April 1 ರಿಂದ ಈ ಸಂಗತಿಗಳು ದುಬಾರಿಯಾಗಲಿವೆ, ಅಗ್ಗದ ದರದಲ್ಲಿ ಇಂದೇ ಖರೀದಿಸಿ!

Costly And Cheapest Tings: ಪ್ರತಿ ತಿಂಗಳ 1ನೇ ತಾರೀಖಿನಿಂದ ಪೆಟ್ರೋಲಿಯಂ ಕಂಪನಿಗಳು ಎಲ್ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಬರುವ ಏಪ್ರಿಲ್ 1 ರಿಂದ ಪೆಟ್ರೋಲಿಯಂ ಕಂಪನಿಗಳು ಎಲ್ಪಿಜಿ ಬೆಲೆಯಲ್ಲಿ ಏರಿಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.   

Written by - Nitin Tabib | Last Updated : Mar 29, 2023, 01:33 PM IST
  • 1 ಏಪ್ರಿಲ್ 2023 ರಿಂದ, ಅನೇಕ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ.5 ರಿಂದ ಶೇ.2.5 ರಷ್ಟು ಇಳಿಸಲಾಗಿದೆ.
  • ಇದು ಈ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಮೊಬೈಲ್ ಫೋನ್‌ಗಳು, ಕ್ಯಾಮೆರಾಗಳು, ಎಲ್‌ಇಡಿ ಟಿವಿಗಳು,
  • ಜೈವಿಕ ಅನಿಲಕ್ಕೆ ಸಂಬಂಧಿಸಿದ ವಸ್ತುಗಳು, ಎಲೆಕ್ಟ್ರಿಕ್ ಕಾರುಗಳು, ಆಟಿಕೆಗಳು, ಶಾಖ ಸುರುಳಿಗಳು, ವಜ್ರದ ಆಭರಣಗಳು, ಸೈಕಲ್‌ಗಳು ಇತ್ಯಾದಿಗಳು ಶಾಮೀಲಾಗಿವೆ.
April 1 ರಿಂದ ಈ ಸಂಗತಿಗಳು ದುಬಾರಿಯಾಗಲಿವೆ, ಅಗ್ಗದ ದರದಲ್ಲಿ ಇಂದೇ ಖರೀದಿಸಿ! title=
ಯಾವುದು ಅಗ್ಗ-ಯಾವುದು ದುಬಾರಿ?

Costlier and Cheapest Tings: ಮಾರ್ಚ್ 31 ರ ನಂತರ, ಹೊಸ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಆರಂಭವಾಗುತ್ತದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ಬದಲಾವಣೆಗಳು ಆಗಲಿವೆ. ಹಣದುಬ್ಬರದ ಹೊರೆ ಶ್ರೀಸಾಮಾನ್ಯನ ಮೇಲೆ ಹೆಚ್ಚಾಗಲಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ವಸ್ತುಗಳು ದುಬಾರಿಯಾಗಲಿವೆ. ಇದು ನೇರವಾಗಿ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ವಾಸ್ತವದಲ್ಲಿ, ಫೆಬ್ರವರಿ 1 ರಂದು ಮಂಡಿಸಲಾದ ಸಾಮಾನ್ಯ ಬಜೆಟ್‌ನಲ್ಲಿ ಅನೇಕ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳದಿಂದಾಗಿ, ಅವುಗಳ ಬೆಲೆ ಹೆಚ್ಚಾಗಬೇಕಾಗಿದೆ. ಹೊಸ ನಿಯಮಗಳು 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿವೆ.

ಯಾವುದು ಅಗ್ಗವಾಗಲಿದೆ
1 ಏಪ್ರಿಲ್ 2023 ರಿಂದ, ಅನೇಕ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ.5 ರಿಂದ ಶೇ.2.5 ರಷ್ಟು ಇಳಿಸಲಾಗಿದೆ. ಇದು ಈ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಮೊಬೈಲ್ ಫೋನ್‌ಗಳು, ಕ್ಯಾಮೆರಾಗಳು, ಎಲ್‌ಇಡಿ ಟಿವಿಗಳು, ಜೈವಿಕ ಅನಿಲಕ್ಕೆ ಸಂಬಂಧಿಸಿದ ವಸ್ತುಗಳು, ಎಲೆಕ್ಟ್ರಿಕ್ ಕಾರುಗಳು, ಆಟಿಕೆಗಳು, ಶಾಖ ಸುರುಳಿಗಳು, ವಜ್ರದ ಆಭರಣಗಳು, ಸೈಕಲ್‌ಗಳು ಇತ್ಯಾದಿಗಳು ಶಾಮೀಲಾಗಿವೆ.

