PPF: ಕೋಟ್ಯಾಂತರ ಗ್ರಾಹಕರಿಗೆ ಈ ದಿನ ಸಿಗಲಿದೆ ಶುಭ ಸುದ್ಧಿ

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ಹೂಡಿಕೆದಾರರಿಗೆ ಬಹುಮುಖ್ಯ ಮಾಹಿತಿ ಇದೆ. ಹಣಕಾಸು ಸಚಿವಾಲಯವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಶೀಲಿಸಲಿದ್ದು, ಈ ಬಾರಿ ಪಿಪಿಎಫ್‌ನ ಬಡ್ಡಿ ದರ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 30, 2023, 04:51 PM IST
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್‌ನಲ್ಲಿ 7.10 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತಿದೆ.
  • ಕಳೆದ 12 ತ್ರೈಮಾಸಿಕಗಳಿಂದ ಸರ್ಕಾರವು ಪಿಪಿಎಫ್‌ನ ಬಡ್ಡಿದರದಲ್ಲಿ ಯಾವುದೇ ಮಾಡಲಾಗಿಲ್ಲ.
  • ಆದರೆ, ಈ ವರ್ಷ ಮಾರ್ಚ್ 31 ರಂದು ಹಣಕಾಸು ಸಚಿವಾಲಯ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಸಿತ್ತು.
PPF: ಕೋಟ್ಯಾಂತರ ಗ್ರಾಹಕರಿಗೆ ಈ ದಿನ ಸಿಗಲಿದೆ ಶುಭ ಸುದ್ಧಿ  title=

PPF Latest Update: ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ಅತ್ಯುತ್ತಮ ಆಯ್ಕೆಯಾಗಿದೆ. ನೀವೂ ಕೂಡ ಪಿ‌ಪಿ‌ಎಫ್ ಹೂಡಿಕೆದಾರರಾಗಿದ್ದರೆ ಶೀಘ್ರದಲ್ಲೇ ನಿಮಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. 

ತ್ರೈಮಾಸಿಕವಾಗಿ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರವನ್ನು ಪರಿಶೀಲಿಸುವ ಹಣಕಾಸು ಸಚಿವಾಲಯ, ಮುಂದಿನ ತಿಂಗಳು ಅಂದರೆ ಜೂನ್ 30 ರಂದು, ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿಯನ್ನು ಹಣಕಾಸು ಸಚಿವಾಲಯವು ಪ್ರಕಟಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ತ್ರೈಮಾಸಿಕದಲ್ಲಿ ಹಣಕಾಸು ಸಚಿವಾಲಯವು ಪಿಪಿಎಫ್‌ನ ಬಡ್ಡಿ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ನಿಮಗೆ ಗೊತ್ತಿಲ್ಲದೇ ನಿಮ್ಮ ಪಿಪಿಎಫ್ ಖಾತೆ ಕ್ಲೋಸ್ ಆಗಿರಬಹುದು ! ಇಂದೇ ಚೆಕ್ ಮಾಡಿಕೊಳ್ಳಿ

ವಾಸ್ತವವಾಗಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್‌ನಲ್ಲಿ 7.10 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತಿದೆ. ಕಳೆದ 12 ತ್ರೈಮಾಸಿಕಗಳಿಂದ ಸರ್ಕಾರವು ಪಿಪಿಎಫ್‌ನ ಬಡ್ಡಿದರದಲ್ಲಿ ಯಾವುದೇ  ಮಾಡಲಾಗಿಲ್ಲ. ಆದರೆ, ಈ ವರ್ಷ ಮಾರ್ಚ್ 31 ರಂದು ಹಣಕಾಸು ಸಚಿವಾಲಯ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಸಿತ್ತು.  ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇಕಡ ಅರ್ಧದಷ್ಟು ಹೆಚ್ಚಿಸಿತ್ತು. ಹಾಗಾಗಿ, ಈ ತ್ರೈಮಾಸಿಕದಲ್ಲಿ ಪಿ‌ಪಿ‌ಎಫ್ ಬಡ್ಡಿದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. 

ಇದನ್ನೂ ಓದಿ- Good News: ಖಾಸಗಿ ಉದ್ಯೋಗಿಗಳಿಗೆ 25 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ ನೀಡಿದ ಮೋದಿ ಸರ್ಕಾರ!

ಪಿ‌ಪಿ‌ಎಫ್ ಬಡ್ಡಿದರ 7.6% ಹೆಚ್ಚಾಗುವ ನಿರೀಕ್ಷೆ: 
ಹೂಡಿಕೆದಾರರು, ಒಂದು ವರ್ಷದಲ್ಲಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಮಾತ್ರವಲ್ಲ, ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ, ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀವು ವಿನಾಯಿತಿಯನ್ನೂ ಪಡೆಯಬಹುದು. ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಹಣಕಾಸು ಸಚಿವಾಲಯವು  ಈ ಬಾರಿ ಪಿಪಿಎಫ್‌ನ ಬಡ್ಡಿ ದರವನ್ನು  7.1 ಶೇಕಡಾದಿಂದ 7.6 ಶೇಕಡಾದಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News