ರಸೆಲ್ ಮಾರ್ಕೆಟ್‌ನಲ್ಲಿ ಡ್ರೈ ಪ್ರೂಟ್ಸ್‌ ಕದ್ದ ಕಳ್ಳ!

ಮಂಕಿ ಕ್ಯಾಪ್‌ ಚೋರನೊಬ್ಬ ರಸೆಲ್ ಮಾರ್ಕೆಟ್ ನಲ್ಲಿ ದುಬಾರಿ ಬೆಲೆಯ ಪೈ ನಟ್ಸ್, ಆಲ್ಮಂಡ್ ಡ್ರೈ ಫ್ರೂಟ್ಸ್‌ಗಳನ್ನು ಕಳ್ಳತನ ಮಾಡಿದ್ದು ಕಳ್ಳನ ಕೈಚಳಕ   ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Written by - VISHWANATH HARIHARA | Edited by - Yashaswini V | Last Updated : Oct 24, 2022, 02:28 PM IST
  • ಅಕ್ಟೋಬರ್ 18ರ ಮಧ್ಯರಾತ್ರಿ ಈ ಘಟನೆ ನಡೆದಿದೆ
  • 1.58 ರ ಸುಮಾರಿಗೆ ರಸೆಲ್ ಮಾರ್ಕೆಟ್‌ಗೆ ಮಂಕಿ ಕ್ಯಾಪ್ ಹಾಲಿ ಕಳ್ಳ ಎಂಟ್ರಿ ಕೊಟ್ಟಿದ್ದಾನೆ.
  • ನಂತರ ಮಾರ್ಕೆಟ್ ಒಳಗಿನ ಕಬ್ಬಿಣದ ಗ್ರೀಲ್ ಮುರಿದು ಒಳ ಹೋಗಿದ್ದಾನೆ.
ರಸೆಲ್ ಮಾರ್ಕೆಟ್‌ನಲ್ಲಿ ಡ್ರೈ ಪ್ರೂಟ್ಸ್‌ ಕದ್ದ ಕಳ್ಳ! title=
A thief stole dry fruits in Russell Market

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಐನಾತಿ ಕಳ್ಳ ಪ್ರತ್ಯಕ್ಷನಾಗಿದ್ದು, ಬ್ರಿಟಿಷರ ಕಾಲದ ರಸೆಲ್ ಮಾರ್ಕೆಟ್ ನಲ್ಲಿ ಕೈಚಳಕ ತೋರಿದ್ದಾನೆ. ಈ ಆಸಾಮಿ ರಸೆಲ್ ಮಾರ್ಕೆಟ್ ನಲ್ಲಿ ದುಬಾರಿ ಬೆಲೆಯ ಡ್ರೈ ಪ್ರೂಟ್ಸ್ ಕದ್ದು ಪರಾರಿಯಾಗಿದ್ದಾನೆ. 

ಮಂಕಿ ಕ್ಯಾಪ್‌ ಚೋರನೊಬ್ಬ ರಸೆಲ್ ಮಾರ್ಕೆಟ್ ನಲ್ಲಿ ದುಬಾರಿ ಬೆಲೆಯ ಪೈ ನಟ್ಸ್, ಆಲ್ಮಂಡ್ ಡ್ರೈ ಫ್ರೂಟ್ಸ್‌ಗಳನ್ನು ಕಳ್ಳತನ ಮಾಡಿದ್ದು ಕಳ್ಳನ ಕೈಚಳಕ   ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ- ಬ್ಯಾಂಕ್ ಗ್ರಾಹಕರೇ ಎಚ್ಚರ! ಈ ಒಂದು ಸಣ್ಣ ತಪ್ಪಿನಿಂದ ಚಿಟಿಕೆಯಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಖಾತೆ

ಅಕ್ಟೋಬರ್ 18ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು,1.58 ರ ಸುಮಾರಿಗೆ ರಸೆಲ್ ಮಾರ್ಕೆಟ್‌ಗೆ ಮಂಕಿ ಕ್ಯಾಪ್ ಹಾಲಿ ಕಳ್ಳ ಎಂಟ್ರಿ ಕೊಟ್ಟಿದ್ದಾನೆ. ನಂತರ ಮಾರ್ಕೆಟ್ ಒಳಗಿನ ಕಬ್ಬಿಣದ ಗ್ರೀಲ್ ಮುರಿದು ಒಳ ಹೋಗಿದ್ದಾನೆ. ಬಳಿಕ ಪ್ರತಿ ಅಂಗಡಿಗೆ ನುಗ್ಗಿ ದುಬಾರಿ ಬೆಲೆಯ ಫ್ರೂಟ್ಸ್ ,‌ಕದ್ದು ಪರಾರಿಯಾಗಿದ್ದಾನೆ. 

ಇದನ್ನೂ ಓದಿ- Bangalore Crime : ಶೋಕಿಗಾಗಿ ಬೈಕ್‌ ಕಳ್ಳತನ, ಇಬ್ಬರನ್ನು ಬಂಧಿಸಿದ ಪೊಲೀಸರು

ಪೈ ನಟ್ಸ್ ಕೆಜಿಗೆ ಏಳೆಂಟು ಸಾವಿರ ಬೆಲೆಯಿದೆ. ಒಂದು ಕೆಜಿ ಆಲ್ಮಂಡ್ ಬೆಲೆ ಸುಮಾರು 5 ಸಾವಿರ ಇದೆ. ಸದ್ಯ ಕಳ್ಳನ ಕಾಟದಿಂದ ಕಂಗಲಾದ ರೆಸೆಲ್ ಮಾರ್ಕೆಟ್‌ ವ್ಯಾಪಾರಿಗಳು ಶಿವಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಖತರ್ನಾಕ್‌ ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News