ಮನೆ-ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರದಲ್ಲಿ ಶೇ.40ರಷ್ಟು ಕುಸಿತ!

ಉಕ್ಕಿನ ಉತ್ಪನ್ನಗಳ ಮೇಲಿನ ಸರ್ಕಾರಿ ತೆರಿಗೆ, ಕಡಿಮೆಯಾದ ಸಾಗರೋತ್ತರ ಬೇಡಿಕೆ,  ಹೆಚ್ಚಿನ ಹಣದುಬ್ಬರ ಮತ್ತು ಇಂಧನ ವೆಚ್ಚಗಳು ಉಕ್ಕಿನ ಬೆಲೆ ಕುಸಿತಕ್ಕೆ ಕಾರಣ.

Written by - Puttaraj K Alur | Last Updated : Oct 21, 2022, 10:11 AM IST
  • ಕಳೆದ 6 ತಿಂಗಳಿನಲ್ಲಿ ಉಕ್ಕಿನ ಬೆಲೆ ಶೇ.40ರಷ್ಟು ಕುಸಿತ ಕಂಡಿದೆ
  • ಸದ್ಯದ ಮಾರುಕಟ್ಟೆಯಲ್ಲಿ ಪ್ರತಿ ಟನ್ ಉಕ್ಕಿಗೆ 57 ಸಾವಿರ ರೂ. ಇದೆ
  • ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಏಪ್ರಿಲ್‌ನಲ್ಲಿ ಪ್ರತಿ ಟನ್‌ಗೆ 78,800 ರೂ.ಇತ್ತು
ಮನೆ-ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರದಲ್ಲಿ ಶೇ.40ರಷ್ಟು ಕುಸಿತ! title=
ಉಕ್ಕಿನ ಬೆಲೆ ಶೇ.40ರಷ್ಟು ಕುಸಿತ!

ನವದೆಹಲಿ: ಮನೆ-ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ 6 ತಿಂಗಳಿನಲ್ಲಿ ಉಕ್ಕಿನ ಬೆಲೆ ಶೇ.40ರಷ್ಟು ಕುಸಿತ ಕಂಡಿದ್ದು, ಪ್ರತಿ ಟನ್‍ಗೆ 57 ಸಾವಿರ ರೂ. ತಲುಪಿದೆ.

ಸ್ಟೀಲ್‌ಮಿಂಟ್ ಪ್ರಕಾರ, ಶೇ.15ರಷ್ಟು ರಫ್ತು ಸುಂಕದ ಹಿನ್ನೆಲೆ ಕಳೆದ 6 ತಿಂಗಳುಗಳಲ್ಲಿ ರಫ್ತು ಆದೇಶಗಳನ್ನು ತಗ್ಗಿಸಿದ ಹಿನ್ನೆಲೆ ಉಕ್ಕಿನ ಬೆಲೆಗಳು ದೇಶೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. 2022ರ ಆರಂಭದಲ್ಲಿ, ಹಾಟ್ ರೋಲ್ಡ್ ಕಾಯಿಲ್(HRC) ಬೆಲೆಗಳು ಏರುಮುಖ ಪ್ರವೃತ್ತಿ ತೋರಿಸಲಾರಂಭಿಸಿದ್ದವು.

ಉಕ್ಕಿನ ಬೆಲೆಗಳಲ್ಲಿನ ಏರಿಳಿತ ರಿಯಲ್ ಎಸ್ಟೇಟ್ ಮತ್ತು ವಸತಿ, ಮೂಲಸೌಕರ್ಯ ಮತ್ತು ನಿರ್ಮಾಣ, ಆಟೋಮೊಬೈಲ್ ಮತ್ತು ಗ್ರಾಹಕ ಸರಕುಗಳಂತಹ ಉದ್ಯಮಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ಇದು ಬಳಕೆದಾರರ ಕೈಗಾರಿಕೆಗಳಿಗೆ ಕಳವಳದ ವಿಷಯವಾಗಿದೆ.

