RBI Update: ಮಹತ್ವದ ಆದೇಶ ಜಾರಿಗೊಳಿಸಿದ ಆರ್ಬಿಐ ಗವರ್ನರ್, ಇನ್ಮುಂದೆ ಎಲ್ಲಾ ಬ್ಯಾಂಕುಗಳು ಈ ಮಾಹಿತಿ ಒದಗಿಸುವುದು ಕಡ್ಡಾಯ

RBI Update: CIMS ಅನ್ನು ಸಕ್ರಿಯಗೊಳಿಸಿದ ಬಳಿಕ ಬಿಡುಗಡೆಯಾದ ಮೊದಲ ವಾರದ ವರದಿಯು ಕೇಂದ್ರೀಯ ಬ್ಯಾಂಕ್‌ನ ಸ್ವಂತ ಕಾರ್ಯಾಚರಣೆಗಳು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ಬೆಳವಣಿಗೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.  

Written by - Nitin Tabib | Last Updated : Jun 30, 2023, 05:24 PM IST
  • RBI ತನ್ನ ಮೊದಲ ಡೇಟಾ ಸಿಸ್ಟಮ್ ಆಗಿ 2002 ರಲ್ಲಿ CDBMS ಅನ್ನು ಅಳವಡಿಸಿಕೊಂಡಿದೆ.
  • ನಂತರ ನವೆಂಬರ್ 2004 ರಲ್ಲಿ, ಆರ್ಥಿಕತೆಯ ಮೇಲೆ ಕೇಂದ್ರೀಕರಿಸಿದ ಹೆಚ್ಚಿನ ಮಾಹಿತಿಯನ್ನು DBIE ಪೋರ್ಟಲ್‌ನಲ್ಲಿ ಇರಿಸಲಾಯಿತು.
  • ಕಾಲಾನಂತರದಲ್ಲಿ, ಈ ವ್ಯವಸ್ಥೆಯು ಆರ್ಥಿಕ ಮತ್ತು ಬ್ಯಾಂಕಿಂಗ್ ಡೇಟಾದ ತೀವ್ರ ನಿರ್ವಹಣೆ ಮತ್ತು ಸಂಸ್ಕರಣಾ ಕೇಂದ್ರವಾಗಿ ಮಾರ್ಪಟ್ಟಿತು.
  • RBI ಯ ಡೇಟಾ ಸಿಸ್ಟಮ್ DBIE ಮೇ 2023 ರಲ್ಲಿ 2.5 ಲಕ್ಷಕ್ಕೂ ಹೆಚ್ಚು ಹಿಟ್‌ಗಳನ್ನು ಪಡೆದುಕೊಂಡಿದೆ.
RBI Update: ಮಹತ್ವದ ಆದೇಶ ಜಾರಿಗೊಳಿಸಿದ ಆರ್ಬಿಐ ಗವರ್ನರ್, ಇನ್ಮುಂದೆ ಎಲ್ಲಾ ಬ್ಯಾಂಕುಗಳು ಈ ಮಾಹಿತಿ ಒದಗಿಸುವುದು ಕಡ್ಡಾಯ title=

Reserve Bank of India Update: ವಾಣಿಜ್ಯ ಬ್ಯಾಂಕ್‌ಗಳು ಮೊದಲು ತಮ್ಮ ತಮ್ಮ ದತ್ತಾಂಶಗಳನ್ನು ಸೆಂಟ್ರಲ್ ಬ್ಯಾಂಕ್‌ನ ಹೊಸ ಡೇಟಾ ಸಿಸ್ಟಮ್ ಆಗಿರುವ CIMS ನಲ್ಲಿ ಕಳುಹಿಸಲು ಪ್ರಾರಂಭಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್  ಹೇಳಿದ್ದಾರೆ. ವಾಣಿಜ್ಯ ಬ್ಯಾಂಕುಗಳ ಬಳಿಕ, ನಗರ ಸಹಕಾರಿ ಬ್ಯಾಂಕ್‌ಗಳು ಮತ್ತು ನಂತರ ಎನ್‌ಬಿಎಫ್‌ಸಿ ಕಂಪನಿಗಳು ಸಹ ಅದರ ಭಾಗವಾಗಲಿವೆ ಎಂದು ಅವರು ಹೇಳಿದ್ದಾರೆ. ಆರ್‌ಬಿಐ ಪ್ರಧಾನ ಕಛೇರಿಯಲ್ಲಿ ನಡೆದ 17ನೇ ಅಂಕಿಅಂಶ ದಿನದ ಸೆಮಿನಾರ್‌ನಲ್ಲಿ 'ಕೇಂದ್ರೀಕೃತ ಮಾಹಿತಿ ನಿರ್ವಹಣಾ ವ್ಯವಸ್ಥೆ' (ಸಿಐಎಂಎಸ್) ಅನ್ನು ಉದ್ಘಾಟಿಸಿದ ದಾಸ್, ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನ ಈ ಮುಂದಿನ ಪೀಳಿಗೆಯ ಡೇಟಾ ಸಿಸ್ಟಮ್‌ನ ಮಾಹಿತಿಯನ್ನು ಆರಂಭಿಕ ಹಂತದಲ್ಲಿ ಕಳುಹಿಸಲು ಪ್ರಾರಂಭಿಸಲಿವೆ ಎಂದು ಹೇಳಿದ್ದಾರೆ.

