ಈ ಬ್ಯಾಂಕ್ ಅನ್ನು ಮುಚ್ಚುವ ನಿರ್ಧಾರ ಮಾಡಿದ RBI!ಗ್ರಾಹಕರಿಗೆ ಸಿಗುವುದು 5 ಲಕ್ಷ ರೂ!

ಪರವಾನಗಿ ರದ್ದತಿಯೊಂದಿಗೆ ಸಹಕಾರಿ ಬ್ಯಾಂಕ್ ಅನ್ನು ತಕ್ಷಣವೇ ಬ್ಯಾಂಕಿಂಗ್ ವ್ಯವಹಾರದಿಂದ ನಿಷೇಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಈ ಬ್ಯಾಂಕ್ ನಲ್ಲಿ ಠೇವಣಿಗಳನ್ನು ಇರಿಸುವುದು ಅಥವಾ ಇಟ್ಟ ಠೇವಣಿಯನ್ನು ಹಿಂಪಡೆ ಯುವುದು  ಸಾಧ್ಯವಾಗುವುದಿಲ್ಲ. 

Written by - Ranjitha R K | Last Updated : Sep 26, 2023, 09:13 AM IST
  • ಮತ್ತೊಂದು ಬ್ಯಾಂಕ್‌ನ ಪರವಾನಗಿ ರದ್ದುಗೊಳಿಸಿದ ಆರ್‌ಬಿಐ
  • ಬ್ಯಾಂಕಿನಲ್ಲಿ ಬಂಡವಾಳದ ಕೊರತೆ
  • ಬ್ಯಾಂಕ್ ನಲ್ಲಿ ಠೇವಣಿ ಮಾಡಲು ಅಥವಾ ಹಣ ತೆಗೆಯಲು ಸಾಧ್ಯವಾಗುವುದಿಲ್ಲ
ಈ ಬ್ಯಾಂಕ್ ಅನ್ನು ಮುಚ್ಚುವ ನಿರ್ಧಾರ ಮಾಡಿದ RBI!ಗ್ರಾಹಕರಿಗೆ ಸಿಗುವುದು 5 ಲಕ್ಷ ರೂ!  title=

ಬೆಂಗಳೂರು : ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದೀಗ ಆರ್‌ಬಿಐ ಮತ್ತೊಂದು ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ.ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದರಿಂದ ಸಮಸ್ಯೆ ಎದುರಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂಬೈನ 'ದಿ ಕಪೋಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್' ಪರವಾನಗಿಯನ್ನು ರದ್ದುಗೊಳಿಸಿದೆ.

ಬ್ಯಾಂಕಿನಲ್ಲಿ ಬಂಡವಾಳದ ಕೊರತೆ : 
ಬ್ಯಾಂಕ್‌ ನ ಬಳಿ ಯಾವುದೇ ರೀತಿಯ ಬಂಡವಾಳ ಇಲ್ಲ. ಇನ್ನು ಯಾವುದೇ ರೀತಿಯಿಂದ ಗಳಿಕೆ ಸಾಧ್ಯವೂ ಇಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಈ ಕಾರಣದಿಂದಾಗಿ ಆರ್‌ಬಿಐ ಬ್ಯಾಂಕ್ ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದೆ. 

ಇದನ್ನೂ ಓದಿ : Creta, Seltos, Grand Vitara, Elevate.. ಯಾವುದು ಅಗ್ಗದ ಕಾರು? ಬೆಲೆಗಳಲ್ಲಿನ ವ್ಯತ್ಯಾಸ ಇಲ್ಲಿದೆ ನೋಡಿ

ಬ್ಯಾಂಕ್ ನಲ್ಲಿ ಠೇವಣಿ ಮಾಡಲು ಅಥವಾ ಹಣ ತೆಗೆಯಲು ಸಾಧ್ಯವಾಗುವುದಿಲ್ಲ : 
ಪರವಾನಗಿ ರದ್ದತಿಯೊಂದಿಗೆ ಸಹಕಾರಿ ಬ್ಯಾಂಕ್ ಅನ್ನು ತಕ್ಷಣವೇ ಬ್ಯಾಂಕಿಂಗ್ ವ್ಯವಹಾರದಿಂದ ನಿಷೇಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಈ ಬ್ಯಾಂಕ್ ನಲ್ಲಿ ಠೇವಣಿಗಳನ್ನು ಇರಿಸುವುದು ಅಥವಾ ಇಟ್ಟ ಠೇವಣಿಯನ್ನು ಹಿಂಪಡೆ ಯುವುದು  ಸಾಧ್ಯವಾಗುವುದಿಲ್ಲ. 

