ಎಂಟು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI:ಎಲ್ಲಾ ರೀತಿಯ ವ್ಯವಹಾರವೂ ನಿಷಿದ್ದ ! ಲಿಸ್ಟ್ ನಲ್ಲಿದೆ ಕರ್ನಾಟಕದ ಬ್ಯಾಂಕ್

RBI Cancelled Bank License:ಇತ್ತೀಚೆಗೆ, ಮಾರ್ಚ್ 31, 2023 ರಂದು ಕೊನೆಗೊಂಡ 2022-23 ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳ ಮೇಲೆ  ರಿಸರ್ವ್ ಬ್ಯಾಂಕ್ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಿದೆ

Written by - Ranjitha R K | Last Updated : May 25, 2023, 03:53 PM IST
  • ಅನೇಕ ಸಹಕಾರಿ ಬ್ಯಾಂಕ್‌ಗಳ ಪರವಾನಗಿ ರದ್ದು
  • ನಿಯಮ ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಕ್ರಮ
  • ಲಿಸ್ಟ್ ನಲ್ಲಿದೆ ಕರ್ನಾಟಕದ ಬ್ಯಾಂಕ್
ಎಂಟು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI:ಎಲ್ಲಾ ರೀತಿಯ ವ್ಯವಹಾರವೂ ನಿಷಿದ್ದ !  ಲಿಸ್ಟ್ ನಲ್ಲಿದೆ  ಕರ್ನಾಟಕದ ಬ್ಯಾಂಕ್  title=

RBI Cancelled Bank License : ಮಾರ್ಚ್ 31 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಿದೆ. ನೀವು ಸಹ ಈ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗೂ ತಿಳಿದಿರಬೇಕು. ಈ ಬ್ಯಾಂಕುಗಳ ವಿರುದ್ದ ರಿಸರ್ವ್ ಬ್ಯಾಂಕ್ ಕಠಿಣ ಕ್ರಮ ಕೈಗೊಂಡಿದೆ. ಆರ್‌ಬಿಐ ಈ ಬ್ಯಾಂಕ್‌ಗಳ ಪರವಾನಿಗೆ ರದ್ದು ಮಾಡಿದ್ದಲ್ಲದೆ,  ಕೆಲವು ಬ್ಯಾಂಕ್‌ಗಳ ಮೇಲೆ ಭಾರೀ ಮೊತ್ತದ ದಂಡವನ್ನೂ ವಿಧಿಸಿದೆ. 

ಈ ಬ್ಯಾಂಕ್ ಗಳ ವಿರುದ್ದ 114 ಬಾರಿ ದಂಡ ವಿಧಿಸಿದ RBI :
ಇತ್ತೀಚೆಗೆ, ಮಾರ್ಚ್ 31, 2023 ರಂದು ಕೊನೆಗೊಂಡ 2022-23 ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳ ಮೇಲೆ  ರಿಸರ್ವ್ ಬ್ಯಾಂಕ್ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲಾಗಿದೆ. ಆದರೆ ಈ ಬ್ಯಾಂಕ್‌ಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ  ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ : ಇಂದಿನ ಅಡಿಕೆ ದರ: ದಾವಣಗೆರೆ, ಮಂಗಳೂರು ಮತ್ತು ತುಮಕೂರಿನಲ್ಲಿ ಅಡಿಕೆ ಧಾರಣೆ

ನಿರ್ಲಕ್ಷ್ಯ ತೋರಿದ ಆರೋಪಗಳು :
ದ್ವಂದ್ವ  ನಿಯಮ ಮತ್ತು ದುರ್ಬಲ ಹಣಕಾಸು ನೀತಿಯನ್ನು ಈ ಸಹಕಾರಿ ಬ್ಯಾಂಕ್ ಗಳು ಅನುಸರಿಸುತ್ತಿದ್ದುದ್ದು ಮಾತ್ರವಲ್ಲದೆ, ಸ್ಥಳೀಯ ಮುಖಂಡರು ಈ ಸಹಕಾರಿ ಬ್ಯಾಂಕ್‌ಗಳ ವ್ಯವಹಾರದಲ್ಲಿ   ಹಸ್ತಕ್ಷೇಪ ನಡೆಸುತ್ತಿದ್ದರು ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸಹಕಾರಿ ಬ್ಯಾಂಕ್ ಗಳ ವಿರುದ್ಧ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಎಂಟು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. RBI ಯಾವ ಬ್ಯಾಂಕ್‌ಗಳ  ಪರವಾನಗಿ ರದ್ದು ಮಾಡಿದೆ  ನೋಡೋಣ. 

ಈ 8 ಬ್ಯಾಂಕ್‌ಗಳ ಲೈಸೆನ್ಸ್ ರದ್ದು : 
1. ಮುಧೋಳ ಸಹಕಾರಿ ಬ್ಯಾಂಕ್
2. ಮಿಲತ್ ಸಹಕಾರಿ ಬ್ಯಾಂಕ್
3. ಶ್ರೀ ಆನಂದ ಸಹಕಾರಿ ಬ್ಯಾಂಕ್
4. ರೂಪಾಯಿ ಸಹಕಾರಿ ಬ್ಯಾಂಕ್
5. ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
6. ಲಕ್ಷ್ಮಿ ಸಹಕಾರಿ ಬ್ಯಾಂಕ್ ಬ್ಯಾಂಕ್
7. ಸೇವಾ ವಿಕಾಸ್ ಕೋ-ಆಪರೇಟಿವ್ ಬ್ಯಾಂಕ್
8. ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್

ಇದನ್ನೂ ಓದಿ : ಸರ್ಕಾರಿ ನೌಕರರ ಬಾಕಿ ಉಳಿದಿರುವ ತುಟ್ಟಿಭತ್ಯೆ ಮೂರು ಕಂತುಗಳಲ್ಲಿ ಬಿಡುಗಡೆ ! ಇಂದೇ ಖಾತೆಗೆ ಬಿತ್ತು ಮೊದಲ ಕಂತು !

ಸಾಕಷ್ಟು ಬಂಡವಾಳದ ಕೊರತೆ, ಬ್ಯಾಂಕಿಂಗ್ ನಿಯಂತ್ರಣದ ನಿಯಮಗಳನ್ನು ಪಾಲಿಸದ ಕಾರಣ RBI ಮೇಲಿನ ಬ್ಯಾಂಕ್‌ಗಳ  ಪರವಾನಗಿ ರದ್ದು ಮಾಡಿದೆ. ಭವಿಷ್ಯದ ಗಳಿಕೆಯ  ಸಾಧ್ಯತೆ ಕೂಡಾ ಕಡಿಮೆ ಎನ್ನುವುದು ಮನದಟ್ಟಾದ ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.  ಕೊರತೆಯಂತಹ ಕಾರಣಗಳಿಂದ ಕೂಡ ರದ್ದುಗೊಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್‌ಬಿಐ ನಿಗಾ ಇಟ್ಟಿದೆ. ಕೇಂದ್ರೀಯ ಬ್ಯಾಂಕ್ 2021-22ರಲ್ಲಿ 12 ಸಹಕಾರಿ ಬ್ಯಾಂಕ್‌ಗಳು, 2020-21ರಲ್ಲಿ 3 ಸಹಕಾರಿ ಬ್ಯಾಂಕ್‌ಗಳು ಮತ್ತು 2019-20ರಲ್ಲಿ ಎರಡು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News