ಕ್ರಮೇಣ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳು (ಯುಎಸ್‌ಬಿ) ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಈ ವ್ಯವಸ್ಥೆಯಲ್ಲಿ ತಮ್ಮ ಡೇಟಾವನ್ನು ನೋಂದಾಯಿಸಲು ಆರಂಭಿಸಲಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. CIMS ಅನ್ನು ಸಕ್ರಿಯಗೊಳಿಸಿದ ಬಳಿಕ ಬಿಡುಗಡೆಯಾದ ಮೊದಲ ವಾರದ ವರದಿಯು ಕೇಂದ್ರೀಯ ಬ್ಯಾಂಕ್‌ನ ಸ್ವಂತ ಕಾರ್ಯಾಚರಣೆಗಳು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ಬೆಳವಣಿಗೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಜೂನ್ 23 ರಂದು ಕೊನೆಗೊಳ್ಳುವ ವಾರದವರೆಗೆ ಅದರ ಅಂಕಿಅಂಶಗಳನ್ನು ಈ ವ್ಯವಸ್ಥೆಯಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ-Stock Market Update: ಎಲ್ಲಾ ದಾಖಲೆಗಳನ್ನು ಮುರಿದ ಷೇರುಪೇಟೆ, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 64,718 ಅಂಕಗಳಿಗೆ ಮುಕ್ತಾಯ

ಹೊಸ ವ್ಯವಸ್ಥೆಯು ಸಾರ್ವಜನಿಕ ಬಳಕೆಗಾಗಿ ಹೆಚ್ಚಿನ ದತ್ತಾಂಶವನ್ನು ಪ್ರಕ್ರಿಯೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಬಾಹ್ಯ ಬಳಕೆದಾರರು ಅದರ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ವಿಶ್ಲೇಷಿಸಲು ಇದರಿಂದ ಸಾಧ್ಯವಾಗಲಿದೆ. ಇದರೊಂದಿಗೆ, ನಿಯಂತ್ರಿತ ಘಟಕಗಳು ತಮ್ಮ ಹಿಂದಿನ ಡೇಟಾಗೆ ಪ್ರವೇಶವನ್ನು ಹೊಂದುತ್ತವೆ ಮತ್ತು CIMS ನಲ್ಲಿ ಗುಣಮಟ್ಟದ ನಿಯತಾಂಕಗಳ ಮೇಲೆ ಅದೇ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಹೊಸ ಡೇಟಾ ವ್ಯವಸ್ಥೆಗೆ ಇನ್ನೂ ಕೆಲವು ಹೊಸ ಸೌಲಭ್ಯಗಳನ್ನು ಸೇರಿಸಲಾಗುವುದು ಎಂದು ದಾಸ್ ಹೇಳಿದ್ದಾರೆ. ಇದು ಇಮೇಲ್ ಆಧಾರಿತ ವರದಿ ಮಾಡುವ ಸೌಲಭ್ಯವನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ-Indian Economy: ವೇಗದಲ್ಲಿ ಚೀನಾಗಿಂತ ಮುಂದೆ ಇರಲಿದೆ ಭಾರತೀಯ ಅರ್ಥವ್ಯವಸ್ಥೆ, ಅಂದಾಜು ವ್ಯಕ್ತಪಡಿಸಿದ ಎಸ್ ಅಂಡ್ ಪಿ

RBI ತನ್ನ ಮೊದಲ ಡೇಟಾ ಸಿಸ್ಟಮ್ ಆಗಿ 2002 ರಲ್ಲಿ CDBMS ಅನ್ನು ಅಳವಡಿಸಿಕೊಂಡಿದೆ. ನಂತರ ನವೆಂಬರ್ 2004 ರಲ್ಲಿ, ಆರ್ಥಿಕತೆಯ ಮೇಲೆ ಕೇಂದ್ರೀಕರಿಸಿದ ಹೆಚ್ಚಿನ ಮಾಹಿತಿಯನ್ನು DBIE ಪೋರ್ಟಲ್‌ನಲ್ಲಿ ಇರಿಸಲಾಯಿತು. ಕಾಲಾನಂತರದಲ್ಲಿ, ಈ ವ್ಯವಸ್ಥೆಯು ಆರ್ಥಿಕ ಮತ್ತು ಬ್ಯಾಂಕಿಂಗ್ ಡೇಟಾದ ತೀವ್ರ ನಿರ್ವಹಣೆ ಮತ್ತು ಸಂಸ್ಕರಣಾ ಕೇಂದ್ರವಾಗಿ ಮಾರ್ಪಟ್ಟಿತು. RBI ಯ ಡೇಟಾ ಸಿಸ್ಟಮ್ DBIE ಮೇ 2023 ರಲ್ಲಿ 2.5 ಲಕ್ಷಕ್ಕೂ ಹೆಚ್ಚು ಹಿಟ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News