ಈ ವಸ್ತುಗಳು ಕೂಡ ಅಗ್ಗವಾಗಲಿವೆ
ಏಪ್ರಿಲ್ 1 ರಿಂದ, ಚಿನ್ನ-ಬೆಳ್ಳಿ ಮತ್ತು ಆಭರಣಗಳು, ಪ್ಲಾಟಿನಂ, ಆಮದು ಮಾಡಿದ ಬಾಗಿಲುಗಳು, ಅಡುಗೆಮನೆಯ ಚಿಮಣಿಗಳು, ವಿದೇಶಿ ಆಟಿಕೆಗಳು, ಸಿಗರೇಟ್ ಮತ್ತು ಎಕ್ಸ್-ರೇ ಯಂತ್ರಗಳು ಇತ್ಯಾದಿಗಳು ಅಗ್ಗವಾಗಲಿವೆ. ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವರು ಈ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಘೋಷಣೆಯನ್ನು ಮಾಡಿದ್ದಾರೆ.

ಯುಪಿಐ ಮೂಲಕ ವಹಿವಾಟು ಕೂಡ ದುಬಾರಿಯಾಗಲಿದೆ
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮೂಲಕ ವ್ಯಾಪಾರಿ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಶಿಫಾರಸು ಮಾಡಿದೆ. ಈ ಬದಲಾವಣೆಯನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಸುತ್ತೋಲೆಯ ಪ್ರಕಾರ, ಏಪ್ರಿಲ್ 1 ರಿಂದ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇಕಡಾ 1.1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸೂಚಿಸಲಾಗಿದೆ. ಈ ಶುಲ್ಕವನ್ನು ವ್ಯಾಪಾರಿ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಹಣ ಪಾವತಿಸುವ ಗ್ರಾಹಕರು ನೀಡಬೇಕಾಗಲಿದೆ.

ಇದನ್ನೂ ಓದಿ-New Honda Activa: ಹೊಚ್ಚ ಹೊಸ 125 ಸಿಸಿ ಆಕ್ಟೀವಾ ಬಿಡುಗಡೆ ಮಾಡಿದೆ Honda, ಬೆಲೆ ಜಸ್ಟ್ 88 ಸಾವಿರ ಮಾತ್ರ!

ಎಲ್ಪಿಜಿ ಸಿಲಿಂಡರ್
ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ತಿಂಗಳ 1 ರಂದು ಪರಿಶೀಲಿಸಲಾಗುತ್ತದೆ. ಈ ಏಪ್ರಿಲ್ 1 ರಂದು ಪೆಟ್ರೋಲಿಯಂ ಕಂಪನಿಗಳು ಈ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿಂದೆ ಮಾರ್ಚ್ 1 ರಂದು ಕಂಪನಿಗಳು ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಿವೇ. ಈ ಹೆಚ್ಚಳದ ಬಳಿಕ  ದೆಹಲಿಯಲ್ಲಿ ಅದರ ಬೆಲೆ 1103 ರೂ.ಗೆ ತಲುಪಿದೆ. ಈ ಮೊದಲು ಸಿಲಿಂಡರ್ ಗಳು ರೂ.1053ಕ್ಕೆ ಲಭ್ಯವಾಗುತ್ತಿದ್ದವು. ತೈಲ ಕಂಪನಿಗಳು ಈ ಬಾರಿಯೂ ಸಿಲಿಂಡರ್ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ-DA Hike ಬಳಿಕ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆ ಶೇ.30ಕ್ಕೆ ತಲುಪುವುದು ಆಲ್ಮೋಸ್ಟ್ ಕನ್ಫರ್ಮ್!

ಕಾರುಗಳ ಬೆಲೆಯೂ ಹೆಚ್ಚಾಗಲಿದೆ
ನೀವು ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಏಪ್ರಿಲ್ 1 ರಿಂದ ಕಾರುಗಳು ದುಬಾರಿಯಾಗುವ ಸಾಧ್ಯತೆ ಇದೆ. ಟಾಟಾ ಮೋಟಾರ್ಸ್, ಹೀರೋ ಮೋಟೋ ಕಾರ್ಪ್ ಮತ್ತು ಮಾರುತಿ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಹೊಸ ಬೆಲೆಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ವಿವಿಧ ಮಾದರಿಗಳ ಆಧಾರದ ಮೇಲೆ ಕಂಪನಿಗಳು ಬೆಲೆಯನ್ನು ಹೆಚ್ಚಿಸಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   
 

Trending News