UPI ಬಳಕೆದಾರರಿಗೆ RBI ನೀಡಿದೆ ಬಿಗ್ ಅಪ್ಡೇಟ್ !

Digital Payments Awareness : ಫೆಬ್ರವರಿ 2022 ರಲ್ಲಿ ದಾಖಲಾದ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

Written by - Ranjitha R K | Last Updated : Mar 7, 2023, 10:27 AM IST
  • ಯುಪಿಐ ಪೇಮೆಂಟ್ ವ್ಯವಹಾರದ ಬಗ್ಗೆ ಹೊಸ ಅಪ್ಡೇಟ್
  • ವರ್ಷದ ಅವಧಿಯಲ್ಲಿ ಯುಪಿಐ ವಹಿವಾಟಿನಲ್ಲಿ ಶೇ.50ರಷ್ಟು ಏರಿಕೆ
  • 1000 ಕೋಟಿಗಳನ್ನು ದಾಟಿದ ಅಂಕಿ ಅಂಶ
UPI ಬಳಕೆದಾರರಿಗೆ RBI ನೀಡಿದೆ  ಬಿಗ್ ಅಪ್ಡೇಟ್ ! title=

Digital Payments Awareness : ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಪೇಮೆಂಟ್ ವ್ಯವಹಾರದ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಯುಪಿಐ ಮೂಲಕ ನಡೆಸಿರುವ ವಹಿವಾಟಿನಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಫೆಬ್ರವರಿ 2022 ರಲ್ಲಿ, ಈ ಸಂಖ್ಯೆ 24 ಕೋಟಿ ಆಗಿತ್ತು. ಇದೀಗ ಈ ಸಂಖ್ಯೆ  36 ಕೋಟಿಯನ್ನು ದಾಟಿದೆ ಎಂದು ಆರ್ ಬಿಐ ಹೇಳಿದೆ. 

1000 ಕೋಟಿಗಳನ್ನು ದಾಟಿದ ಅಂಕಿ ಅಂಶ : 
ಫೆಬ್ರವರಿ 2022 ರಲ್ಲಿ ದಾಖಲಾದ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಯುಪಿಐ ಮತ್ತು ಸಿಂಗಾಪುರದ ಪೆನೌ ನಡುವಿನ ಒಪ್ಪಂದದ ನಂತರ, ಇತರ ಹಲವು ದೇಶಗಳು ಪಾವತಿಗಾಗಿ ಇಂತಹ ಒಪ್ಪಂದವನ್ನು ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. 
 
 ಇದನ್ನೂ ಓದಿ : ಕೇವಲ 5 ಲಕ್ಷಕ್ಕೆ Mahindra XUV500 ಖರೀದಿಸಿರಿ, ಇಲ್ಲಿದೆ ನೋಡಿ ಮಾಹಿತಿ

ಯುಪಿಐ-ಪೆನೌ ಒಪ್ಪಂದಕ್ಕೆ ಸಹಿ ಹಾಕಿದ 10 ದಿನಗಳ ನಂತರ, ಕನಿಷ್ಠ ಅರ್ಧ ಡಜನ್ ದೇಶಗಳು ಈ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿವೆ. ಯುಪಿಐ-ಪೆನೌ ಒಪ್ಪಂದಕ್ಕೆ ಸಹಿ ಹಾಕಿ 10 ದಿನಗಳಾಗಿವೆ ಎಂದು ದಾಸ್ ಹೇಳಿದ್ದಾರೆ. ಈ ಅವಧಿಯಲ್ಲಿ ಸಿಂಗಾಪುರದಿಂದ ಹಣ ಕಳುಹಿಸಲು 120 ಹಾಗೂ ಸಿಂಗಾಪುರಕ್ಕೆ ಹಣ ಕಳುಹಿಸಲು 22 ವಹಿವಾಟು ನಡೆದಿದೆ.

 ಇದನ್ನೂ ಓದಿ :  Tata Cheapest Car: 1.5 ಲಕ್ಷ ರೂ.ಗೆ ಟಾಟಾದ ಅಗ್ಗದ ಕಾರನ್ನು ಮನೆಗೆ ತನ್ನಿ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News