Union Budget 2024: 'ಆಯುಷ್ಮಾನ್' ಲಾಭಾರ್ಥಿಗಳಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಈ ಘೋಷಣೆ ಸಾಧ್ಯತೆ!

Union Budget 2024: ಪ್ರಸ್ತುತ, ಯೋಜನೆಯಡಿಯಲ್ಲಿ, ಆಸ್ಪತ್ರೆಗೆ ದಾಖಲಾದಾಗ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಈಗ ಇರುವ ವಿಮಾ ರಕ್ಷಣೆಯನ್ನು ಶೇ.50ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. (Business News In Kannada / Budget 2024 News In Kannada)  

Written by - Nitin Tabib | Last Updated : Jan 12, 2024, 08:27 PM IST
  • 16 ರಿಂದ 59 ವರ್ಷ ವಯಸ್ಸಿನವರಿಗೆ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ಪಿಎಂಜೆಎವೈ ಯೋಜನೆಯನ್ನು ಆರಂಭಿಸಲಾಗಿದೆ.
  • ಈ ಯೋಜನೆಯಡಿ ಇದುವರೆಗೆ 25.21 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.
  • ಮುಂದಿನ ದಿನಗಳಲ್ಲಿ ಈ ಸಂಖ್ಯೆ 30 ಕೋಟಿ ಮೀರುವ ನಿರೀಕ್ಷೆ ಇದೆ.
Union Budget 2024: 'ಆಯುಷ್ಮಾನ್' ಲಾಭಾರ್ಥಿಗಳಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಈ ಘೋಷಣೆ ಸಾಧ್ಯತೆ! title=

ನವದೆಹಲಿ: ನೀವು ಕೂಡ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ನ ಫಲಾನುಭವಿಗಳಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಹೌದು, ಫೆಬ್ರವರಿ 1 ರಂದು ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ್‌ನ ಕೋಟ್ಯಂತರ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವಾರ್ದಿಯ ಪ್ರಕಾರ,, 'ಆಯುಷ್ಮಾನ್ ಭಾರತ್ ಯೋಜನೆ' ಅಡಿಯಲ್ಲಿ ಸರ್ಕಾರವು ಒದಗಿಸುವ ವಿಮಾ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಿದ್ಧತೆಗಳು ನಡೆಯುತ್ತಿವೆ.

ಪ್ರಸ್ತುತ ಯೋಜನೆಯ ಅಡಿ 5 ಲಕ್ಷದವರೆಗೆ ವಿಮಾ ಸೌಲಭ್ಯ ಲಭ್ಯವಿದೆ
ಪ್ರಸ್ತುತ, ಈ ಯೋಜನೆಯಡಿ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಈ ವಿಮಾ ರಕ್ಷಣೆಯನ್ನು ಶೇ.50ರಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ. ಈ ಕುರಿತು ನಿರ್ಧಾರ ಕೈಗೊಂಡ ಬಳಿಕ ಆಯುಷ್ಮಾನ್ ಭಾರತ್ ವ್ಯಾಪ್ತಿ ಹೆಚ್ಚಿಸುವ ಕುರಿತು ಬಜೆಟ್ ನಲ್ಲಿ ಘೋಷಣೆಯಾಗಬಹುದು. ಆದರೆ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಆಯುಷ್ಮಾನ್ ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಆರೋಗ್ಯ ನೀತಿ-2017 ರ ಅಡಿಯಲ್ಲಿ ಇದನ್ನು ಸೆಪ್ಟೆಂಬರ್ 23, 2018 ರಂದು ಆರಂಭಿಸಲಾಗಿದೆ.

ಇದನ್ನೂ ಓದಿ-Union Budget 2024: ತೆರಿಗೆ ಪಾವತಿದಾರರಿಗೆ ಹೊಸ ಸಂತಸದ ಸುದ್ದಿ! ಬಜೆಟ್ 2024 ರಲ್ಲಿ ₹50 ಸಾವಿರ ಹೆಚ್ಚುವರಿ ತೆರಿಗೆ ವಿನಾಯ್ತಿ!

25.21 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ
16 ರಿಂದ 59 ವರ್ಷ ವಯಸ್ಸಿನವರಿಗೆ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ಪಿಎಂಜೆಎವೈ ಯೋಜನೆಯನ್ನು ಆರಂಭಿಸಲಾಗಿದೆ.  ಈ ಯೋಜನೆಯಡಿ ಇದುವರೆಗೆ 25.21 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 30 ಕೋಟಿ ಮೀರುವ ನಿರೀಕ್ಷೆ ಇದೆ. ಇದರ ಅಡಿಯಲ್ಲಿ ಫಲಾನುಭವಿಗಳು 5.68 ಕೋಟಿಗೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ, ಆರೋಗ್ಯ ಸಂಬಂಧಿತ ಸೇವೆಗಳನ್ನು ಒದಗಿಸಲು 26,617 ಆಸ್ಪತ್ರೆಗಳ ಜಾಲವನ್ನು ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ-Tax Exemption Formula: NPS ಹೂಡಿಕೆಯ ಈ ಫಾರ್ಮುಲಾ ಅನುಸರಿಸಿದರೆ, ನಿಮ್ಮ ವೇತನದಲ್ಲಿ ತೆರಿಗೆ ಶೂನ್ಯ ಮಾಡಿಕೊಳ್ಳಬಹುದು!

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
> ಮೊದಲಿಗೆ ಆಯುಷ್ಮಾನ್ ಭಾರತ್ ವೆಬ್‌ಸೈಟ್ mera.pmjay.gov.in ಗೆ ಲಾಗಿನ್ ಮಾಡಿ.
> ಈಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪರದೆಯ ಮೇಲೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
> ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಬರುವ OTP ಅನ್ನು ನಮೂದಿಸಿ, ಅದು ನಿಮ್ಮನ್ನು PMJAY ಲಾಗಿನ್ ಪರದೆಗೆ ಕರೆದೊಯ್ಯುತ್ತದೆ.
> ಈಗ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಆಯ್ಕೆ ಮಾಡಿ.
> ನೀವು ಅರ್ಹತಾ ಮಾನದಂಡಗಳು, ಮೊಬೈಲ್ ಸಂಖ್ಯೆ, ಹೆಸರು, ರೇಷನ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ಹೇಗೆ ಪರಿಶೀಲಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
> ಇದೀಗ ನಿಮ್ಮ ಹೆಸರು ಅಲ್ಲಿ ಗೋಚರಿಸುತ್ತದೆ. 'ಕುಟುಂಬ ಸದಸ್ಯರು' ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಫಲಾನುಭವಿಯ ವಿವರಗಳನ್ನು ಪರಿಶೀಲಿಸಬಹುದು.
> ಇದರ ಹೊರತಾಗಿ, ಪಟ್ಟಿ ಮಾಡಲಾದ ಆರೋಗ್ಯ ರಕ್ಷಣೆ ಒದಗಿಸುವವರನ್ನು (EHCP) ಸಂಪರ್ಕಿಸುವ ಮೂಲಕ ಒಬ್ಬರು ಅರ್ಹತೆಯನ್ನು ಪರಿಶೀಲಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News