2,000 ರೂಪಾಯಿ ನೋಟಿನ ಬಗ್ಗೆ ಆರ್ ಬಿಐ ಹೊಸ ಅಪ್ಡೇಟ್ ! ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಸೆಪ್ಟೆಂಬರ್ 30ರ ನಂತರ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಆದರೆ, ಆರ್ ಬಿಐ ನೀಡಿರುವ ಗಡುವಿನ ನಂತರವೂ 2,000 ರೂಪಾಯಿ ನೋಟುಗಳು  ಮಾನ್ಯವಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಆರ್‌ಬಿಐ ಸ್ಪಷ್ಟವಾಗಿ ಹೇಳಿಲ್ಲ.

Written by - Ranjitha R K | Last Updated : Sep 26, 2023, 04:02 PM IST
  • ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ
  • 93 ರಷ್ಟು ನೋಟುಗಳನ್ನು ವಿನಿಮಯ ಅಥವಾ ಖಾತೆಗಳಲ್ಲಿ ಠೇವಣಿ
  • 2000 ರೂಪಾಯಿ ನೋಟುಗಳ ಬಗ್ಗೆ ಹೊರ ಬೀಳಲಿದೆ ಅಪ್‌ಡೇಟ್
2,000 ರೂಪಾಯಿ ನೋಟಿನ ಬಗ್ಗೆ ಆರ್ ಬಿಐ ಹೊಸ ಅಪ್ಡೇಟ್ ! ನೀವು  ತಿಳಿದುಕೊಳ್ಳಲೇ ಬೇಕಾದ ಮಾಹಿತಿ  title=

ಬೆಂಗಳೂರು : 2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ಗೆ ಠೇವಣಿ ಮಾಡಲು ನೀಡಿರುವ ಗಡುವ ಮುಗಿಯುತ್ತಾ ಬರುತ್ತಿದೆ. 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯುವುದರ ಜೊತೆಗೆ, ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಅವಕಾಶ ನೀಡಿದೆ. ಸೆಪ್ಟೆಂಬರ್ 30ರ ನಂತರ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಆದರೆ, ಆರ್ ಬಿಐ ನೀಡಿರುವ ಗಡುವಿನ ನಂತರವೂ 2,000 ರೂಪಾಯಿ ನೋಟುಗಳು  ಮಾನ್ಯವಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಆರ್‌ಬಿಐ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಸೆಂಟ್ರಲ್ ಬ್ಯಾಂಕ್ ಈ ನೋಟುಗಳನ್ನು ಚಲಾವಣೆಯಿಂದ ಸಾಧ್ಯವಾದಷ್ಟು ಬೇಗ ಹಿಂಪಡೆಯಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ.

ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ : 
2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಗೆ ಹಿಂದಿರುಗಿಸುವಂತೆ ಘೋಷಿಸಿದಾಗ,  ಬ್ಯಾಂಕ್‌ಗಳಿಗೆ ಹಿಂತಿರುಗಿದ ಅಥವಾ ಠೇವಣಿ ಮಾಡಿದ 2000 ರೂ ನೋಟುಗಳ ಪ್ರಮಾಣವನ್ನು ಆಧರಿಸಿ ಭವಿಷ್ಯದ  ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಹೇಳಿದ್ದರು. ಆಗಸ್ಟ್ 31, 2023 ರವರೆಗೆ ಬ್ಯಾಂಕ್ ಗೆ ಹಿಂದಿರುಗಿಸಲಾದ 2,000 ರೂಪಾಯಿ  ನೋಟುಗಳ ಒಟ್ಟು ಮೌಲ್ಯವು 3.32 ಲಕ್ಷ ಕೋಟಿ ರೂಪಾಯಿ ಎಂದು RBI ಸೇ.ಒಂದರಂದು ತಿಳಿಸಿದೆ.