ಇದನ್ನೂ ಓದಿ: ಗೂಗಲ್ ಗೆ 1,338 ಕೋಟಿ ರೂ.ದಂಡ ವಿಧಿಸಿದ ಭಾರತದ ಸ್ಪರ್ಧಾತ್ಮಕ ಆಯೋಗ

ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಏಪ್ರಿಲ್‌ನಲ್ಲಿ ಪ್ರತಿ ಟನ್‌ಗೆ 78,800 ರೂ.ಇತ್ತು. ಶೇ.18ರಷ್ಟು GST ವಿಧಿಸಿದ ನಂತರ ಪ್ರತಿ ಟನ್‍ಗೆ ಸುಮಾರು 93 ಸಾವಿರ ರೂ. ಏರಿಕೆಯಾಗಿದೆ. ಸ್ಟೀಲ್‌ಮಿಂಟ್ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಅಂತ್ಯದಿಂದ ಬೆಲೆಗಳು ಕುಸಿಯಲು ಪ್ರಾರಂಭಿಸಿದವು ಮತ್ತು ಜೂನ್ ಅಂತ್ಯದ ವೇಳೆಗೆ ಪ್ರತಿ ಟನ್‌ಗೆ 60,200 ರೂ.ಗೆ ಇಳಿಕೆಯಾಗಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ನಿರಂತರ ಕುಸಿತ ಮುಂದುವರೆದು ಸೆಪ್ಟೆಂಬರ್ ಮಧ್ಯದ ವೇಳೆಗೆ ಪ್ರತಿ ಟನ್‌ಗೆ 57,000 ರೂ.ಗೆ ತಲುಪಿತು. ‘ಉಕ್ಕಿನ ಉತ್ಪನ್ನಗಳ ಮೇಲಿನ ಸರ್ಕಾರಿ ತೆರಿಗೆ, ಕಡಿಮೆಯಾದ ಸಾಗರೋತ್ತರ ಬೇಡಿಕೆ, ಹೆಚ್ಚಿನ ಹಣದುಬ್ಬರ ಮತ್ತು ಇಂಧನ ವೆಚ್ಚಗಳು’ ಉಕ್ಕಿನ ಬೆಲೆಗಳ ಕುಸಿತಕ್ಕೆ ಕಾರಣಗಳಾಗಿವೆ ಎಂದು ಸ್ಟೀಲ್‌ಮಿಂಟ್ ತಿಳಿಸಿದೆ.

ಮೇಲ್ನೋಟಕ್ಕೆ, ಮುಂದಿನ ತ್ರೈಮಾಸಿಕದಲ್ಲಿ ದೇಶೀಯ ಎಚ್‌ಆರ್‌ಸಿ ಬೆಲೆಗಳು ವ್ಯಾಪ್ತಿಗೆ ಒಳಪಡುತ್ತವೆ ಎಂದು ಅದು ಹೇಳಿದೆ. ಉಕ್ಕಿನ ರಫ್ತು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಮತ್ತು ದಾಸ್ತಾನು ಒತ್ತಡ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ 2 ತಿಂಗಳುಗಳಲ್ಲಿ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ. 

ಇದನ್ನೂ ಓದಿ: ಸಾಲ ತೀರಿಸಲು ಕೆಲಸಕ್ಕೆ ಸೇರಿದ ಪತ್ನಿ; ಮನಬಂದಂತೆ ಥಳಿಸಿ ವಿಡಿಯೋ ಮಾಡಿದ ಪತಿ..!

ಮೇ 21ರಂದು ಸರ್ಕಾರವು ಕಬ್ಬಿಣದ ಅದಿರಿನ ರಫ್ತು ಮೇಲಿನ ಸುಂಕವನ್ನು ಶೇ.50ವರೆಗೆ ಮತ್ತು ಕೆಲವು ಉಕ್ಕಿನ ಮಧ್ಯವರ್ತಿಗಳ ಮೇಲಿನ ಸುಂಕವನ್ನು ಶೇ.15ಕ್ಕೆ ಹೆಚ್ಚಿಸಿತು. ಉಕ್ಕಿನ ಉದ್ಯಮವು ಬಳಸುವ ಕೋಕಿಂಗ್ ಕಲ್ಲಿದ್ದಲು ಮತ್ತು ಫೆರೋನಿಕಲ್ ಸೇರಿದಂತೆ ಕೆಲವು ಕಚ್ಚಾ ವಸ್ತುಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಸಹ ಮನ್ನಾ ಮಾಡಲಾಗಿದೆ. ಈ ಕ್ರಮವು ದೇಶೀಯ ತಯಾರಕರಿಗೆ ಈ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News