RBI News: ಈ ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ. ದಂಡ ವಿಧಿಸಿದ ಆರ್‌ಬಿ‌ಐ, ಕಾರಣ ಏನ್ ಗೊತ್ತಾ!

RBI Fined Banks: ಆರ್‌ಬಿ‌ಐ ಡಿ‌ಸಿ‌ಬಿ ಬ್ಯಾಂಕ್ ಮತ್ತು ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್‌ಗೆ ಕೋಟ್ಯಾಂತರ ರೂ. ದಂಡ ವಿಧಿಸಿದೆ. 

Written by - Yashaswini V | Last Updated : Mar 20, 2024, 07:51 AM IST
  • ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಂಧನ್ ಬ್ಯಾಂಕ್‌ಗೆ ದಂಡ ವಿಧಿಸಿತ್ತು.
  • ಬ್ಯಾಂಕ್ ಆಫ್ ಇಂಡಿಯಾಗೆ ಆರ್‌ಬಿಐ 1.4 ಕೋಟಿ ರೂಪಾಯಿ ದಂಡ ವಿಧಿಸಿತ್ತು.
  • ಬಂಧನ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ 29.55 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
RBI News: ಈ ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ. ದಂಡ ವಿಧಿಸಿದ ಆರ್‌ಬಿ‌ಐ, ಕಾರಣ ಏನ್ ಗೊತ್ತಾ!  title=

RBI Fined DCB and Tamil Nadu Mercantile Banks: 'ಮುಂಗಡಗಳ ಮೇಲಿನ ಬಡ್ಡಿ ದರ'ಕ್ಕೆ ಸಂಬಂಧಿಸಿದ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿ‌ಐ) ಮಂಗಳವಾರ (ಮಾರ್ಚ್ 19) ಡಿಸಿಬಿ ಬ್ಯಾಂಕ್ ಮತ್ತು ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್‌ಗಳ ಮೇಲೆ  ಕೋಟ್ಯಾಂತರ ರೂಪಾಯಿ ದಂಡ ವಿಧಿಸಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರ್‌ಬಿಐ  ಡಿಸಿಬಿ ಬ್ಯಾಂಕ್‌ಗೆ 63.6 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಲ್ಲದೇ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಗೆ 1.31 ಕೋಟಿ ರೂ. ದಂಡ ವಿಧಿಸಿದೆ ಎಂದು ತಿಳಿಸಿದೆ.  ಬ್ಯಾಂಕ್ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದ ಮೇಲೆ ಪರಿಣಾಮ ಬೀರಬಾರದು ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ಉದ್ದೇಶವಾಗಿದೆ.

ಇದನ್ನೂ ಓದಿ- Meghana Foods: ಬೆಂಗಳೂರಿನ ಜನಪ್ರಿಯ ಮೇಘನಾ ಫುಡ್ಸ್ ರೆಸ್ಟೋರೆಂಟ್ ಮೇಲೆ ಐಟಿ ದಾಳಿ!

ಈ ಕುರಿತಂತೆ ಪ್ರತ್ಯೇಕ ಪ್ರಕಟಣೆ ಹೊರಡಿಸಿರುವ ಆರ್‌ಬಿ‌ಐ, ರಿಸರ್ವ್ ಬ್ಯಾಂಕ್ ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ಉಲ್ಲೇಖಿಸಿದೆ. 

ಡಿಸಿಬಿ ಬ್ಯಾಂಕ್‌ಗೆ 63.6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸೆಂಟ್ರಲ್ ಬ್ಯಾಂಕ್ ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್‌ಗೆ 'ಮುಂಗಡಗಳ ಮೇಲಿನ ಬಡ್ಡಿ ದರ' ಮತ್ತು 'ದೊಡ್ಡ ಸಾಲಗಳ ಮೇಲಿನ ಮಾಹಿತಿಯ ಕೇಂದ್ರ ಭಂಡಾರ (ಸೆಂಟ್ರಲ್ ರೆಪೊಸಿಟರಿ) ನೀಡಿದ ಕೆಲವು ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ರೂ 1.31 ಕೋಟಿ ದಂಡವನ್ನು ವಿಧಿಸಲಾಗಿದೆ ಎಂದು ತಿಳಿಸಿದೆ. 

ಇದನ್ನೂ ಓದಿ- Medicine Price : ಏಪ್ರಿಲ್ ಒಂದರಿಂದ ದುಬಾರಿಯಾಗಲಿದೆ ಈ 800 ಪ್ರಮುಖ ಔಷಧಿಗಳು!

ಗಮನಾರ್ಹವಾಗಿ, ಇತ್ತೀಚೆಗೆ ಕೆಲವು ಸೂಚನೆಗಳನ್ನು ಪಾಲಿಸದ ಖಾಸಗಿ ವಲಯದ ಬಂಧನ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ 29.55 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇದಲ್ಲದೆ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಂಧನ್ ಬ್ಯಾಂಕ್‌ಗೆ ದಂಡ ವಿಧಿಸಿತ್ತು. ಬ್ಯಾಂಕ್ ಆಫ್ ಇಂಡಿಯಾಗೆ ಆರ್‌ಬಿಐ 1.4 ಕೋಟಿ ರೂಪಾಯಿ ದಂಡ ವಿಧಿಸಿತ್ತು. 'ಠೇವಣಿಗಳ ಮೇಲಿನ ಬಡ್ಡಿ ದರ', 'ಬ್ಯಾಂಕ್‌ಗಳಲ್ಲಿನ ಗ್ರಾಹಕ ಸೇವೆ', 'ಸಾಲಗಳ ಮೇಲಿನ ಬಡ್ಡಿ ದರ' ಮತ್ತು ಕ್ರೆಡಿಟ್ ಮಾಹಿತಿ ಕಂಪನಿಗಳ ನಿಯಮಗಳ ನಿಬಂಧನೆಗಳ ಉಲ್ಲಂಘನೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News