ಬ್ಯಾಂಕ್ ಮುಚ್ಚಲು ಆದೇಶ  : 
 ಆರ್ ಬಿಐ ಹೇಳಿಕೆಯ ಪ್ರಕಾರ, ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಹಕಾರ ಸಂಘಗಳ ಕೇಂದ್ರ ರಿಜಿಸ್ಟ್ರಾರ್ ಅವರಿಗೂ ಬ್ಯಾಂಕ್ ಮುಚ್ಚಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ನೀಡಲಾಗಿದೆ. 

ಗ್ರಾಹಕರಿಗೆ 5 ಲಕ್ಷ ರೂ. : 
ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಪಡೆಯಲು ಪ್ರತಿಯೊಬ್ಬ ಠೇವಣಿದಾರರು ಅರ್ಹರಾಗಿರುತ್ತಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ರೀತಿಯಾಗಿ, ಬ್ಯಾಂಕಿನ ಸುಮಾರು 96.09 ಪ್ರತಿಶತ ಠೇವಣಿದಾರರು ತಮ್ಮ ಸಂಪೂರ್ಣ ಠೇವಣಿ ಮೊತ್ತವನ್ನು ಡಿಐಸಿಜಿಸಿಯಿಂದ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ : ಅಗ್ಗದ ಮದ್ಯ ವಿಷಯದಲ್ಲಿ ಯಾವ ರಾಜ್ಯ ನಂಬರ್ 1 ಗೊತ್ತಾ? ಕರ್ನಾಟಕದಲ್ಲಿ ಎಷ್ಟು ತೆರಿಗೆ ಬೀಳುತ್ತೇ?

ಕಲರ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ನಿರ್ಬಂಧ :
ಇದಲ್ಲದೇ, ಅಹಮದಾಬಾದ್ ಮೂಲದ ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್‌ನ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರಲ್ಲಿ ಗ್ರಾಹಕರಿಗೆ ಕೇವಲ  50,000 ರೂ. ಮಾತ್ರ ಖಾತೆಯಿಂದ ತೆಗೆಯಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 25 ರಂದು ಬ್ಯಾಂಕಿಂಗ್ ವ್ಯವಹಾರವನ್ನು ಮುಚ್ಚುವುದರೊಂದಿಗೆ ತಾನು ವಿಧಿಸಿರುವ ನಿರ್ಬಂಧಗಳು ಜಾರಿಗೆ ಬಂದಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಆರು ತಿಂಗಳವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತವೆ.

ಬ್ಯಾಂಕ್ ಸಾಲ ನೀಡಲು ಸಾಧ್ಯವಿಲ್ಲ : 
ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ತನ್ನ ಪೂರ್ವಾನುಮತಿ ಇಲ್ಲದೆ ಸಾಲ ನೀಡುವಂತಿಲ್ಲ ಅಥವಾ ಹಳೆಯ ಸಾಲವನ್ನು ನವೀಕರಿಸುವಂತಿಲ್ಲ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಇದರ ಹೊರತಾಗಿ ಯಾವುದೇ ಹೂಡಿಕೆ ಮಾಡದಂತೆ ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಲಾಗಿದೆ.

ಗ್ರಾಹಕರು ಕೇವಲ 50,000 ರೂ. ಮಾತ್ರ ಪಡೆಯಬಹುದು : 
ಠೇವಣಿದಾರರು ಬ್ಯಾಂಕ್‌ನಲ್ಲಿನ ಇಟ್ಟಿರುವ ಒಟ್ಟು ಠೇವಣಿಗಳಿಂದ 50,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅನುಮತಿ ಇಲ್ಲ ಎನ್ನುವುದನ್ನು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ : ಸ್ಟೇಟ್ ಬ್ಯಾಂಕ್ ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರಿ ದಂಡ ವಿಧಿಸಿದ ಆರ್ಬಿಐ, ನೀವು ಗ್ರಾಹಕರಾಗಿದ್ದಾರೆ ಸುದ್ದಿ ತಪ್ಪದೆ ಓದಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News