Job Alert: 56 ಸಾವಿರ ಸಂಬಳದ ಈ ಉದ್ಯೋಗಕ್ಕೆ ಇಂದೇ ಅರ್ಜಿ ಸಲ್ಲಿಸಿರಿ

NDMC recruitment 2024: ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Written by - Puttaraj K Alur | Last Updated : Apr 1, 2024, 09:21 PM IST
  • ನವದೆಹಲಿ ಮುನ್ಸಿಪಲ್​ ಕಾರ್ಪೊರೇಶನ್‌ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ
  • ಒಟ್ಟು 4 ಜೂನಿಯರ್ ರೆಸಿಡೆಂಟ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು
  • ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು, ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿರಿ
Job Alert: 56 ಸಾವಿರ ಸಂಬಳದ ಈ ಉದ್ಯೋಗಕ್ಕೆ ಇಂದೇ ಅರ್ಜಿ ಸಲ್ಲಿಸಿರಿ title=
Job Openings

NDMC recruitment 2024: ನವದೆಹಲಿ ಮುನ್ಸಿಪಲ್​ ಕಾರ್ಪೊರೇಶನ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 4 ಜೂನಿಯರ್ ರೆಸಿಡೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮಾರ್ಚ್​ 29ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.  

ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಡಿಎಸ್ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: ದಾವಣಗೆರೆಯಲ್ಲಿ ರಂಗೇರಿದ ಲೋಕಸಭಾ ಅಖಾಡ

ವಯೋಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಉದ್ಯೋಗದ ಸ್ಥಳ: ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ: ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ವೇತನ: ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹56,100 ಸಂಬಳ ನೀಡಲಾಗುತ್ತದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿರವರು ಜಯಂತಿಯಂದು ನಮನಗಳು

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ cphresidents@gmail.comಗೆ ಕಳುಹಿಸಬೇಕು. ಹೆಚ್ಚಿನ ಮಾಹಿತೆಗೆ ಆಸಕ್ತ ಅಭ್ಯರ್ಥಿಗಳು NDMCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News