂತರ ಉಸಿರಾಡಲು ತೊಂದರೆಯಾಗ ತೊಡಗಿತು. ಇದ್ದಕ್ಕಿದ್ದಂತೆ ಧ್ವನಿಯೂ ನಿಂತು ಹೋಯಿತು.

ಇದನ್ನೂ ಓದಿ: Gyanvapi Case: ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಪ್ರಕರಣ, ಇಂದು ಹೈಕೋರ್ಟ್‌ನಲ್ಲಿ ಮುಸ್ಲಿಂ ಪರ ಅರ್ಜಿ ವಿಚಾರಣೆ 

ಕುಟುಂಬದ ಸದಸ್ಯರು ಆದರ್ಶ್‌ಗೆ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ಇದ್ದಕ್ಕಿದ್ದಂತೆ ಬಾಲಕನ ಸ್ಥಿತಿಯು ಗಂಭೀರವಾಗಿದೆ. ಕುಟುಂಬದವರು ಆತನನ್ನು ಚಿಕಿತ್ಸೆಗಾಗಿ ಮುಜಾಫರ್‌ಪುರಕ್ಕೆ ಕರೆದೊಯ್ದಿದ್ದಾರೆ. ಇಲ್ಲಿನ ವೈದ್ಯರು ಅಲ್ಟ್ರಾಸೌಂಡ್ ನಡೆಸಿದ ಬಳಿಕ ಹುಣಸೆ ಹಣ್ಣಿನ ಮಧ್ಯಭಾಗವು ಆದರ್ಶ್ ಶ್ವಾಸಕೋಶಕ್ಕೆ ಅಂಟಿಕೊಂಡಿದೆ ಎಂದು ತಿಳಿದಿದೆ. ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ, ವೈದ್ಯರು ಮಗುವನ್ನು ಪಾಟ್ನಾಗೆ ಕಳುಹಿಸಿದ್ದಾರೆ.

ವೈದ್ಯರ ಸಲಹೆಯ ನಂತರ, ಕುಟುಂಬವು ಆದರ್ಶ್‌ನೊಂದಿಗೆ ಪಾಟ್ನಾಕ್ಕೆ ಹೊರಟಿತು. ಆದರೆ ಪಾಟ್ನಾ ತಲುಪುವ ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಹುಣಸೆ ಹಣ್ಣಿನಿಂದ ಮಗು ಸಾವನ್ನಪ್ಪಿದ ಸುದ್ದಿ ಇಡೀ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಂದು ಸಣ್ಣ ತಪ್ಪು ನಗುವ ಮಗುವಿನ ಜೀವವನ್ನು ತೆಗೆದುಕೊಂಡಿತು. 

ಇದನ್ನೂ ಓದಿ: ಜೈಲಿನಲ್ಲಿರುವ AAP ನಾಯಕ ಸಂಜಯ್ ಸಿಂಗ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಂತಿಲ್ಲ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News