CBSE 12th Result Topper List: ಈ ಬಾರಿ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಈ ಸಂಗತಿ ಹೇಳಲ್ಲ, ಯಾಕೆ ಇಲ್ಲಿ ತಿಳಿದುಕೊಳ್ಳಿ

CBSE 12th Result Topper Update: ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆ ಫಲಿತಾಂಶಗಳು ಪ್ರಕಟಗೊಂಡಿದ್ದು, ಫಲಿತಾಂಶದಲ್ಲಿ ಶೇ 6.80 ರಷ್ಟು ವಿದ್ಯಾರ್ಥಿಗಳು CBSE 12 ನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.  

Written by - Nitin Tabib | Last Updated : May 12, 2023, 12:14 PM IST
  • ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯನ್ನು ತಪ್ಪಿಸಲು, CBSE ತನ್ನ ವಿದ್ಯಾರ್ಥಿಗಳಿಗೆ ಮೊದಲ, ಎರಡನೇ ಮತ್ತು
  • ಮೂರನೇ ಶ್ರೇಯಾಂಕಗಳ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಳ್ಳದೆ ಇರಲು ನಿರ್ಧರಿಸಿದೆ.
  • ಅಂದರೆ ಸಿಬಿಎಸ್‌ಇ 12ನೇ ತರಗತಿಯಲ್ಲಿ ಅಗ್ರಸ್ಥಾನ ಪಡೆದವರು ಯಾರು ಎಂಬುದು ಗೊತ್ತಾಗುವುದಿಲ್ಲ.
  • ಮಂಡಳಿ ಕೈಗೊಂಡ ಈ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
CBSE 12th Result Topper List: ಈ ಬಾರಿ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಈ ಸಂಗತಿ ಹೇಳಲ್ಲ, ಯಾಕೆ ಇಲ್ಲಿ ತಿಳಿದುಕೊಳ್ಳಿ title=
ಸಿಬಿಎಸ್ಈ ಫಲಿತಾಂಶ

CBSE 12th Result Topper Name: CBSE ಮಂಡಳಿಯ 12 ನೇ ತರಗತಿಯ ಫಲಿತಾಂಶವನ್ನು ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಉಮಂಗ್ ಅಪ್ಲಿಕೇಶನ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. ನಿಮ್ಮ ಅಂಕಗಳು ಕಡಿಮೆಯಾಗಿದೆ ಎಂದು ನೀವು ಭಾವಿಸಿದರೆ, ನಿಮ್ಮ ಅಂಕಗಳನ್ನು ಹೆಚ್ಚಿಸಲು ನಿಮಗೆ ಅವಕಾಶವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಮಂಡಳಿಯು ಯಾವಾಗ ಸಿದ್ಧವಾಗಿದೆ ಎಂಬುದನ್ನು ತಿಳಿಯಪಡಿಸಲು ದಿನಾಂಕವನ್ನು ನೀಡಲಿದೆ.

ಈ ಬಾರಿ ಸಿಬಿಎಸ್‌ಇ 12ನೇ ಫಲಿತಾಂಶದಲ್ಲಿ ಒಟ್ಟು ಶೇ.87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಿರುವನಂತಪುರ ಶೇ.99.91 ರಷ್ಟು ಉತ್ತಮ ಸಾಧನೆ ಮಾಡಿದೆ. ಹುಡುಗರಿಗಿಂತ ಹುಡುಗಿಯರ ಫಲಿತಾಂಶ ಉತ್ತಮವಾಗಿದೆ. ಬಾಲಕಿಯರ ಫಲಿತಾಂಶವು ಹುಡುಗರಿಗಿಂತ ಶೇಕಡಾ 6 ರಷ್ಟು ಹೆಚ್ಚಾಗಿದೆ. ಬಾಲಕರ ಫಲಿತಾಂಶ ಶೇ.84.67 ಆಗಿದ್ದರೆ, ಬಾಲಕಿಯರ ಫಲಿತಾಂಶ ಶೇ.90.68 ಆಗಿದೆ.

CBSE 12 ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು ಶೇ. 1.36  ವಿದ್ಯಾರ್ಥಿಗಳು ಶೇ. 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಇದು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅಧ್ಯಯನದ ಮೇಲಿನ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರಾದೇಶಿಕವಾಗಿ ಹೇಳುವುದಾದರೆ, ಪಾಟ್ನಾದಲ್ಲಿ 85.47%, ಭೋಪಾಲ್‌ನಲ್ಲಿ 83.54%, ನೊಯ್ಡಾದಲ್ಲಿ 80.36%, ದೆಹಲಿ ಪಶ್ಚಿಮದಲ್ಲಿ 93.24% ಮತ್ತು ದೆಹಲಿ ಪೂರ್ವದಲ್ಲಿ 91.50% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ-CBSE 12 ನೇ ತರಗತಿ ಫಲಿತಾಂಶ ಪ್ರಕಟ , ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ

ಶೇ.6.80 ರಷ್ಟು ವಿದ್ಯಾರ್ಥಿಗಳು CBSE 12 ನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಇದೊಂದು ಅತ್ಯುತ್ತಮ ಸಾಧನೆಯಾಗಿದ್ದು, ವಿದ್ಯಾರ್ಥಿಗಳ ಮಾಡಿದ ಕಠಿಣ ಸಾಧನೆ ಮತ್ತು ಪರಿಶ್ರಮಕ್ಕೆ ಅಭಿನಂದನೆಗಳು.  CBSE 12 ನೇ ಫಲಿತಾಂಶದ ಲಿಂಕ್ ಡಿಜಿಲಾಕರ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ 6 ಸಂಖ್ಯೆಯ ಸೆಕ್ಯುರಿಟಿ ಪಿನ್ ಬಳಸಿ ತಮ್ಮ 12ನೇ ತರಗತಿಯ ಅಂಕ ಪಟ್ಟಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ-CBSC 12th Result Topper: ಸಿಬಿಎಸ್ಇ ಫಲಿತಾಂಶ ಪ್ರಕಟ, ಈ ಬಾರಿಯ ಟಾಪರ್ ಯಾರು?

ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯನ್ನು ತಪ್ಪಿಸಲು, CBSE ತನ್ನ ವಿದ್ಯಾರ್ಥಿಗಳಿಗೆ ಮೊದಲ, ಎರಡನೇ ಮತ್ತು ಮೂರನೇ ಶ್ರೇಯಾಂಕಗಳ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಳ್ಳದೆ ಇರಲು ನಿರ್ಧರಿಸಿದೆ. ಅಂದರೆ ಸಿಬಿಎಸ್‌ಇ 12ನೇ ತರಗತಿಯಲ್ಲಿ ಅಗ್ರಸ್ಥಾನ ಪಡೆದವರು ಯಾರು ಎಂಬುದು ಗೊತ್ತಾಗುವುದಿಲ್ಲ. ಮಂಡಳಿ ಕೈಗೊಂಡ ಈ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News