PPF, ಹಿರಿಯ ನಾಗರಿಕರ ಉಳಿತಾಯ, ಸುಕನ್ಯಾ ಸಮೃದ್ಧಿ ಯೋಜನೆಯ ಚಂದಾದಾರರಿಗೆ ಸಿಹಿ ಸುದ್ದಿ!

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಗಳು ಉತ್ತಮ ಆದಾಯವನ್ನು ನೀಡುತ್ತವೆ. ಹಾಗೆ ಈ ವರ್ಷ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ.

Written by - Channabasava A Kashinakunti | Last Updated : May 31, 2022, 11:16 AM IST
  • ಅಪಾಯ-ಮುಕ್ತ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದಾರಾ?
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ
  • ಈ ವರ್ಷ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ.
PPF, ಹಿರಿಯ ನಾಗರಿಕರ ಉಳಿತಾಯ, ಸುಕನ್ಯಾ ಸಮೃದ್ಧಿ ಯೋಜನೆಯ ಚಂದಾದಾರರಿಗೆ ಸಿಹಿ ಸುದ್ದಿ! title=

ನವದೆಹಲಿ : ನೀವು ಅಪಾಯ-ಮುಕ್ತ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ, ನಿಮಗೆ ಇಲ್ಲಿದೆ ಕೆಲವು ಹೂಡಿಕೆ ಮಾಡಲು ನಿಮ್ಮಗೆ ಅವಕಾಶ ಇಲ್ಲಿದೆ. ಸುರಕ್ಷಿತ ಹೂಡಿಕೆಗೆ ತುಂಬಾ ನಂಬಿಕಸ್ತ ಸಂಸ್ಥೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಗಳು ಉತ್ತಮ ಆದಾಯವನ್ನು ನೀಡುತ್ತವೆ. ಹಾಗೆ ಈ ವರ್ಷ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ.

ಈ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ ಮಾಡಿದ್ದಿಲ್ಲ. ಆದ್ರೆ, ಮಾಧ್ಯಮ ವರದಿಗಳ ಪ್ರಕಾರ, ಜೂನ್‌ನಲ್ಲಿ ಪಿಪಿಎಫ್, ಎನ್‌ಎಸ್‌ಸಿ ಅಥವಾ ಎಸ್‌ಎಸ್‌ವೈ ಸ್ಕೀಮ್ ಬಡ್ಡಿದರಗಳನ್ನು ಹೆಚ್ಚಿಸಲು ಸರ್ಕಾರವು ಪರಿಗಣಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ.

ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಗಾಗಿ ವಾರ್ಷಿಕ ಕ್ರಮವಾಗಿ ಶೇ. 7.1  ಮತ್ತು ಶೇ. 6.8 ರಷ್ಟು ಬಡ್ಡಿ ದರವು ಮುಂದುವರಿಯುತ್ತದೆ.

ಒಂದು ವರ್ಷದ ಅವಧಿಯ ಠೇವಣಿ ಯೋಜನೆಯು ಶೇ. 5.5 ರ ಬಡ್ಡಿದರವನ್ನು ಮುಂದುವರಿಸುತ್ತದೆ. ಆದರೆ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯು ಶೇ. 7.6 ಬಡ್ಡಿದರವನ್ನು ಹೊಂದಿರುತ್ತದೆ.

ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವರ್ಷಕ್ಕೆ ಶೇ.4 ರಷ್ಟು ಉಳಿಸಿಕೊಳ್ಳಲಾಗುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC), KVP, ಸಮಯ-ಠೇವಣಿಗಳು, ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY) ಇತ್ಯಾದಿಗಳು ಜುಲೈ-ಆಗಸ್ಟ್-ಸೆಪ್ಟೆಂಬರ್ ತ್ರೈಮಾಸಿಕದ ಹಿಂದಿನ ತ್ರೈಮಾಸಿಕದ ಅದೇ ಬಡ್ಡಿದರವನ್ನು ಉಳಿಸಿಕೊಂಡಿವೆ. 

ವಿವಿಧ ರಾಷ್ಟ್ರೀಯ (ಸಣ್ಣ) ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಇಲ್ಲಿವೆ.

ಪೋಸ್ಟ್ ಆಫೀಸ್ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿ ದರಗಳು

- ಸಾರ್ವಜನಿಕ ಭವಿಷ್ಯ ನಿಧಿ: ಶೇ.7.1 ರಷ್ಟು

- ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ಶೇ.6.8 ರಷ್ಟು

- ಸುಕನ್ಯಾ ಸಮೃದ್ಧಿ ಯೋಜನೆ: ಶೇ.7.6 ರಷ್ಟು

- ಕಿಸಾನ್ ವಿಕಾಸ್ ಪತ್ರ: ಶೇ.6.9 ರಷ್ಟು

- ಉಳಿತಾಯ ಠೇವಣಿ: ಶೇ.4 ರಷ್ಟು

- 1-ವರ್ಷದ ಸಮಯದ ಠೇವಣಿ: ಶೇ.5.5 ರಷ್ಟು

- 2-ವರ್ಷದ ಸಮಯದ ಠೇವಣಿ: ಶೇ.5.5 ರಷ್ಟು

- 3-ವರ್ಷದ ಸಮಯದ ಠೇವಣಿ: ಶೇ.5.5 ರಷ್ಟು

- 5 ವರ್ಷದ ಸಮಯದ ಠೇವಣಿ: ಶೇ.6.7 ರಷ್ಟು

- 5 ವರ್ಷದ ಮರುಕಳಿಸುವ ಠೇವಣಿ: ಶೇ.5.8 ರಷ್ಟು

- 5-ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ.7.4 ರಷ್ಟು

- 5-ವರ್ಷದ ಮಾಸಿಕ ಆದಾಯ ಖಾತೆ: ಶೇ.6.6 ರಷ್ಟು

ಇದನ್ನೂ ಓದಿ : LIC Dividend: ಎಲ್ಐಸಿ ಷೇರು ಹೊಂದಿರುವವರಿಗೊಂದು ಸಂತಸದ ಸುದ್ದಿ, ಡಿವಿಡೆಂಡ್ ಘೋಷಣೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News