ಇದನ್ನೂ ಓದಿ : Arecanut today price: ದಾವಣಗೆರೆ, ಮಂಗಳೂರು & ತುಮಕೂರಿನಲ್ಲಿ ಅಡಿಕೆ ಇಂದಿನ ದರ

93 ರಷ್ಟು ನೋಟುಗಳನ್ನು ವಿನಿಮಯ ಅಥವಾ ಖಾತೆಗಳಲ್ಲಿ ಠೇವಣಿ :
ಇದಲ್ಲದೆ, ಆಗಸ್ಟ್ 31ರ ನಂತರ ಕೇವಲ 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ಬ್ಯಾಂಕ್ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಹೇಳಿದೆ. ಅಂದರೆ ಮೇ 19, 203 ರ ಹೊತ್ತಿಗೆ, ಚಲಾವಣೆಯಲ್ಲಿದ್ದ 2,000 ರೂ ನೋಟುಗಳಲ್ಲಿ 93 ಪ್ರತಿಶತದಷ್ಟು ನೋಟಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಅಥವಾ ಖಾತೆಗಳಲ್ಲಿ ಠೇವಣಿ ಮಾಡುವ ಮೂಲಕ ಬ್ಯಾಂಕುಗಳಿಗೆ ಹಿಂತಿರುಗಿಸಲಾಗಿದೆ. 

2000 ರೂಪಾಯಿ ನೋಟುಗಳ ಬಗ್ಗೆ ಹೊರ ಬೀಳಲಿದೆ ಅಪ್‌ಡೇಟ್ :
ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ನೋಟುಗಳು ಠೇವಣಿಯಾಗಿರುವ ಸಾಧ್ಯತೆಯಿದೆ, ಇದರಿಂದಾಗಿ ಚಲಾವಣೆಯಲ್ಲಿರುವ ನೋಟುಗಳ ಮೊತ್ತವು ಮತ್ತಷ್ಟು ಕಡಿಮೆಯಾಗಬಹುದು. ಅಂದರೆ ಅಕ್ಟೋಬರ್ 1 ಅಥವಾ ನಂತರ RBI 2000 ರೂ ನೋಟುಗಳ ಬಗ್ಗೆ ಹೊಸ ಅಪ್ಡೇಟ್ ಅನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಚಲಾವಣೆಯಲ್ಲಿರುವ ಉಳಿದ 2000 ರೂ.ಗಳ ನೋಟುಗಳ ಬಗ್ಗೆ ಸ್ಪಷ್ಟನೆ ನೀಡಬಹುದು. 

ಇದನ್ನೂ ಓದಿ : ನಿರಂತರ ಕುಸಿತ ಕಾಣುತ್ತಿರುವ ಬಂಗಾರ ಬೆಲೆ ! ಬೆಳ್ಳಿ ಕೂಡಾ ಭಾರೀ ಅಗ್ಗ ! ಇಂದಿನ ಬೆಲೆ ಎಷ್ಟು ತಿಳಿಯಿರಿ

ಚಲಾವಣೆಯಲ್ಲಿದ್ದ 2 ಸಾವಿರ ನೋಟುಗಳ ಪೈಕಿ ಇಲ್ಲಿಯವರೆಗೆ ಶೇಕಡ 90ಕ್ಕೂ ಹೆಚ್ಚು ನೋಟುಗಳು ಬ್ಯಾಂಕ್ ಗೆ ವಾಪಸ್ ಬಂದಿವೆ. ಬ್ಯಾಂಕ್ ಗೆ ವಾಪಸ್ ಆಗದೆ ಉಳಿದ ನೋಟುಗಳು ಆ ದಿನಾಂಕದಿಂದ ಮಾನ್ಯವಾಗಿರುವುದಿಲ್ಲ ಎನ್ನುವುದನ್ನು ಕೂಡಾ ಆರ್ ಬಿಐ ಪ್ರಕಟಿಸಬಹುದು. ಆದರೂ ನಿಖರವಾದ ಉತ್ತರಕ್ಕಾಗಿ ಆರ್‌ಬಿಐ ಅಧಿಕೃತ ಪ್ರಕಟಣೆಗಾಗಿ ಕಾಯಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News