Lakhs ಬದಲಿಗೆ Lacs ಎಂದು ಬರೆದರೆ Cheque ಬೌನ್ಸ್ ಆಗುತ್ತಾ?

Cheque Bounce: ನಮ್ಮಲ್ಲಿ ಬಹುತೇಕ ಜನರು ಚೆಕ್ ನೀಡುವಾಗ ಲಕ್ಷ (lakhs) ಎಂದು ಬರೆಯುವ ಬದಲಿಗೆ ಲ್ಯಾಕ್ (Lacs) ಎಂದು ಬರೆಯುತ್ತಾರೆ. ಆದರೆ, ಇಂತಹ ಚೆಕ್ ಅನ್ನು ಬ್ಯಾಂಕ್ ಒಪ್ಪಿಕೊಳ್ಳುತ್ತಾ? 

Written by - Yashaswini V | Last Updated : Sep 14, 2023, 03:57 PM IST
  • ಚೆಕ್ ಭರ್ತಿ ಮಾಡುವಾಗ ನಮ್ಮಲ್ಲಿ ಬಹುತೇಕ ಜನರಿಗೆ ಕಾಡುವ ಸಾಮಾನ್ಯ ಗೊಂದಲ ಎಂದರೆ ಲಕ್ಷಗಳನ್ನು ಪದಗಳಲ್ಲಿ ಹೇಗೆ ಬರೆಯಬೇಕು?
  • ಅದರಲ್ಲೂ ಇಂಗ್ಲೀಷ್ ನಲ್ಲಿ ಇದನ್ನು ಬರೆಯುವಾಗ ಲಕ್ಷ (Lakhs) ಎಂದು ಬರೆಯಬೇಕೆ?
  • ಇಲ್ಲವೇ ಲ್ಯಾಕ್ (Lac) ಎಂದು ಬರೆಯಬೇಕೆ?
Lakhs ಬದಲಿಗೆ Lacs ಎಂದು ಬರೆದರೆ Cheque ಬೌನ್ಸ್ ಆಗುತ್ತಾ?  title=

Cheque Bounce: ನಮ್ಮಲ್ಲಿ ಬಹುತೇಕ ಮಂದಿ ಚೆಕ್‌ಗಳನ್ನು ಭರ್ತಿ ಮಾಡುವಾಗ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಇವು ಸಣ್ಣ ತಪ್ಪುಗಳೇ ಆದರೂ ಸಹ ಇದರಿಂದ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ದಂಡ ಪಾವತಿಗೂ ಕಾರಣವಾಗಬಹುದು. ಬ್ಯಾಂಕಿಂಗ್ ವ್ಯವಹಾರದಲ್ಲಿ ಒಂದು ಸಣ್ಣ ತಪ್ಪು ಕೂಡ ನಿಮ್ಮ ಹಣಕಾಸಿನ ವಹಿವಾಟಿಗೆ ಅಡ್ಡಿಯುಂಟು ಮಾಡುತ್ತದೆ. 

ಚೆಕ್ ಭರ್ತಿ ಮಾಡುವಾಗ ನಮ್ಮಲ್ಲಿ ಬಹುತೇಕ ಜನರಿಗೆ ಕಾಡುವ ಸಾಮಾನ್ಯ ಗೊಂದಲ ಎಂದರೆ ಲಕ್ಷಗಳನ್ನು ಪದಗಳಲ್ಲಿ ಬರೆಯುವಾಗ ಅದರಲ್ಲೂ ಇಂಗ್ಲೀಷ್ ನಲ್ಲಿ ಇದನ್ನು ಬರೆಯುವಾಗ ಲಕ್ಷ (Lakhs) ಎಂದು ಬರೆಯಬೇಕೆ? ಇಲ್ಲವೇ ಲ್ಯಾಕ್ (Lacs) ಎಂದು ಬರೆಯಬೇಕೆ ? ಎಂಬ ಅನುಮಾನ ಬಹುತೇಕ ಜನರಲ್ಲಿದೆ. 

ಇದನ್ನೂ ಓದಿ- Home Loan ಪಡೆಯುವವರಿಗೆ ಬಿಗ್ ಅಪ್‌ಡೇಟ್, ಬ್ಯಾಂಕ್‌ನ ಈ ತಪ್ಪಿಗೆ ಗ್ರಾಹಕರಿಗೆ ಪ್ರತಿದಿನ ಸಿಗುತ್ತೆ 5000 ರೂ.

ನಿಯಮ ಏನು? 
ಚೆಕ್‌ನಲ್ಲಿ ಲಕ್ಷದ ಕಾಗುಣಿತಕ್ಕೆ ಆರ್‌ಬಿಐ ಯಾವುದೇ ನಿಯಮಗಳನ್ನು ಮಾಡಿಲ್ಲ. ಆದರೆ, ಇಂಗ್ಲಿಷ್‌ನಲ್ಲಿ 1,00,000 ಸಂಖ್ಯೆಯನ್ನು ಪ್ರತಿನಿಧಿಸಲು ಲಕ್ಷ (Lakhs) ಎಂಬ ಪದವನ್ನು ಬಳಸಬೇಕು ಎಂದು ಬ್ಯಾಂಕ್‌ಗಳ ಮಾಸ್ಟರ್ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದರರ್ಥ ಅಧಿಕೃತ ಬ್ಯಾಂಕಿಂಗ್ ಭಾಷೆಯಲ್ಲಿ ನೀವು ಲಕ್ಷ (Lakhs) ಎಂದು ಉಲ್ಲೇಖಿಸಬೇಕು, ಲ್ಯಾಕ್ (Lacs) ಎಂದಲ್ಲ. 

ಇದನ್ನೂ ಓದಿ- ಈ ದಿನಾಂಕದಂದು ಹೊರ ಬೀಳಲಿದೆ ಡಿಎ ಹೆಚ್ಚಳದ ಅಧಿಸೂಚನೆ ! ಸರ್ಕಾರಿ ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ ಇಲ್ಲಿದೆ

ಚೆಕ್‌ನಲ್ಲಿ Lakhs ಬದಲಿಗೆ Lacs ಎಂದು ಬರೆದರೆ ಏನಾಗುತ್ತೆ? 
ನೀವು ಯಾರಿಗಾದರೂ ಚೆಕ್ ನೀಡುವಾಗ ಚೆಕ್‌ನಲ್ಲಿ Lakhs ಬದಲಿಗೆ Lacs ಎಂದು ಬರೆದರೆ ಅಂತಹ ಚೆಕ್ ಬೌನ್ಸ್ ಆಗಬಹುದು. ಹಾಗಾಗಿ, ನೀವು ಚೆಕ್ ಬರೆಯುವಾಗ ಇಂತಹ ತಪ್ಪು ಆಗದಂತೆ ನಿಗಾ ವಹಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News